More

    ಶ್ರಮಬಿಂದು ಸಾಗರ ಬ್ಯಾರೇಜ್ ಜಲಾವೃತ !

    ಚಿಕ್ಕಪಡಸಲಗಿ : ಮಹಾರಾಷ್ಟ್ರದ ಕೃಷ್ಣಾ ಜಲಾಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗ್ರಾಮದ ಚಿಕ್ಕಪಡಸಲಗಿ ಶ್ರಮಬಿಂದು ಸಾಗರಕ್ಕೆ ಅಂದಾಜು 1 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

    ಅಂದಾಜು 4 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಈ ಬ್ಯಾರೇಜ್ ಬೇಸಿಗೆಯಲ್ಲಿ ನೀರು ಸಂಗ್ರಹಿಸುತ್ತಾರೆ.

    ಜಮಖಂಡಿ ನಗರ ಸೇರಿ ನದಿ ತೀರದ ಗ್ರಾಮಗಳಾದ ಚಿಕ್ಕಪಡಸಲಗಿ, ಆಲಗೂರ, ನಾಗನೂರ, ಹಿರೇಪಡಸಲಗಿ, ಜಂಬಗಿ, ಶೂರ್ಪಾಲಿ, ಮುತ್ತೂರ, ಕಂಕಣವಾಡಿ, ಮೈಗೂರ, ಅಥಣಿ ತಾಲೂಕಿನ ಗ್ರಾಮಗಳಾದ ಸವದಿ, ಝುಂಜರವಾಡ ಮತ್ತಿತರ ಗ್ರಾಮಗಳಿಗೆ ಈ ಬ್ಯಾರೇಜ್ ನೀರೇ ಜೀವಜಲವಾಗಿರುತ್ತದೆ.

    ಈ ಬೇಸಿಗೆಯಲ್ಲಿ ಕೃಷ್ಣೆಯ ಒಡಲು ನೀರಿಲ್ಲದೆ ಬರಿದಾಗಿತ್ತು. ಇದರಿಂದ ರೈತರ ಬೆಳೆಗಳು ನೀರಿನಲ್ಲದೆ ಒಣಗುತ್ತಿದ್ದವು. ಸದ್ಯ ಕೃಷ್ಣಾ ಕಣಿವೆಯಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ನೀರಿನ ಹರಿವಿನಲ್ಲಿ ಏರಿಕೆಯಾಗಿದೆ.

    ಶುಕ್ರವಾರದ ಹೊತ್ತಿಗೆ ಆಲಮಟ್ಟಿ ಡೆಡ್ ಸ್ಟೋರೇಜ್‌ನಲ್ಲಿ ನದಿಗೆ ನೀರು ತುಂಬಿ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ ಗುರುವಾರ ರಾತ್ರಿ ಸಂಪೂರ್ಣ ಜಲಾವೃತಗೊಂಡಿದೆ.

    ಮಹಾರಾಷ್ಟ್ರದ ಜಲಾಶಯಗಳಿಂದ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿಬಿಡಲಾಗಿದೆ. ಹರಿದು ಬರುವ ನದಿ ನೀರು ಕಲ್ಮಶವಾಗಿರುತ್ತದೆ. ಆದ್ದರಿಂದ ನದಿ ತೀರದ ಸಾರ್ವಜನಿಕರು ನೀರನ್ನು ಕಾಯಿಸಿ, ಸೋಸಿ ಕುಡಿಯಬೇಕು. ಅಲ್ಲದೆ ಮಿತವಾಗಿ ಬಳಸಬೇಕು. ಸಾರ್ವಜನಿಕರು ನದಿ ಪಾತ್ರಕ್ಕೆ ಇಳಿಯಬಾರದು ಎಂದು ನದಿ ತೀರದ ಗ್ರಾಮಗಳಲ್ಲಿ ಸೂಚನೆ ನೀಡಲಾಗಿದೆ.

    ಸದಾಶಿವ ಮಕ್ಕೊಜಿ, ತಹಸೀಲ್ದಾರ್ ಜಮಖಂಡಿ

    ಕಳೆದ ತಿಂಗಳು ನಮ್ಮ ಕಷ್ಣಾ ನದಿ ಸಂಪೂರ್ಣ ಬತ್ತಿದ್ದರಿಂದಾಗಿ ಜಲಚರ ಹಾಗೂ ಬೆಳೆಗಳು ನೀರಿಲ್ಲದೆ ಒಣಗುವ ಹಂತಕ್ಕೆ ತಲುಪಿದ್ದವು. ಈಗ ಮಹಾರಾಷ್ಟ್ರದಲ್ಲಿ ಅಪಾರ ಮಳೆಯಾಗಿ ಕೃಷ್ಣೆಗೆ ಹರಿದು ಬರುತ್ತಿದ್ದು, ಚಿಕ್ಕಪಡಸಲಗಿ ಶ್ರಮಬಿಂದು ಸಾಗರ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿರುವುದು ಸಂತಸ ತಂದಿದೆ.

    ಧರೇಪ್ಪ ದಾನಗೌಡ ಚಿಕ್ಕಪಡಸಲಗಿ ಗ್ರಾಮಸ್ಥ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts