More

    ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವಿಸಿ

    ಅರಕೇರಾ: ಹದಿಹರಿಯದ ಹೆಣ್ಣು ಮಕ್ಕಳು ಆರೋಗ್ಯದ ಕಡೆ ಹೆಚ್ಚು ಗಮನಹರಿಸಲಿ ಎಂದು ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಆಪ್ತಸಮಾಲೋಚಕಿ ಸುಲೋಚನಾ ಸಲಹೆ ನೀಡಿದರು.

    ತಾಲೂಕಿನ ಶಿವಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಹದಿಹರಿಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

    ಕಿಶೋರಿಯರು ಕಡ್ಡಾಯವಾಗಿ ಕಬ್ಬಿಣಾಂಶ ಮಾತ್ರೆ ತಗೆದುಕೊಳ್ಳಿ

    ಕಿಶೋರಿಯರು ಕಡ್ಡಾಯವಾಗಿ ಕಬ್ಬಿಣಾಂಶ ಮಾತ್ರೆ ಮತ್ತು ಪೌಷ್ಟಿಕ ಆಹಾರಗಳಾದ ತರಕಾರಿ, ಮೊಟ್ಟೆ, ಕಾಳು, ಹಾಲು ಸೇವನೆ ಮಾಡಬೇಕು. 11 ರಿಂದ 18 ವರ್ಷದೊಳಗಿನ ಹೆಣ್ಣು ಮಕ್ಕಳು ಆರೋಗ್ಯದ ಕಡೆ ಗಮನಹರಿಸಬೇಕು. ದಿನಕ್ಕೆ 4 ರಿಂದ 5 ಲೀಟರ್ ಶುದ್ಧ ನೀರು ಕುಡಿಯಬೇಕು ಎಂದರು.

    ಇದನ್ನೂ ಓದಿ: ದಸರಾ ಹೆಣ್ಣಾನೆಗಳಿಗೆ ಗರ್ಭಧಾರಣೆ ಪರೀಕ್ಷೆ

    ದಂತ ವೈದ್ಯ ಆನಂದ ಮಾತನಾಡಿ, ಹಲ್ಲುಗಳ ಸ್ಟಚ್ಛತೆ ಬಗ್ಗೆ ಕಾಳಜಿ ಇರಬೇಕು. ಇಲ್ಲದಿದ್ದರೆ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದರು.
    ಡಾ.ದೀಪಾ, ಕಿಶೋರಿಯರಿಗೆ ಸಂಬಂಧಿಸಿದ ರಸಪ್ರಶ್ನೆಗಳನ್ನು ಕೇಳಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕರಾದ ಶಿವಜಾತಪ್ಪ, ಶಿವಶಂಕ್ರಪ್ಪ, ಶೃತಿ ಸಂಸ್ಕೃತಿ ಸಂಸ್ಥೆ ತಾಲೂಕು ಅಧ್ಯಕ್ಷ ರಾಮಣ್ಣ ಎನ್ ಗಣೇಕಲ್, ಆಶಾ ಕಾರ್ಯಕರ್ತೆಯರಾದ ಸುಜಾತ ಸ್ಥಾವರಮಠ, ಲಕ್ಷ್ಮೀ ಜರದಬಂಡಿ, ರೇಣುಕಾ ಎಚ್.ಜಾಡಲದಿನ್ನಿ, ಕರ್ನಾಟಕ ಹೆಲ್ತ್ ಪ್ರಮೋಶನ್ ಟ್ರಸ್ಟ್ ಶಿವಲೀಲಾ, ಸಂಪನ್ಮೂಲ ವ್ಯಕ್ತಿ ರೇಣುಕಾ, ಶಿಕ್ಷಕರಾದ ರಂಗನಾಥ ಮಹಿಬೂಬ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts