More

    ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಯೋಧ್ಯೆ ಭೇಟಿಗೆ ಕಾಂಗ್ರೆಸ್ ಹಿಂದೇಟು: ಶೋಭಾ ಕರಂದ್ಲಾಜೆ ಆರೋಪ

    ವಿಜಯವಾಣಿ ಸುದ್ದಿಜಾಲ ಉಡುಪಿ
    ದೇಶದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ನಡೆಯುತ್ತಿದೆ. ಹೀಗಾಗಿ ಕೆಲವು ಪಕ್ಷಗಳು ಒಂದು ವರ್ಗದ ಮತ ಸೆಳೆಯಲು ಓಲೈಕೆಗಾಗಿ ರಾಮನ ತಿರಸ್ಕಾರ ವಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಮನೆಗೆ ಹೋದರೆ ರಾಮ, ಕೃಷ್ಣ, ಶಿವನ ಪೂಜೆ ವಾಡುತ್ತಾರೆ. ಮನೆಯಿಂದ ಆಚೆ ಬಂದರೆ ಬೇರೆ ಬೇರೆ ನಾಟಕಗಳನ್ನು ವಾಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು, ರಾಹುಲ್ ಗಾಂಧಿ ಚುನಾವಣೆ ಬಂದರೆ ಮಂದಿರ ಸುತ್ತುತ್ತಾರೆ. ಈಗ ಭವ್ಯ ದೇಗುಲ ಉದ್ಘಾಟನೆ ತಿರಸ್ಕಾರ ವಾಡುತ್ತಾರೆ. ಅನೇಕ ನಾಯಕರಿಗೆ ರಾಮ ಮಂದಿರ ಉದ್ಘಾಟನೆಗೆ ಬರಬೇಕು ಎಂಬ ಇಚ್ಛೆ ಇದೆ. ರಾಜಕೀಯದ ಕಾರಣಕ್ಕೆ ಹಲವರು ದೂರ ಸರಿಯುತ್ತಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ಕೂಡಲೇ ಎಲ್ಲರೂ ಅಯೋಧ್ಯೆಗೆ ಬರುತ್ತಾರೆ. ವಿರೋಧಿಸಿದ ಎಲ್ಲರೂ ರಾಮನ ದರ್ಶನ ವಾಡುತ್ತಾರೆ ಎಂದು ಹೇಳಿದರು.

    ರಾಮ ಎಲ್ಲರ ದೇವರು ಅವನಿಗೆ ಜಾತಿ ಧರ್ಮ ಇಲ್ಲ

    ರಾಮ ಎಲ್ಲರ ದೇವರು. ಅವನಿಗೆ ಜಾತಿ ಧರ್ಮ ಇಲ್ಲ. ಇಂಡೊನೇಷ್ಯಾ ಒಂದು ಮುಸಲ್ಮಾನರ ದೇಶ. ಮಹಾಭಾರತದಲ್ಲಿರುವ ಮಹಾಪುರುಷರು ಮತ್ತು ರಾಮನ ಹೆಸರನ್ನು ಅಲ್ಲಿಯ ಮಕ್ಕಳಿಗೆ ಇಡುತ್ತಾರೆ. ಅಲ್ಲಿ ಗೀತೋಪದೇಶ, ರಾಮಕಥೆಗಳು ನಡೆಯುತ್ತವೆ. ಮಹಾರಾಜ ಆತನ ಮಕ್ಕಳಿಗೂ ನಮ್ಮ ದೇವರುಗಳ ಹೆಸರಿಡುತ್ತಾರೆ. ಎರಡು ವರ್ಷದ ಹಿಂದೆ ಅಯೋಧ್ಯೆ ಒಂದು ಸಣ್ಣ ಹಳ್ಳಿಯಾಗಿತ್ತು. ಈಗ ಗಲ್ಲಿ ರಸ್ತೆಯೂ ವಿಶಾಲವಾಗಿ ಬೆಳೆದಿದೆ. ಅಭಿವೃದ್ಧಿ ಆಗಿದೆ. ಏರ್‌ಪೋರ್ಟ್, ರೈಲ್ವೆ ನಿಲ್ದಾಣ, ವಿಶಾಲ ರಸ್ತೆ ಕಟ್ಟಡಗಳು ಆಗುತ್ತಿವೆ. ದೇಶದ ಎಲ್ಲಾ ದೇವಸ್ಥಾನಗಳು ಸ್ವಚ್ಛವಾಗಬೇಕು ಎಂಬುದು ಪ್ರಧಾನಿಗಳ ಕಲ್ಪನೆ. ಹೀಗಾಗಿ ಉಡುಪಿ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಅಭಿಯಾನ ವಾಡಿದ್ದೇವೆ. ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ವಾಡಿದ್ದು ಬಹಳ ಖುಷಿ ತಂದಿದೆ ಎಂದರು.

    ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಚರ್ಚೆ ವಿಚಾರ ಮುನ್ನೆಲೆ

    ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಚರ್ಚೆ ವಿಚಾರ ಮುನ್ನೆಲೆಗೆ ಬಂದಿದೆ. ಸರ್ಕಾರ ಆರಂಭವಾದ ಮೊದಲ ದಿನದಿಂದಲೇ ಗೊಂದಲ ಇದೆ. ಸಿಎಂ, ಡಿಸಿಎಂ, ಮಂತ್ರಿ, ಶಾಸಕರ ನಡುವೆ ಗೊಂದಲವಿದೆ. ಗುಂಪುಗಳಾಗಿ ಬೇರೆ ಬೇರೆ ಕಡೆ ಸೇರಲು ರೆಸಾರ್ಟ್ ರಾಜಕೀಯ ವಾಡಲು ವಿದೇಶಕ್ಕೆ ಹೋಗಲು ಯೋಚನೆ ವಾಡುತ್ತಿವೆ. ಅಭಿವೃದ್ಧಿ ನಿರ್ಲಕ್ಷೃ, ಜಾತೀಯ ಕಾರಣದಿಂದ ಹೊಡೆದಾಟಗಳು ನಡೆಯುತ್ತಿರುವುದು ಈ ಆಂತರಿಕ ಬೇಗುದಿಗೆ ಕಾರಣ. ಲೋಕಸಭೆ ಚುನಾವಣೆ ತನಕ ಕಾಂಗ್ರೆಸ್ ಬಿರುಕು ದೊಡ್ಡದಾಗುತ್ತದೆ. ಕಾಂಗ್ರೆಸ್‌ನ ಹಲವಾರು ಗೆಳೆಯರು ಸರ್ಕಾರ ಬಹಳ ದಿನ ನಡೆಯುವುದಿಲ್ಲ ಎಂದು ಹೇಳಿದ್ದಾರೆ ಎಂದು ಹೇಳಿದರು. ಶಾಸಕ ಯಶ್‌ಪಾಲ್ ಸುವರ್ಣ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts