More

    ಅಪ್ಪು ‘ಐ ಲವ್ ಯೂ’: ಸಂಕ್ರಾಂತಿಯಂದು ಶಿವಣ್ಣನ ಎರಡು ವಿಡಿಯೋಗಳು ವೈರಲ್!

    ನಟ ಶಿವರಾಜ್‌ಕುಮಾರ್‌ ಮತ್ತು ಡಾಲಿ ಧನಂಜಯ್ ‘ಟಗರು’ ಚಿತ್ರದ ನಂತರ ಒಟ್ಟಿಗೆ ನಟಿಸುತ್ತಿರುವ ಚಿತ್ರ ಅಂದರೆ ಅದು ‘ಬೈರಾಗಿ’. ಇದರ ಚಿತ್ರೀಕರಣ ಮುಗಿದಿದೆ. ಸಿನಿಮಾವನ್ನು ಬೆಂಗಳೂರಿನಲ್ಲಿ ಎರಡು ಭಾಗಗಳಲ್ಲಿ ವಿಶಿಷ್ಟ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ವಿಜಯ್‌ ಮಿಲ್ಟನ್‌ ನಿರ್ದೇಶನ ಮಾಡಿರುವ ಈ ಸಿನಿಮಾದ ಇತ್ತೀಚಿನ ಪೋಸ್ಟರ್‌ ಬಿಡುಗಡೆಯಾಗಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.
    ನಂತರ, ಇಂದು ಶಿವಣ್ಣ ಅವರು ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ಹೇಳಿದ್ದು, ಸಿನಿಮಾದ ಟೀಸರ್ ಬಿಡುಗಡೆ ಶೀಘ್ರದಲ್ಲೇ ಎಂಬ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದರು. ಈ ಸಂದರ್ಭದಲ್ಲಿ ಒಂದು ವಿಡಿಯೋದಲ್ಲಿ ಮಾತಾಡಿದ ನಟ ಅಪ್ಪು-‘ಐ ಲವ್ ಯೂಎಂದಿದ್ದಾರೆ. ಹಾಗಾಗಿ, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

    ಅಪ್ಪು 'ಐ ಲವ್ ಯೂ': ಸಂಕ್ರಾಂತಿಯಂದು ಶಿವಣ್ಣನ ಎರಡು ವಿಡಿಯೋಗಳು ವೈರಲ್! ಅಪ್ಪು 'ಐ ಲವ್ ಯೂ': ಸಂಕ್ರಾಂತಿಯಂದು ಶಿವಣ್ಣನ ಎರಡು ವಿಡಿಯೋಗಳು ವೈರಲ್!

    ಆ್ಯಕ್ಷನ್‌ ಡ್ರಾಮಾ ಜಾನರ್‌ನ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಮತ್ತು ಧನಂಜಯ್ ಅವರ ಲುಕ್‌ಗಳು ವಿಭಿನ್ನವಾಗಿವೆ. ಶಿವರಾಜ್‌ಕುಮಾರ್‌ಗೆ ತಮಿಳಿನ ನಟಿ ಅಂಜಲಿ ನಾಯಕಿಯಾದರೆ, ಧನಂಜಯ ಅವರಿಗೆ ನಟಿ ಯಶಾ ಶಿವಕುಮಾರ್‌ ಜೋಡಿಯಾಗಿದ್ದಾರೆ. ಅನೂಪ್‌ ಸೀಳಿನ್‌ ಸಂಗೀತ ನೀಡುತ್ತಿರುವ ಈ ಸಿನಿಮಾಗೆ ವಿಜಯ್‌ ಮಿಲ್ಟನ್‌ ನಿರ್ದೆಶನದ ಜತೆಗೆ ಸಿನಿಮಾಟೋಗ್ರಫಿಯನ್ನು ಮಾಡುತ್ತಿದ್ದಾರೆ.
    ಮತ್ತೊಂದೆಡೆ, ನಟ ಶಿವರಾಜ್​ಕುಮಾರ್ ಅವರು ಸ್ಟೈಲ್ ಆಗಿ ಹ್ಯಾಟ್ ಮೇಲಕ್ಕೆ ಎಗರಿಸಿದ್ದು, ಅದು ನೇರವಾಗಿ ನಟನ ತಲೆ ಮೇಲೆಯೇ ಬಿಳುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಟನ ಟೈಮಿಂಗ್ ಮತ್ತು ಆತ್ಮವಿಶ್ವಾಸ ಎದ್ದು ಕಾಣುತ್ತಿದೆ. ಅಭಿಮಾನಿಗಳಿಗಂತೂ ಶಿವಣ್ಣನ ಈ ಸ್ಟೈಲ್ ತುಂಬಾನೆ ಇಷ್ಟವಾಗಿದೆ. ಇದು, #CAPChallenge ಎಂಬ ಅಭಿಯಾನದ ಅಂಗವಾಗಿ ತೆಗೆದಿರುವ ವಿಡಿಯೋ ಎನ್ನಲಾಗಿದೆ. 

    ಶಿವಣ್ಣನ ‘ಬೈರಾಗಿ’ ಟೀಸರ್ ಶೀಘ್ರದಲ್ಲೇ! ಇನ್ನೇರಡು ಗಂಟೆಯಲ್ಲಿ ಮತ್ತೊಂದು ಸಪ್ರ್ರೈಸ್

    ನಟಿ ಅರ್ಚನಾ ಗೌತಮ್​ಗೆ ಕಾಂಗ್ರೆಸ್ ಎಂಎಲ್ಎ ಟಿಕೆಟ್, ಬಿಕಿನಿ ಫೋಟೋ ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts