More

    ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ

    ವಿಜಯವಾಣಿ ಸುದ್ದಿಜಾಲ ಗದಗ
    ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಶನಿವಾರ ಮಹಾಶಿವರಾತ್ರಿ ಕಾರ್ಯಕ್ರಮ ಆಚರಿಸಲಾಯಿತು.
    ಸಾನ್ನಿಧ್ಯ ವಹಿಸಿ ಮಾತನಾಡಿದ ಗುರು ಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು, ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತಿಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನು ಇಂದ್ರೀಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿಯಂದು ಧ್ಯಾನಿಸಿದರೆ ದೇವರು ಪ್ರಸನ್ನಗೊಳ್ಳುತ್ತಾನೆ ಎಂದರು.
    ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಂ. ಎನ್​. ಕಾಮನಹಳ್ಳಿ ಮಾತನಾಡಿ, ಪ್ರಪಂಚದಾದ್ಯಂತ ಇರುವ ಹಿಂದೂಗಳಿಗೆ ಮಹಾ ಶಿವರಾತ್ರಿ ಬಹಳ ವಿಶೇಷವಾದ ದಿನವಾಗಿದೆ. ಇದು ಪ್ರತಿ ವರ್ಷ ನಡೆಯುವ ಒಂದು ದೊಡ್ಡ ಆಧ್ಯಾತ್ಮಿಕ ಆಚರಣೆ. ಜನರು ಪ್ರಾರ್ಥನೆ, ಉಪವಾಸ ಮತ್ತು ಇತರ ಆಚರಣೆಗಳಂತಹ ವಿಭಿನ್ನ ವಿಷಯಗಳನ್ನು ಮಾಡುವ ಮೂಲಕ ಮಹಾಶಿವರಾತ್ರಿಯನ್ನು ಆಚರಿಸುತ್ತಾರೆ. ಈ ಕ್ರಿಯೆಗಳನ್ನು ಶುದ್ಧ ಹೃದಯ ಮತ್ತು ಶಿವನಿಗೆ ಆಳವಾದ ಭಕ್ತಿಯಿಂದ ಮಾಡಲಾಗುತ್ತದೆ ಎಂದರು.
    ಜಿ. ಬಿ. ಗಾರವಾಡ, ಎಸ್​. ಎಸ್​. ಗೌಡರ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮಗಳು ಜರುಗಿದವು. ಎಂ. ಬಿ. ಚೆನ್ನಪ್ಪಗೌಡರ, ಕೆ. ಐ. ಕುರುಗೋಡು, ಜಿ. ಜಿ. ಕುಲಕಣಿರ್, ಬಸವರಾಜ ಸುಂಕದ, ಎಂ. ಕೆ. ಲಕ್ಕುಂಡಿ, ಆರ್​. ಬಿ. ಒಡೆಯರ, ವಿ. ಆರ್​. ಕುಲಕಣಿರ್, ಅಮರೇಶ್​ ಹಾದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts