More

    ಮಕ್ಕಳನ್ನು ಭವಿಷ್ಯದ ಸತ್ಪ್ರಜೆಯನ್ನಾಗಿ ಮಾಡುವುದೆ ಶಿವಾನುಭವ: ಸುಧಾ ಹುಚ್ಚಣ್ಣವರ.

    ಮಲ್ಲಸಮುದ್ರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಸಮಿತಿಯಿಂದ ಶ್ರಾವಣ ಮಾಸದ 32 ನೇಯ ಶಿವಾನುಭವ  ಕಾರ್ಯಕ್ರಮ ಶ್ರೀ ವೀರಭದ್ರೇಶ್ವರ ಸಭಾ ಭವನದಲ್ಲಿ ನಡೆಯಿತು.  ಈ ಕಾರ್ಯಕ್ರಮಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಶಿರಹಟ್ಟಿಯ ಎಫ್. ಎಂ. ಡಬಾಲಿ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಸುಧಾ ಹುಚ್ಚಣ್ಣವರು ಮಾತನಾಡುತ್ತ ಇಂದಿನ ಮಕ್ಕಳನ್ನು ಭವಿಷ್ಯದ ಸತ್ಪ್ರಜೆಯನ್ನಾಗಿ ಮಾಡುವುದೇ ಇಂತಹ  ಶಿವಾನುಭವದಂತ ಧಾರ್ಮಿಕ ಕಾರ್ಯಕ್ರಮಗಳು,  ಮಕ್ಕಳು ಮತ್ತು ಹಿರಿಯರು ಈ ಕಾರ್ಯಕ್ರಮಗಳಲ್ಲಿ  ಪಾಲ್ಗೊಂಡು ಅನೇಕ ವಿಷಯಗಳನ್ನು ಆಲಿಸಿದಾಗ ಅದರಿಂದಾಗುವ ಮನ ಮನಪರಿವರ್ತನೆಯು ಭವಿಷ್ಯದ ದಿನಮಾನಗಳಲ್ಲಿ ನಾವು ಕಾಣಬಹುದು ಎಂದರು. ಅಲ್ಲದೆ ತಾಯಿ ಮಕ್ಕಳ ಸಂಬಂಧವು ಯಾವ ರೀತಿ ಇರಬೇಕು , ತಾಯಿ ಮಕ್ಕಳಿಗಾಗಿ ತನ್ನ ಇಡಿಯಾದ  ಜೀವನ ತ್ಯಾಗಮಾಡುವಳು , ಹೀಗೆ ಅನೇಕ ವಿಷಯಗಳನ್ನು ಅನೇಕ ಶರಣರ ದೃಷ್ಟಾಂತಗಳನ್ನು  ಕೊಡುವದರ ಮೂಲಕ ಜನಮನ ಸೆಳೆದು ಮಾತನಾಡಿದರು.
    ಅದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡಿ ಜಿ ಎಮ್ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ. ಉಮೇಶ ವ್ಹಿ ಪುರದವರು ಮಾತನಾಡುತ್ತ ಒಳ್ಳೆಯ ಸಂಸ್ಕಾರದಿಂದ ಅತ್ಯುತ್ತಮವಾದ ಬದುಕನ್ನು ಕಾಣಬಹುದು ಎಲ್ಲಾ ಮಕ್ಕಳಿಗೆ ತಂದೆ ತಾಯಿ ನೀಡುವ ಸಂಸ್ಕಾರ ಬಹಳ ದೊಡ್ಡದು,  ಈ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸಂಸ್ಕಾರವಿಲ್ಲದೆ ಅನೇಕ ಸಂಬಂಧಗಳು ಕೆಟ್ಟು ಹೋಗಿರುವದನ್ನು ನಾವು ನಿತ್ಯ ದೈನಂದಿನ ಬದುಕಿನಲ್ಲಿ ಕಾಣುತ್ತೆವೆ. ಸಂಬಂಧಗಳು ಚನ್ನಾಗಿ ಉಳಿಸಬೇಕಾದರೆ ಸಂಸ್ಕಾರದ ಅವಶ್ಯಕತೆ ಇದೆ, ಒಳ್ಳೆಯ ಸಂಸ್ಕಾರವು ಮನೆಯಲ್ಲಿ ತಂದೆ ತಾಯಿಯಿಂದ, ಸಮಾಜದಲ್ಲಿ ಶಿವಾನುಭವದಂತಹ  ಆಧ್ಯಾತ್ಮಿಕ ಕಾರ್ಯಕ್ರಮಗಳಿಂದ  ಎಂದು ತಮ್ಮ ಜೀವನಾಭವದ ಮಾತಗಳನ್ನ ಹೇಳುತ್ತ ಮಾತನಾಡಿದರು.
    ಅಧ್ಯಕ್ಷತೆಯನ್ನು ವಹಿಸಿದ್ದ ಮಲ್ಲಸಮುದ್ರ ಗ್ರಾಮದ ಹಿರಿಯರಾದ ಶ್ರೀ ಕಾಶಪ್ಪ ನಿಂಗಪ್ಪ ಹುಗ್ಗಿಯವರು ಮಾತನಾಡುತ್ತ 12 ನೇ ಶತಮಾನದ ಶರಣರ ವಚನಗಳು ಆಧ್ಯಾತ್ಮದ ನೆಲೆಗಟ್ಟಿಗೆ ಮೂಲವಾಗಿವೆ ನಾವು ಸದಾ ಒಳ್ಳೆಯ ವಿಚಾರವನ್ನು ಮಾಡಿದಾಗ ಎಲ್ಲವು ಒಳ್ಳೆಯದೇ ಆಗುವದು ಎಂದು ಮಾತನಾಡಿದರು.
    ಇನ್ನೋರ್ವ ಹಿರಿಯರಾದ ಪ್ರೋ ಬಿ ಎಸ್ ಹಿರೇಮಠ ಗುರುಗಳು ಪ್ರಾಸ್ತಾವಿಕ ಮಾತುಗಳನ್ನು ನುಡಿಯುತ ಸಮಿತಿಯು ನಡೆದುಬಂದ ರೀತಿಯನ್ನು ಸ್ಮರಿಸುತ್ತ ಇಲ್ಲಿಯವರಗೆ 31 ಶಿವಾನುಭವಗಳನ್ನು ಕಳೆದ 15 ವರ್ಷಗಳಿಂದ ಈ ವೀರಭದ್ರೇಶ್ವರ ಸೇವಾ ಸಮಿತಿ ನಡೆಸಿಕೊಂಡು ಬಂದು ಇಂದು 32 ನೇ ಶಿವಾನುಭವ ನಡೆಸುತ್ತಿರುವದು ಶ್ಲಾಘನೀಯ ಎಂದು ಮಾತನಾಡಿದರು. ಕಾರ್ಯಕ್ರಮದಲ್ಲಿ  ಸಮಿತಿಯ ಅಧ್ಯಕ್ಷರಾದ ಶ್ರೀ ವೀರಪ್ಪ ರು. ಅಕ್ಕಿಯವರು. ಹಿರಿಯರಾದ  ಡಾ. ಡಿ.ಸಿ. ಗಡ್ಡಿಯವರು ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆ ,ಸ್ವಾಗತ ಮತ್ತು ಪರಿಚಯ ಕಾರ್ಯದರ್ಶಿಗಳಾದ ಡಾ.ಕಲ್ಲೇಶ. ಡಿ.  ಮೂರಶಿಳ್ಳಿನ ರವರು ನಡೆಸಿಕೊಟ್ಟರು . ಕೊನೆಗೆ ವಂದನಾರ್ಪಣೆಯನ್ನು ಶ್ರೀ ಶಂಕರಗೌಡ .ಬ. ಮದ್ನೂರವರು ಮಾಡಿದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts