ಸಿಎಂ-ಡಿಸಿಎಂ ಮಧ್ಯೆ ಏನು ನಡೀತಿದೆ ಅನ್ನೋದು ಚುನಾವಣೆ ಬಳಿಕ ಹೊರಬರಲಿದೆ: ಶೋಭಾ ಕರಂದ್ಲಾಜೆ

Shobakharandlaje
Published on

ಚಿಕ್ಕಮಗಳೂರು: ಗೋ ಬ್ಯಾಕ್​ ಶೋಭಾ ಕರಂದ್ಲಾಜೆ ಅಭಿಯಾನದ ವಿರುದ್ಧ ಶೋಭಾ ಕರಂದ್ಲಾಜೆ ಅವರು ಗರಂ ಆಗಿದ್ದಾರೆ. ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಶೋಭಾ ಅವರು ಗಂಡಸರಿಗೆ ಅಧಿಕಾರ ನಮ್ಮಲ್ಲೇ ಇರಬೇಕು ಎಂಬ ಭಾವನೆ ಇದೆ. ಈ ದರ್ಪದಿಂದಲೇ ಕೆಲವರು ಮಾಡುತ್ತಿದ್ದಾರೆ, ಮಾಡಿಸುತ್ತಿದ್ದಾರೆ. ವ್ಯವಸ್ಥಿತವಾಗಿ ದುಡ್ಡಿನ ಮದ ಅಹಂಕಾರದಿಂದ ಈ ರೀತಿ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಷಡ್ಯಂತ್ರಕ್ಕೆ ಉತ್ತರ ನಾನು ಕೊಡಲ್ಲ, ನಮ್ಮ ನಾಯಕರು, ದೊಡ್ಡವರು ಕೊಡ್ತಾರೆ ಎಂದ ಶೋಭಾ ಕರಂದ್ಲಾಜೆ ಅವರು, ಯಾರು ಬರೆದರು, ಬರೆಸಿದವರು ಯಾರು ಎಲ್ಲಾ ಗೊತ್ತಿದೆ. ನನ್ನ ಹಿರಿಯರ ಮೇಲೆ ನಂಬಿಕೆ ಇದೆ, ಅವರು ಉತ್ತರ ನೀಡುತ್ತಾರೆ. ಕೇಂದ್ರ ಕೂಡ ಎಲ್ಲಾ ವರದಿ ತರೆಸಿಕೊಂಡಿದೆ ಎಂದು ತಿಳಿಸಿದರು.

ಮೊದ್ಲು ಟಿಕೆಟ್ ಉಳಿಸಿಕೊಳ್ಳಲಿ ಎಂದ ಎಂ.ಬಿ.ಪಾಟೀಲ್ ಅವರಿಗೆ ತಿರುಗೇಟು ನೀಡಿದ ಶೋಭಾ ಕರಂದ್ಲಾಜೆ ಅವರು ಸಿಎಂ-ಡಿಸಿಎಂ ಮಧ್ಯೆ ಏನು ನಡೀತಿದೆ ಅನ್ನೋದು ಚುನಾವಣೆ ಬಳಿಕ ಹೊರಬರಲಿದೆ. ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆ ಅನ್ನೋದು ಅವರಿಗೆ ಗೊತ್ತಿದೆ. ಕಾಂಗ್ರೆಸ್ಸಿಗೆ ಅವರ ಎಂ.ಎಲ್.ಎ. ಉಳಿಸಿಕೊಳ್ಳಲು ಆಗಲ್ಲ ಅಂತ ಬಿಜೆಪಿ ಶಾಸಕರಿಗೆ ಕೈ ಹಾಕಿದೆ. ಚುನಾವಣೆ ಬಳಿಕ ಎಲ್ಲವೂ ಹೊರಬರಲಿದೆ ಎಂದು ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ಅವರು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net