More

  ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ

  ಗೋಣಿಕೊಪ್ಪ: ಪೇಜಾವರ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿ ನಿಧನಕ್ಕೆ ಇಲ್ಲಿನ ಚಿನ್ನ-ಬೆಳ್ಳಿ ವರ್ತಕರ ಸಂಘದ ಸಭಾಂಗಣದಲ್ಲಿ ಮಂಗಳವಾರ ನುಡಿ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಲಾವಿದ ಬಿ. ಆರ್. ಸತೀಶ್ ಅವರ ಕುಂಚದಿಂದ ಮೂಡಿಬಂದ ಶ್ರೀಗಳ ಭಾವಚಿತ್ರಕ್ಕೆ ಪುಷ್ಫಾರ್ಚನೆ ಸಲ್ಲಿಸಲಾಯಿತು.

  ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋದಸ್ವರೂಪನಂದಜಿ, ಹಿರಿಯರಾದ ಡಾ. ಕಾಳಿಮಾಡ ಶಿವಪ್ಪ, ಇಟ್ಟೀರ ಬಿದ್ದಪ್ಪ, ಬಾಲಕೃಷ್ಣ ರೈ ಮಾತನಾಡಿ ಕಾವೇರಿ ದಸರಾ ಸಮಿತಿಯ ಬೆಳ್ಳಿ ಹಬ್ಬ, ಉಮಾಮಹೇಶ್ವರಿ ಭಜನಾ ಮಂಡಳಿ ಬೆಳ್ಳಿಹಬ್ಬ, ವಿಶ್ವ ಹಿಂದು ಪರಿಷತ್ ಕಾರ್ಯಕ್ರಮ, ಸಾಯಿಶಂಕರ್ ವಿದ್ಯಾ ಸಂಸ್ಥೆ ವಾರ್ಷಿಕೋತ್ಸವಕ್ಕೆ ಆಗಮಿಸಿದ್ದನ್ನು ನೆನಪಿಸಿಕೊಂಡು ಸಂತಾಪ ಸೂಚಿಸಿದರು.
  ಡಾ. ಚಂದ್ರಶೇಖರ್, ಎಂ.ಜಿ. ಮೋಹನ್, ಕಡೇಮಾಡ ಸುನಿಲ್ ಮಾದಪ್ಪ, ಎಂ. ಎಂ. ಗಣಪತಿ, ಪ್ರಮೋದ್ ಕಾಮತ್, ಸುಮಿ ಸುಬ್ಬಯ್ಯ ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts