More

    ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಆಚರಣೆ ಇಂದು

    ಹಾವೇರಿ: ಜಿಲ್ಲೆಯಾದ್ಯಂತ ಮಹಾಶಿವರಾತ್ರಿಯನ್ನು ಶುಕ್ರವಾರ ಆಚರಿಸಲಾಗುತ್ತಿದ್ದು, ಹಬ್ಬದಾಚರಣೆಗೆ ಗುರುವಾರ ಮಾರುಕಟ್ಟೆಯಲ್ಲಿ ಹಣ್ಣುಗಳ ವ್ಯಾಪಾರ ಜೋರಾಗಿತ್ತು.

    ನಗರದ ಎಂಜಿ ರಸ್ತೆ, ನಗರಸಭೆ ಮುಂಭಾಗ, ಜಿಲ್ಲಾಸ್ಪತ್ರೆ ರಸ್ತೆ, ಕಾಗಿನೆಲೆ ಕ್ರಾಸ್, ಬಸ್​ನಿಲ್ದಾಣ ಹತ್ತಿರ, ಹಾನಗಲ್ಲ ರಸ್ತೆ, ಪಿ.ಬಿ. ರಸ್ತೆಗಳಲ್ಲಿ ಹಣ್ಣು ಮಾರಾಟದ ಅಂಗಡಿಗಳನ್ನು ತೆರೆಯಲಾಗಿದೆ. ಕಲ್ಲಂಗಡಿ, ಸೇಬು, ದ್ರಾಕ್ಷಿ, ಕರ್ಬೂಜ, ಖರ್ಜೂರ, ಕಿತ್ತಳೆ, ಮೊಸಂಬಿ, ಸೇರಿ ವಿವಿಧ ಹಣ್ಣುಗಳ ಅಂಗಡಿಗಳು ಹೆಚ್ಚಾಗಿದ್ದು, ಎಲ್ಲ ಅಂಗಡಿಗಳಲ್ಲಿ ವ್ಯಾಪಾರ ಭರ್ಜರಿಯಾಗಿ ಕಂಡುಬಂತು. ಬೆಳಗ್ಗೆಯಿಂದಲೇ ಜನರು ಮಾರುಕಟ್ಟೆಯಲ್ಲಿ ವಿವಿಧ ಹಣ್ಣು, ಹೂವುಗಳನ್ನು ಖರೀದಿಸಿದರು. ತಮಿಳುನಾಡಿನಿಂದ ಕಲ್ಲಂಗಡಿ ಹಣು ಬಂದಿದ್ದು, ಕೆಜಿಗೆ 25ರಿಂದ 30 ರೂ. ಗಳಂತೆ ಹಾಗೂ ಗಾತ್ರದ ಆಧಾರದಲ್ಲಿ ಒಂದಕ್ಕೆ 50ರಿಂದ 250 ರೂ.ವರೆಗೂ ಮಾರಾಟವಾದವು. ಕರ್ಬೂಜ ಹಣ್ಣು ಕೆಜಿಗೆ 60ರಿಂದ 80 ರೂ., ಸೇಬು ಕೆಜಿಗೆ 120ರಿಂದ 160 ರೂ., ದ್ರಾಕ್ಷಿ ಕೆಜಿಗೆ 60 ರೂ., ದಾಳಿಂಬೆ 80ರಿಂದ 100 ರೂ., ಕಿತ್ತಳೆ 60ರಿಂದ 80 ರೂ., ಬಾಳೆಹಣ್ಣು ಡಜನ್​ಗೆ 30ರಿಂದ 40 ರೂ., ಖರ್ಜೂರ ಕೆಜಿಗೆ 160ರಿಂದ 180 ರೂ., ಚಿಕ್ಕುಹಣ್ಣು ಕೆಜಿಗೆ 60 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹಣ್ಣುಗಳನ್ನು ಖರೀದಿಸುತ್ತಿರುವ ಗ್ರಾಹಕರಿಗೆ ಬಿಸಿಲಿನ ಬೇಗೆಯ ಜೊತೆಗೆ ಬೆಲೆ ಏರಿಕೆ ಬಿಸಿ ತಾಗಿದ್ದು, ಗ್ರಾಹಕರು ಚೌಕಾಸಿ ಮಾಡಿ ಹಣ್ಣುಗಳನ್ನು ಖರೀದಿಸುತ್ತಿರುವುದು ಕಂಡುಬಂತು.

    ಶಿವನಿಗೆ ಪೂಜೆ: ಶಿವರಾತ್ರಿ ಹಬ್ಬದ ನಿಮಿತ್ತ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಫೆ. 21ರಂದು ವಿಶೇಷ ಪೂಜೆಗಳು ನಡೆಯಲಿವೆ. ನಗರದ ಪುರಸಿದ್ಧೇಶ್ವರ ದೇವಸ್ಥಾನ, ಹುಕ್ಕೇರಿಮಠ, ಬಸವೇಶ್ವರ ನಗರದ ಸಿ ಬ್ಲಾಕ್​ನಲ್ಲಿರುವ ದ್ವಾದಶ ಜ್ಯೋತಿರ್ಲಿಂಗ, ವೀರಭದ್ರೇಶ್ವರ ದೇವಸ್ಥಾನ, ಅಶ್ವಿನಿ ನಗರದಲ್ಲಿನ ಶಿವನ ಉದ್ಯಾನ ಸೇರಿ ವಿವಿಧ ದೇವಸ್ಥಾನಗಳಿಗೆ ಬೆಳಗ್ಗೆಯಿಂದಲೇ ಭಕ್ತರುಗಳು ಕುಟುಂಬ ಸಮೇತ ತೆರಳಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts