More

    ಸೌದಿಯಿಂದ ಬಂದವರ ಆರೋಗ್ಯ ತಪಾಸಣೆ

    ವಿಜಯಪುರ: ನೆರೆಯ ಮಹಾರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿರುವುದು ಗಡಿಭಾಗದಲ್ಲಿ ಇನ್ನಿಲ್ಲದ ಆತಂಕ ಸೃಷ್ಠಿಸಿದೆ.
    ಗಡಿ ಜಿಲ್ಲೆ ವಿಜಯಪುರದ ಜನತೆ ಮಹಾರಾಷ್ಟ್ರದೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಾರೆ. ವ್ಯಾಪಾರ-ವಹಿವಾಟು, ಕೃಷಿ ಹಾಗೂ ಆಸ್ಪತ್ರೆ ವಿಷಯದಲ್ಲಿ ನಿಕಟ ಸಂಬಂಧವಿದೆ. ಇದೀಗ ಮಹಾರಾಷ್ಟ್ರದಲ್ಲಿ 37 ಜನರಿಗೆ ಕರೊನಾ ಸೋಂಕು ತಗಲಿರುವುದು ದೃಢಪಡುತ್ತಿದ್ದಂತೆ ಇತ್ತ ಗಡಿಭಾಗದ ಹಳ್ಳಿಯ ಜನ ತಲ್ಲಣಗೊಂಡಿದ್ದಾರೆ. ಗಡಿ ಜಿಲ್ಲೆ ಕಲಬುರಗಿಯಲ್ಲಿ ಕರೊನಾ ದೃಢಪಟ್ಟಿರುವುದು ಸಹ ಆತಂಕ ಹೆಚ್ಚಲು ಕಾರಣ.
    ಸೋಮವಾರ ಮಹಾರಾಷ್ಟ್ರದ ಜತ್ತ, ಸಾಂಗಲಿ, ಮೀರಜ್ ಮತ್ತು ಸೋಲಾಪುರ ಹಾಗೂ ನೆರೆಯ ಕಲಬುರಗಿಗೆ ಹೋಗುವ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕ್ಷೀಣವಾಗಿತ್ತು. ರೈಲ್ವೆ ನಿಲ್ದಾಣದಲ್ಲಿ ಬೆರಳೆಣಿಯಕಷ್ಟು ಜನ ಕಂಡು ಬಂದರು.

    ವಿದೇಶಿಗರ ಮೇಲೆ ನಿಗಾ

    ಜಿಲ್ಲೆಗೆ ಈವರೆಗೆ 194 ವಿದೇಶಿಗರು ಮರಳಿದ್ದಾರೆ. ಈ ಪೈಕಿ ಈಗಾಗಲೆ ಐದು ಜನರ ಪರೀಕ್ಷಾ ವರದಿ ಕಳುಹಿಸಲಾಗಿ ನಾಲ್ವರ ವರದಿ ನೆಗೆಟಿವ್ ಎಂದು ಬಂದಿದೆ. ಇನ್ನೊಬ್ಬರ ವರದಿ ‘ಪ್ರೊಜಿನಲ್ ನೆಗೆಟಿವ್’ ಬಂದಿದ್ದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಕರೊನಾ ಹಾವಳಿಗೆ ಅತೀ ಹೆಚ್ಚು ನಲಗಿದ ವಿವಿಧ 10 ರಾಷ್ಟ್ರಗಳ ಜನ ಜಿಲ್ಲೆಗೆ ಆಗಮಿಸಿದ್ದಾರೆ. ಹಾಗೆ ಬರುವವರ ಮಾಹಿತಿ ಆಧರಿಸಿ ಅವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಈವರೆಗೂ ಜಿಲ್ಲೆಯಲ್ಲಿ ಸೋಂಕು ದೃಢಪಡದಿರುವುದು ಸಂತಸದ ಸಂಗತಿ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

    ಸೌದಿಯಿಂದ ಬಂದ ತಂಡ

    ಸೌದಿ ಅರೇಬಿಯಾದಿಂದ ಬಂದ 44 ಜನರ ತಂಡವೊಂದರ ಪರೀಕ್ಷೆ ನಡೆಸಲಾಯಿತು. ಹೈದ್ರಾಬಾದ್‌ನಿಂದ ಕಲಬುರಗಿ ಮಾರ್ಗವಾಗಿ ಖಾಸಗಿ ಬಸ್‌ನಲ್ಲಿ ಆಗಮಿಸಿದ ಪ್ರಯಾಣಿಕರನ್ನು ನಗರ ಹೊರವಲಯದ ಶಿವಣಗಿಯಲ್ಲೇ ತಡೆಹಿಡಿಯಲಾಯಿತು. ಅಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಲಾಯಿತು. ಯಾರೊಬ್ಬರಲ್ಲೂ ಸೋಂಕಿನ ಲಕ್ಷಣಗಳು ಇಲ್ಲವಾದ ಕಾರಣ ಅವರನ್ನು ತಮ್ಮ ತಮ್ಮ ಮನೆಗಳಿಗೆ ಬೀಳ್ಕೊಡಲಾಯಿತು. ಅದಾಗ್ಯೂ 14 ದಿನಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾಗಿ ಜಿಲ್ಲಾಡಳಿತ ತಿಳಿಸಿದೆ.

    ಕರೊನಾ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಮದುವೆಗೆ ಯಾವುದೇ ತೊಂದರೆ ಇಲ್ಲದಿದ್ದರೂ ಮುನ್ನೆಚ್ಚರಿಕೆಯಾಗಿ 100 ಜನಕ್ಕಿಂತ ಹೆಚ್ಚಿನ ಜನರು ಸೇರಲು ನಿರ್ಬಂಧ ವಿಧಿಸಲಾಗಿದೆ. ಸ್ಕ್ವಾಬ್ ಪರೀಕ್ಷಾ ವರದಿ ಸಕಾಲಕ್ಕೆ ಮತ್ತು ಜವಾಬ್ದಾರಿಯಿಂದ ಲಭ್ಯವಾಗುವಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
    ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿ

    ಸೌದಿಯಿಂದ ಬಂದವರ ಆರೋಗ್ಯ ತಪಾಸಣೆ
    ಸೌದಿಯಿಂದ ಬಂದವರ ಆರೋಗ್ಯ ತಪಾಸಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts