More

    ಶೂಟರ್ ಅಪೂರ್ವಿ ಈಗ ಫೋಟೋಗ್ರಾಫರ್!

    ಜೈಪುರ: ಶೂಟಿಂಗ್ ರೈಫಲ್​ ಹಿಡಿಯುತ್ತಿದ್ದ ಕೈಗಳು ಈಗ ಕ್ಯಾಮರಾಗಳನ್ನು ಹಿಡಿಯುತ್ತಿವೆ! ಟಾರ್ಗೆಟ್‌ನತ್ತ ಗುರಿ ಇಡುತ್ತಿದ್ದ ಕಣ್ಣುಗಳು ಈಗ ಲೆನ್ಸ್ ಮೇಲೆ ಫೋಕಸ್ ಮಾಡುತ್ತಿವೆ! ಇದು ಒಲಿಂಪಿಯನ್ ಶೂಟರ್ ಅಪೂರ್ವಿ ಚಾಂಡೆಲಾ, ಲಾಕ್‌ಡೌನ್ ಶುರುವಾದ ಬಳಿಕ ಬದಲಾಗಿರುವ ರೀತಿ!

    ಇದನ್ನೂ ಓದಿ: ಶ್ರೀಲಂಕಾದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಿಕೆಟಿಗರಿಂದಲೇ ತಡೆ!

    10 ಮೀಟರ್ ಏರ್ ರೈಫಲ್ ಶೂಟರ್ ಆಗಿರುವ 27 ವರ್ಷದ ಅಪೂರ್ವಿ, ಲಾಕ್‌ಡೌನ್ ವೇಳೆ ತಮ್ಮ ನೆಚ್ಚಿನ ಫೋಟೋಗ್ರಫಿಗೆ ಹೆಚ್ಚಿನ ಸಮಯ ನೀಡುತ್ತಿದ್ದಾರೆ. ಫೋಟೋಗ್ರಫಿಯತ್ತ ಆಸಕ್ತಿ ಬೆಳೆಯಲು ತಮಗೆ ಅಂಕಲ್ ಹೇಮ್ ಸಿಂಗ್ ಖಂಗರೋಟ್ ಮತ್ತು ಲಂಡನ್ ಒಲಿಂಪಿಕ್ಸ್ ಪದಕ ವಿಜೇತರೂ ಆಗಿರುವ ಮೆಂಟರ್ ಗಗನ್ ನಾರಂಗ್ ಸ್ಫೂರ್ತಿ ಎನ್ನುತ್ತಾರೆ ಅಪೂರ್ವಿ. ಜೈಪುರದ ಮನೆಯಲ್ಲಿ ಲಾಕ್ ಆಗಿರುವ ಅಪೂರ್ವಿ, ನಾರಂಗ್ ಅವರಂತೆ ವೈಲ್ಡ್‌ಲೈಫ್​ ಮತ್ತು ನೇಚರ್ ಫೋಟೋಗ್ರಫಿ ಕಲಿತುಕೊಳ್ಳಲು ಹೆಚ್ಚಿನ ಆಸಕ್ತಿ ತೋರಿದ್ದಾರೆ.

    ಶೂಟರ್ ಅಪೂರ್ವಿ ಈಗ ಫೋಟೋಗ್ರಾಫರ್!

    ‘ಗಗನ್ (ನಾರಂಗ್) ಕ್ಲಿಕ್ಕಿಸಿರುವ ಚಿತ್ರಗಳನ್ನು ನಾನು ನೋಡಿದ್ದೇನೆ. ಅವುಗಳನ್ನು ಇಷ್ಟಪಟ್ಟಿರುವೆ. ನಾನೂ ಕೂಡ ಫೋಟೋಗ್ರಫಿ ಕಲಿಯಬೇಕೆಂದು ಆಗ ಆಸೆ ಮೂಡಿತ್ತು. ಆದರೆ ಸಮಯ ಸಿಕ್ಕಿರಲಿಲ್ಲ. ಹೀಗಾಗಿ ಈಗ ಆನ್‌ಲೈನ್ ಕೋರ್ಸ್ ಮೂಲಕ ಫೋಟೋಗ್ರಫಿ ಕಲಿಯುತ್ತಿರುವೆ. ನನ್ನದೇ ಕ್ಯಾಮರಾ ಹೊಂದಿದ್ದ ಕಾರಣ, ಶಾರ್ಟ್ ಕೋರ್ಸ್‌ಗೆ ಸೇರುವುದು ಸುಲಭವಾಗಿದೆ. ಈಗ ಫೋಟೋಗ್ರಫಿಗೆ ಬೆಳಕಿನ ಮಹತ್ವ ತಿಳಿದಿರುವೆ. ಫೋಟೋಶೂಟ್ ಮಾಡಲು ಬೇಕಾಗಿರುವ ಗೋಲ್ಡನ್ ಅವರ್ ಬಗ್ಗೆಯೂ ತಿಳಿದುಕೊಂಡಿರುವೆ. ಫೋಟೋಶಾಪ್ ಮೂಲಕ ಚಿತ್ರಗಳನ್ನು ಎಡಿಟ್ ಮಾಡುವುದನ್ನೂ ಕಲಿತಿರುವೆ. ಗಗನ್ ಮತ್ತು ಅಂಕಲ್ ಹೇಮ್ ಸಿಂಗ್ ಅವರಿಂದ ಟಿಪ್ಸ್ ಕೂಡ ಪಡೆದುಕೊಂಡಿರುವೆ’ ಎಂದು ಅಪೂರ್ವಿ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

    ಇದನ್ನೂ ಓದಿ: ಪದವಿಗಾಗಿ ಕ್ರಿಕೆಟ್‌ನಿಂದಲೇ ದೂರ ಹೋಗಿದ್ದ ಸ್ಪಿನ್ ಮಾಂತ್ರಿಕ

    ಹೋಟೆಲ್ ಉದ್ಯಮಿಯ ಪುತ್ರಿಯಾಗಿರುವ ಅಪೂರ್ವಿ, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. 2014ರ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಸ್ವರ್ಣ ಮತ್ತು 2018ರ ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. 2018ರ ಏಷ್ಯನ್ ಗೇಮ್ಸ್‌ನಲ್ಲೂ ಕಂಚು ಜಯಿಸಿದ್ದರು. ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಅವರು ಈಗಾಗಲೆ ಅರ್ಹತೆ ಪಡೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts