More

    2000 ರೂ. ಕೊಟ್ಟರು ಮಲ್ಲಿಗೆ ಸಿಗ್ತಿಲ್ಲ

    ಉಡುಪಿ/ಮಂಗಳೂರು: ಶಂಕರಪುರ ಮಲ್ಲಿಗೆ ಕಟ್ಟೆಯಲ್ಲಿ 1250 ರೂ. ಗರಿಷ್ಠ ದರದಲ್ಲಿ ಕಳೆದ ಒಂದು ವಾರದಿಂದ ಖರೀದಿ ಆಗುತ್ತಿದ್ದು, ಮಾರುಕಟ್ಟೆಯಲ್ಲಿ 2000 ರೂ.ಗೂ ಅಧಿಕ ಬೆಲೆಗೆ ಮಾರಾಟವಾಗುತ್ತಿದೆ. ಆದರೂ ಮಾರುಕಟ್ಟೆಯಲ್ಲಿ ಮಲ್ಲಿಗೆ ಸಿಗುತ್ತಿಲ್ಲ.

    ಕಳೆದ ಕೆಲವು ದಿವಸಗಳಿಂದ ಬೆಳಗಿನ ಜಾವ ಇಬ್ಬನಿ ಬೀಳುತ್ತಿರುವುದರಿಂದ ಮಲ್ಲಿಗೆ ಇಳುವರಿ ಕುಸಿದಿದ್ದು, ಬಿಸಿಲು ಹೆಚ್ಚಾದಂತೆ ಇಳುವರಿ ಹೆಚ್ಚುವ ನಿರೀಕ್ಷೆ ಇದೆ. ಪ್ರಸ್ತುತ ಪ್ರತಿ ಬೆಳೆಗಾರರಿಗೆ ಒಂದರಿಂದ ಎರಡು ಚೆಂಡು ಮಾತ್ರ ಮಲ್ಲಿಗೆ ಲಭಿಸುತ್ತಿದೆ. ಹೀಗಾಗಿ ಮಾರುಕಟ್ಟೆಗೆ ಪೂರೈಕೆ ಕೊರತೆಯಾಗಿದೆ ಎಂದು ಮಲ್ಲಿಗೆ ಬೆಳೆಗಾರ ಕೆ.ಆರ್.ಪಾಟ್ಕರ್ ತಿಳಿಸುತ್ತಾರೆ.

    ಉಡುಪಿಯಲ್ಲಿ ಜಾಜಿ 630 ರೂ.ಗೆ ಕಟ್ಟೆಯಲ್ಲಿ ಹಾಗೂ 800 ರೂ.ಗೆ ಮಾರುಕಟ್ಟೆಯಲ್ಲಿ ದರ ನಿಗದಿಯಾಗಿದೆ. ಭಟ್ಕಳ ಮಲ್ಲಿಗೆ 1250 ರೂ. ಕಟ್ಟೆಯಲ್ಲಿ ಹಾಗೂ ಮಾರುಕಟ್ಟೆಯಲ್ಲಿ 1800 ರೂ.ಗೆ ಮಾರಾಟವಾಗುತ್ತಿದೆ.

    ಮಂಗಳೂರಿನಲ್ಲಿ ಮಲ್ಲಿಗೆ ಅಟ್ಟೆಗೆ 1250 ರೂ. ಇದ್ದರೂ ಹೂ ಸಿಗುತ್ತಿಲ್ಲ. ಮಳೆಗಾಲದಲ್ಲಿ ಮಲ್ಲಿಗೆ ಕೃಷಿಗೆ ಹಾನಿಯಾಗಿರುವುದು ಮತ್ತು ಚಳಿ ಹಿನ್ನೆಲೆಯಲ್ಲಿ ಮಲ್ಲಿಗೆ ಪೂರೈಕೆ ತೀರಾ ಕಡಿಮೆ ಇದೆ. ಚಳಿ ಕಡಿಮೆಯಾಗುತ್ತಿದ್ದಂತೆಯೇ ಪೂರೈಕೆ ಸಾಮಾನ್ಯವಾಗಿ ಹೆಚ್ಚುತ್ತದೆ ಎಂದು ವ್ಯಾಪಾರಿಗಳು ತಿಳಿಸುತ್ತಾರೆ.

    ಶನಿವಾರ ಉಪ್ಪಿನಂಗಡಿಯಲ್ಲಿ ಮಲ್ಲಿಗೆ ಚೆಂಡಿಗೆ 600 ರೂ.ನಂತೆ (ಅಟ್ಟೆಗೆ ಸುಮಾರು 2,400 ರೂ.) ಮಾರಾಟವಾಗಿದೆ. ಬೆಳ್ತಂಗಡಿಯಲ್ಲಿ 450ರಿಂದ 500ರವರೆಗೂ ದರ ಇತ್ತು. ಮಲ್ಲಿಗೆ ಪೂರೈಕೆಯಲ್ಲಿ ಕೊರತೆಯಾಗಿರುವುದರಿಂದ ಬೇಡಿಕೆ ಹೆಚ್ಚಿದೆ.

    ಹೂವಿನ ಮಾರಾಟ ಸಾಮಾನ್ಯ: ಹೊರ ಜಿಲ್ಲೆಗಳಿಂದ ಬರುವ ಹೂವಿನ ಪ್ರಮಾಣದಲ್ಲಿ ಇಳಿಕೆ ಆಗಿದ್ದರೂ ಮಂಗಳೂರಿನಲ್ಲಿ ಹೂವಿಗೆ ಭಾರಿ ಬೇಡಿಕೆಯೇನೂ ಇಲ್ಲ. ಸಾಮಾನ್ಯ ಬೇಡಿಕೆಯಷ್ಟೇ ಇದೆಯೆಂದು ಹೂವಿನ ವ್ಯಾಪಾರಿಗಳು ತಿಳಿಸಿದ್ದಾರೆ. ಗೊಂಡೆ ಹೂ 8 ಮಾರಿಗೆ 550 ರೂ, ಸೇವಂತಿಗೆ 20 ಮಾರಿಗೆ 2100 ರೂ.ನಂತೆ ಮಾರಾಟವಾಗುತ್ತಿದೆ. ಬೆಳ್ತಂಗಡಿಯಲ್ಲಿ ಸೇವಂತಿಗೆ ಗುಚ್ಚಿಗೆ 1,200 ರೂ. ದರವಿತ್ತು. ಮಾರು 100 ರೂ.ನಲ್ಲಿ ಮಾರಾಟವಾಗುತ್ತಿದೆ. ಕಾಕಡ ಗುಚ್ಚಿಗೆ 800 ರೂ. ಇದ್ದು, ಮಾರು 80ರಿಂದ 100 ರೂ.ಗೆ ಮಾರಾಟವಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts