More

    ಮೊದಲು ಕಾಶ್ಮೀರ ವಶಪಡಿಸ್ತೇವೆ, ನಂತರ ಭಾರತದ ಮೇಲೆ ದಾಳಿ ಮಾಡ್ತೇವೆ ಅಂದ್ರು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ​

    ನವದೆಹಲಿ : ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಪಾಕಿಸ್ತಾನೀಯರ ಇರಾದೆ ಮತ್ತೊಮ್ಮೆ ಬಹಿರಂಗವಾಗಿದೆ. ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್​ ಅವರ ಹೇಳಿಕೆಯ ವಿಡಿಯೋ ಒಂದು ಜಗತ್ತಿನ ಗಮನ ಸೆಳೆದಿದೆ. ಘಝ್ವಾ ಏ ಹಿಂದ್​ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವ ಅಖ್ತರ್​, ಮೊದಲು ಕಾಶ್ಮೀರವನ್ನು ವಶಪಡಿಸ್ತೇವೆ ನಂತರ ಭಾರತದ ಮೇಲೆ ದಾಳಿ ಮಾಡ್ತೇವೆ ಎಂದು ಬಹಿರಂಗವಾಗಿಯೆ ಘೋಷಿಸಿದ್ದಾರೆ. ಘಝ್ವಾ ಏ ಹಿಂದ್ ಅಂದರೆ ಭಾರತದ ವಿರುದ್ಧ ಧರ್ಮಯುದ್ಧ ಎಂದು ಅರ್ಥ.

    ಸಮಾ ಟಿವಿ ಚಾನೆಲ್​ಗೆ ರಾವಲ್ಪಿಂಡಿ ಎಕ್ಸ್​ಪ್ರೆಸ್​ ಎಂದೇ ಖ್ಯಾತರಾಗಿರುವ ಅಖ್ತರ್​ ಹಿಂದೊಮ್ಮೆ ನೀಡಿದ್ದ ಸಂದರ್ಶನ ತುಣುಕು ವಿಡಿಯೋ ದೃಶ್ಯದಲ್ಲಿರುವಂಥದ್ದು. ಇದು ವೈರಲ್ ಆಗಿದ್ದು, ಅಖ್ತರ್ ಹೇಳಿರುವುದಿಷ್ಟು –
    ಶಮಲ್ ಮಶ್ರಿಕ್​​ (ಅರೇಬಿಯನ್ ಪೆನಿನ್ಸುಲಾದಿಂದ ಉತ್ತರಕ್ಕೆ ಇರುವ ಪ್ರದೇಶವಾಗಿದ್ದು, ಉರ್ದು ಭಾಷೆಯಲ್ಲಿರುವ ಉಲ್ಲೇಖವಾಗಿದೆ) ನಿಂದ ಸಶಕ್ತ ಸೇನೆ ಉದಯಿಸಲಿದೆ. ಉಜ್ಬೇಕಿಸ್ತಾನ್​ನಿಂದಲೂ ವಿವಿಧ ಶಕ್ತಿಗಳು ನಮ್ಮೊಡನೆ ಕೈ ಜೋಡಿಸಲಿವೆ. ಇವೆಲ್ಲವೂ ಖೊರಾಸಾನ್​ ಅನ್ನು ಉಲ್ಲೇಖಿಸುತ್ತಿದ್ದು, ಐತಿಹಾಸಿಕ ಪ್ರದೇಶ ಲಾಹೋರ್ ತನಕ ವಿಸ್ತರಿಸಲ್ಪಡಲಿದೆ. ನಮ್ಮ ಸೇನೆ ಅಫ್ಘಾನಿಸ್ತಾನದಿಂದ ಅಟಾಕ್​ ತನಕ ತಲುಪಲಿದ್ದು, ಅಟಾಕ್​​ನಲ್ಲಿರುವ ನದಿಯಲ್ಲಿ ಎರಡು ಬಾರಿ ರಕ್ತ ಪ್ರವಾಹವೇ ಹರಿಯಲಿದೆ. ಘಝ್ವಾ ಏ ಹಿಂದ್​ ನಡೆಯಲಿದೆ ಎಂದು ನಮ್ಮ ಗ್ರಂಥಗಳಲ್ಲಿ ಬರೆದಿದೆ.

    ಇದನ್ನೂ ಓದಿ: ತಾಳಿ ಕಟ್ಟುವಷ್ಟರಲ್ಲಿ ಪೊಲೀಸರಿಗೆ ಕರೆ ಮಾಡಿ ಕೈಕೊಟ್ಟ ವಧು: ಚಿಂತಿಸದ ವರನಿಂದ ಒಳ್ಳೆಯ ನಿರ್ಧಾರ!

    ಘಝ್ವಾ-ಏ-ಹಿಂದ್ ಪದವನ್ನು ಮೂಲಭೂತವಾದಿ ಇಸ್ಲಾಮಿಕ್ ಧರ್ಮ ಬೋಧಕರು ಪಾಕಿಸ್ತಾನದಲ್ಲಿ ಹೆಚ್ಚಾಗಿ ಬಳಸುತ್ತಿದ್ದಾರೆ. ಇದನ್ನೇ ಪಾಕಿಸ್ತಾನ ಪ್ರಾಯೋಜಿತ ಉಗ್ರ ಸಂಘಟನೆಗಳೂ ಬಳಸುತ್ತಿವೆ. ಈ ಪರಿಕಲ್ಪನೆಯ ಪ್ರಕಾರ, ಸಿರಿಯಾದಿಂದ ಈ ಯುದ್ಧ ಆರಂಭವಾಗಿ ಕಪ್ಪು ಬಾವುಟ ಹಿಡಿದ ಶಕ್ತಿ ಭಾರತವನ್ನು ಅತಿಕ್ರಮಿಸಲಿದೆ. ಇಸ್ಲಾಮಿಕ್ ಸ್ಟೇಟ್​ ಸ್ಥಾಪಿಸುವ ಉದ್ದೇಶದ ಈ ಯುದ್ಧಕ್ಕೆ ಪೂರಕವಾಗಿ ಆಗ ಹಿಂದು ಮತ್ತು ಮುಸಲ್ಮಾನರ ನಡುವೆ ಭೀಕರ ಹೊಡೆದಾಟ ನಡೆಯಲಿದೆ. ಇದರಲ್ಲಿ ಮುಸ್ಲಿಮರಿಗೆ ಭಾರತದಲ್ಲಿರುವ ಹಿಂದುಗಳ ವಿರುದ್ಧ ನಿರ್ಣಾಯಕ ಗೆಲುವು ಸಿಗಲಿದೆ. ಭಾರತದಲ್ಲಿ ಉಗ್ರಕೃತ್ಯಗಳಿಗೆ ಉಗ್ರರನ್ನು ನಿಯೋಜಿಸುವಾಗ ಜೈಷ್​ ಏ ಮೊಹಮ್ಮದ್ (ಜೆಇಎಂ) ನಿರಂತರವಾಗಿ ಇದನ್ನೇ ಬೋಧಿಸಿ, ಅವರನ್ನು ಪ್ರಚೋದಿಸುತ್ತಿದೆ.
    ಅಖ್ತರ್​ಗೆ ಭಾರಿ ಸಂಖ್ಯೆಯ ಫಾಲೋಯರ್ಸ್ ಇದ್ದು, ಅವರ ಈ ಪೋಸ್ಟ್ ವ್ಯಾಪಕ ವಿವಾದ ಸೃಷ್ಟಿಸಿದೆ. ಪರ – ವಿರೋಧದ ಟೀಕೆಗಳು ವ್ಯಕ್ತವಾಗಿವೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ ಮಾಡಿದ್ರು ಪ್ರಧಾನಿ; ಆರು ರಾಜ್ಯಗಳ ಕೃಷಿಕರ ಜತೆಗೆ ಸಂವಾದವನ್ನೂ ಆರಂಭಿಸಿದ್ರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts