More

    ಸಿಮ್ಸ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ

    ಶಿವಮೊಗ್ಗ: ಸಿಮ್ಸ್(ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ)ನ ವಿದ್ಯಾರ್ಥಿನಿಯರ ವಸತಿನಿಲಯದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಭದ್ರಾವತಿಯ ಲಲಿತಾ(23) ಮೃತ ವಿದ್ಯಾರ್ಥಿನಿ. ಈಕೆ ವಿಜಯಪುರ ಮೂಲದ ಭದ್ರಾವತಿಯಲ್ಲಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ವೆಂಕಟೇಶ್ ಅವರ ಪುತ್ರಿಯಾಗಿದ್ದು ಸಿಮ್ಸ್‌ನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದಳು.

    ಮಂಗಳವಾರ ರಾತ್ರಿ ಸಹಪಾಠಿ ಕೊಪ್ಪದ ಜಾಯಿಸ್ ಎಂಬಾಕೆ ಜತೆ ವಸತಿನಿಲಯದ ಕೊಠಡಿಯಲ್ಲಿ ಓದಿಕೊಳ್ಳುತ್ತಿದ್ದರು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಜಾಯಿಸ್ ಮಹಡಿ ಮೇಲೆ ತೆರಳಿ ಓದು ಮುಂದುವರಿಸಿದ್ದಳು. ಲಲಿತಾ ಕೊಠಡಿಯಲ್ಲೇ ಉಳಿದುಕೊಂಡಿದ್ದಳು.
    ಬೆಳಗಿನ ಜಾವ 4ರ ಸುಮಾರಿಗೆ ಮತ್ತೆ ಜಾಯಿಸ್ ಕೊಠಡಿಗೆ ಬಂದಿದ್ದು ಬಾಗಿಲು ಲಾಕ್ ಮಾಡಲಾಗಿತ್ತು. ಸ್ನೇಹಿತೆ ಮಲಗಿರಬೇಕೆಂದು ಮತ್ತೆ ಮಹಡಿಗೆ ತೆರಳಿದ್ದಳು. ಬುಧವಾರ 10 ಗಂಟೆ ಸುಮಾರಿಗೆ ಬಂದು ಬಾಗಿಲು ಬಡಿದಾಗಲೂ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಅನುಮಾನಗೊಂಡು ಭದ್ರತಾ ಸಿಬ್ಬಂದಿ ಕರೆಸಿ ಬಾಗಿಲು ತೆರೆದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ವೆಂಕಟೇಶ್ ಅವರು ವಿಜಯಪುರದವರಾಗಿದ್ದು, ಭದ್ರಾವತಿಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು. ಅವರಿಗೆ ಇಬ್ಬರು ಪುತ್ರಿಯರಿದ್ದು ಮೃತ ಲಲಿತಾ ದೊಡ್ಡವಳಾಗಿದ್ದಾಳೆ. ಈಕೆಯ ತಂಗಿ ಮಂಡ್ಯದಲ್ಲಿ ಎಂಬಿಬಿಎಸ್ ಮಾಡುತ್ತಿದ್ದಾಳೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಹಾಗೂ ಸಿಮ್ಸ್ ವೈದ್ಯಾಧಿಕಾರಿಗಳು ಆಗಮಿಸಿ ಪರಿಶೀಲಿಸಿದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts