More

    ಸುಬ್ರಹ್ಮಣ್ಯದಲ್ಲಿ ಶೈವ ಪದ್ಧತಿಯ ಶಿವರಾತ್ರಿ, ಆಯುಕ್ತರ ಆದೇಶಕ್ಕೆ ಹೈಕೋರ್ಟ್ ತಡೆ

    ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶಿವರಾತ್ರಿ ಆಚರಣೆ ಸಂಬಂಧ ಧಾರ್ಮಿಕ ದತ್ತಿ ಆಯುಕ್ತರು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

    ಕ್ಷೇತ್ರದಲ್ಲಿ ಶೈವ ಪದ್ಧತಿಯಂತೆ ಶಿವರಾತ್ರಿ ಆಚರಿಸಬೇಕು ಎಂಬ ಮನವಿಯಂತೆ ಸುಬ್ರಹ್ಮಣ್ಯದಲ್ಲಿ ಪರಿಷತ್ ಹಾಗೂ ಪ್ರಮುಖರು ಸಭೆ ನಡೆಸಿ ವರದಿ ಕಳುಹಿಸಿದ್ದರು. ಅದರಂತೆ ಧಾರ್ಮಿಕ ದತ್ತಿ ಆಯುಕ್ತರು ಹೊಸ ಆದೇಶ ಹೊರಡಿಸಿದ್ದರು. ಆಯುಕ್ತರ ಆದೇಶ ಪ್ರಶ್ನಿಸಿ ಬೆಂಗಳೂರಿನ ನಾಲ್ವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಬುಧವಾರ ವಿಚಾರಣೆ ನಡೆಸಿದ ಕೋರ್ಟ್ ಆಯುಕ್ತರ ಆದೇಶಕ್ಕೆ ತಡೆ ನೀಡಿದೆ. ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಈ ಹಿಂದೆ ನಡೆಯುತ್ತಿದ್ದಂತೆ ಪೂಜೆ ನೆರವೇರಿಸಲು ಸೂಚಿಸಿದೆ.

    ಆಯುಕ್ತರ ಹೊಸ ಆದೇಶದ ಪ್ರಕಾರ ಶಿವರಾತ್ರಿ ದಿನ ಪೂರ್ವಾಹ್ನದಿಂದ ಮಧ್ಯಾಹ್ನದ ಮಹಾಪೂಜೆಯವರೆಗೆ ವಿಶೇಷ ಸೇವೆ, ಕಾಲಭೈರವ ಸನ್ನಿಧಿಯಲ್ಲಿ ಆವರ್ತನ ರುದ್ರಯಾಗ, ಕಲಶಾರಾಧನೆ, ಮಂಡಲಾರಾಧನೆ, ರುದ್ರ ತ್ರಿಂಶತಿ ಬಿಲ್ವಾರ್ಚನೆ, ಅಷ್ಟೋಚರ ಸಹಿತ ಭಸ್ಮಾರ್ಚನೆ, ಉಮಾಮಹೇಶ್ವರಿ ಗುಡಿಯಲ್ಲಿ ಅಭಿಷೇಕ, ಉತ್ಸವಾದಿ ಸೇವೆ ಹಾಗೂ ಸೇವೆಗೆ ಹೆಚ್ಚುವರಿ ಋತ್ವಿಜರ ಆಯ್ಕೆಗೆ ಅವಕಾಶ. ದೇವಸ್ಥಾನದ ಪ್ರಧಾನ ಅರ್ಚಕರಿಗೆ ಹೆಚ್ಚುವರಿ ನಿಯೋಜನೆಗೆ ಅಧಿಕಾರ ಹಾಗೂ ಈ ಖರ್ಚುಗಳನ್ನು ದೇವಸ್ಥಾನದಿಂದಲೇ ಭರಿಸಲು ಆದೇಶ ಹೊರಡಿಸಲಾಗಿತ್ತು. ಈಗ ಕೋರ್ಟ್ ಇದಕ್ಕೆ ತಡೆ ನೀಡಿದೆ. ಕುಕ್ಕೆ ಹಿತರಕ್ಷಣಾ ಸಮಿತಿ ಶೈವಾರಾಧನೆಯಂತೆ ಶಿವರಾತ್ರಿ ಆಚರಿಸಲು ಮನವಿ ಸಲ್ಲಿಸಿತ್ತು. ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಈ ಬಗ್ಗೆ ಆದೇಶದ ಮಾಹಿತಿ ತಲುಪಿಲ್ಲ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts