More

    ಪತ್ನಿ ಸ್ನಾನ ಮುಗಿಸಿ ಬರುವಷ್ಟರಲ್ಲಿ ನಡೆದಿತ್ತೊಂದು ಭೀಕರ ಘಟನೆ…!

    ಲಂಡನ್​: ಪತ್ನಿಯು ಶೌಚಗೃಹದಿಂದ ಸ್ನಾನ ಮುಗಿಸಿ ಬರುವಷ್ಟರಲ್ಲಿ ತನ್ನಿಬ್ಬರು ಮಕ್ಕಳನ್ನು ಪಾಪಿ ತಂದೆಯೊಬ್ಬ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೂರದ ಲಂಡನ್​ನಲ್ಲಿ ನಡೆದಿದ್ದು, ಘಟನೆ ಸಂಬಂಧ ವಿಚಾರಣೆ ಇಂದು ನಡೆದಿದೆ.

    ಇದನ್ನೂ ಓದಿ: PHOTOS| ಹುಟ್ಟುಹಬ್ಬ ಸಂಭ್ರಮದಲ್ಲಿ ಸನ್ನಿ ಲಿಯೋನ್: ಮಾಜಿ ನೀಲಿ ತಾರೆಯ ಕುತೂಹಲಕಾರಿ ಸಂಗತಿಗಳಿವು!​

    ನಾದರಾಜ ನಿಥಿಯಾಕುಮಾರ್​ (40) ಮಕ್ಕಳನ್ನೇ ಕೊಲೆಗೈದ ಆರೋಪಿ. ಈತ ಅಂಗಡಿಯೊಂದರ ಮಾಲೀಕನಾಗಿದ್ದು, ಮೂರು ವರ್ದಷ ಗಂಡು ಮಗು ನಿಗಿಶ್​ ನಿಥಿಯಾಕುಮಾರ್​ ಹಾಗೂ 19 ತಿಂಗಳ ಹೆಣ್ಣು ಮಗು ಪವಿನ್ಯಾ ನಿಥಿಯಾಕುಮಾರ್​ರನ್ನು ಬರ್ಬರವಾಗಿ ಕೊಂದಿದ್ದಾನೆ. ಪೂರ್ವ ಲಂಡನ್​ನ ಇಲ್​ಫೋರ್ಡ್​ನಲ್ಲಿರುವ ನಿವಾಸದಲ್ಲಿ​​​ ಈ ಘಟನೆ ನಡೆದಿದೆ.

    ಏಪ್ರಿಲ್​ 26 ಸಂಜೆ 6 ಗಂಟೆಗೆ ಘಟನೆ ನಡೆದಿದ್ದು, ಮಗು ಪವಿನ್ಯಾ ಘಟನಾ ಸ್ಥಳದಲ್ಲೇ ಮೃತಪಟ್ಟರೆ, ನಿಗಿಶ್​​ ಘಟನೆ ನಡೆದ ಎರಡು ಗಂಟೆಯ ನಂತರ ರಾಯಲ್​​ ಲಂಡನ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯಿತು. ಆರೋಪಿ ತಂದೆ ನಾದರಾಜ ಕೂಡ ಘಟನಾ ವೇಳೆ ಗಂಭೀರವಾಗಿ ಗಾಯಗೊಂಡಿದ್ದ.

    ಇದನ್ನೂ ಓದಿ: ನಂಜನಗೂಡಿನಲ್ಲಿ ತಯಾರಾಗಲಿದೆ ಕರೊನಾಗೆ ಔಷಧ…!

    ಲಂಡನ್​ನ ಓಲ್ಡ್​ ಬೈಲೆ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕವೇ ಆರೋಪಿಯ ವಿಚಾರಣೆ ಇಂದು ನಡೆದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಜುಲೈ 28ಕ್ಕೆ ವಿಚಾರಣೆ ಮುಂದೂಡಿದ್ದಾರೆ. ಈವರೆಗೂ ಕೊಲೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ತನಿಖೆ ಜತೆಗೆ ಆರೋಪಿಯ ವಿಚಾರಣೆಯು ನಡೆಯುತ್ತಿದೆ. (ಏಜೆನ್ಸೀಸ್​)

    ನುಡಿದಂತೆ ನಡೆ: ಇಲ್ಲೀಗ ಸಂಪೂರ್ಣ ಸ್ವದೇಶಿ ಉತ್ಪನ್ನ- ಅಮಿತ್​ ಷಾ ಟ್ವೀಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts