More

    ಶಿವಮೊಗ್ಗ ಜಿಲ್ಲೆಯಲ್ಲಿ ಐದು ದಿನ ಪಂಚರತ್ನ ರಥಯಾತ್ರೆ ಸಂಚಾರ

    ಶಿವಮೊಗ್ಗ: ಜೆಡಿಎಸ್ ಪಂಚರತ್ನ ರಥಯಾತ್ರೆ ಫೆ.21ರಿಂದ 25ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಚರಿಸಲಿದ್ದು, ವಿಶೇಷವಾಗಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಿನ ಯಾತ್ರೆ ನಡೆಯಲಿದೆ ಎಂದು ಮಾಜಿ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ತಿಳಿಸಿದರು.
    ಫೆ.22 ಮತ್ತು ಫೆ.23ರಂದು ಶಿವಮೊಗ್ಗ ಗ್ರಾಮಾಂತರ ಭಾಗಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ಯಾತ್ರೆ ಆಗಮಿಸಲಿದೆ. 22ರಂದು ಭದ್ರಾವತಿ ತಾಲೂಕಿನ ಅರೆಬಿಳಚಿ ಕ್ಯಾಂಪ್‌ನಿಂದ ರಥಯಾತ್ರೆ ಆರಂಭಗೊಳ್ಳಲಿದೆ. ಕಲ್ಲಿಹಾಳ್ ವೃತ್ತ, ಎಮ್ಮೆಹಟ್ಟಿ, ಹೊಳೆಹೊನ್ನೂರು, ಕೈಮರ ವೃತ್ತ, ಆನವೇರಿ, ಮಂಗೋಟೆ, ಶಿವಮೊಗ್ಗ ತಾಲೂಕಿನ ಹರಮಘಟ್ಟ, ನುಗ್ಗೇಮಲ್ಲಾಪುರ, ಆಯನೂರು, ಮಂಡಘಟ್ಟ, ಶೆಟ್ಟಿಕೆರೆ, ಕುಂಸಿ ಮಾರ್ಗವಾಗಿ ಸಾಗಿ ಹಾರನಹಳ್ಳಿಯಲ್ಲಿ ಬಹಿರಂಗ ಸಭೆ ನಡೆಯಲಿದೆ. ಅಲ್ಲಿಂದ ಮಲವಗೊಪ್ಪಕ್ಕೆ ತೆರಳಿ ವಾಸ್ತವ್ಯ ಮಾಡಲಿದ್ದಾರೆ ಎಂದರು.
    ಮರುದಿನ ಬೆಳ್ಗಗೆ ಸೂಳೆಬೈಲ್ ವಾರ್ಡ್‌ನಿಂದ ಹೊರಟು ಯಲವಟ್ಟಿ ವೃತ್ತ, ಹಸೂಡಿ, ಶೆಟ್ಟಿಹಳ್ಳಿ, ಕಾಟಿಕೆರೆ, ಬೀ.ಬೀರನಹಳ್ಳಿ, ಪಿಳ್ಳಂಗೇರಿ ಮಾರ್ಗವಾಗಿ ಸಾಗಿ ಮಧ್ಯಾಹ್ನ 2ಕ್ಕೆ ಹೊಳೆಬೆನವಳ್ಳಿ ತಲುಪಲಿದೆ. ಮನೆ ಮನೆಗೆ ಕುಮಾರಣ್ಣ, ಮತ್ತೊಮ್ಮೆ ಶಾರದಮ್ಮ ಘೋಷಣೆ ಮೂಲಕ ಬೂತ್‌ಮಟ್ಟದ ಕಾರ್ಯಕರ್ತರ ಕಮಿಟಿ ಆರಂಭಿಸಲಾಗಿದೆ. ಎರಡು ದಿನಗಳ ರಥಯಾತ್ರೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಎಂಎಲ್‌ಸಿ ಎಸ್.ಎಲ್.ಬೋಜೇಗೌಡ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
    ಸೊರಬದಲ್ಲಿ ರಥಯಾತ್ರೆ ಅಂತಿಮವಾಗಿಲ್ಲ: ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ನಡುವೆ ಗೊಂದಲವಿದ್ದು ಇನ್ನೂ ರಥಯಾತ್ರೆ ಸಂಚರಿಸುವುದು ಅಂತಿಮವಾಗಿಲ್ಲ. ಸ್ಥಳೀಯ ಮುಖಂಡರಾದ ಬಾಸೂರ್ ಚಂದ್ರಶೇಖರ್, ಪ್ರಸನ್ನ ಅವರ ನಡುವೆ ಟಿಕೆಟ್‌ಗಾಗಿ ಪೈಪೋಟಿ ಇದೆ. ಹಾಗಾಗಿ ಅಲ್ಲಿ ಪಂಚರತ್ನ ಯಾತ್ರೆ ಹೋಗುತ್ತಿಲ್ಲ. ಭದ್ರಾವತಿಗೆ ಫೆ.21ರಂದು ಯಾತ್ರೆ ತಲುಪಲಿದ್ದು 25ರಂದು ತೀರ್ಥಹಳ್ಳಿಯಲ್ಲಿ ಪಂಚರತ್ನ ಮುಕ್ತಾಯಗೊಳ್ಳಲಿದೆ ಎಂದು ಶಾರದಾ ಪೂರ‌್ಯಾನಾಯ್ಕಾ ಹೇಳಿದರು.
    ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಸೋಮಿನಕೊಪ್ಪ ಕಾಂತರಾಜ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts