More

    ಶಿವಮೊಗ್ಗದಲ್ಲಿ ಕ್ರಷರ್​ ಸ್ಫೋಟ: ಇಲ್ಲಿನ ಕಲ್ಲುಕ್ವಾರಿಗೆ ಬಂದಿದ್ದ ಉಗ್ರ ಯಾಸಿನ್ ಭಟ್ಕಳ್!

    ಶಿವಮೊಗ್ಗ: ಶಿವಮೊಗ್ಗ ಹೊರವಲಯದ ಕಲ್ಲು ಕ್ವಾರಿಗಳು ಮತ್ತು ಉಗ್ರರ ನಡುವೆ ನಂ‌ಟಿದೆ ಎಂಬ ಆಘಾತಕಾರಿ ವಿಷಯ ಬಯಲಾಗಿದೆ.

    ಜ.21ರ ರಾತ್ರಿ ಹುಣಸೋಡಿನಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ 6 ಮಂದಿ ಬಲಿಯಾದರು. ಸ್ಫೋಟದ ತೀವ್ರತೆಗೆ ಜಿಲೆಟಿನ್​ ತುಂಬಿದ್ದ ಲಾರಿ ಸ್ಫೋಟಗೊಂಡು ಸುಟ್ಟುಕರಕಲಾಗಿತ್ತು. ಅಲ್ಲಿದ್ದ 50ಕ್ಕೂ ಹೆಚ್ಚಿ ಲಾರಿಗಳು, ಜೆಸಿಬಿಗಳಿಗೂ ಹಾನಿಯಾಗಿದ್ದು, ಇಡೀ ಪ್ರದೇಶ ಬೆಂಕಿಯ ಕೆನ್ನಾಲಗೆಯಲ್ಲಿ ಹೊತ್ತಿ ಉರಿದಿತ್ತು. ಘಟನೆ ನಡೆದ ಸ್ಥಳದಲ್ಲಿದ್ದವರ ದೇಹ ಛಿದ್ರಛಿದ್ರಗೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈ ಘಟನೆಗೆ ಸ್ಥಳೀಯರು ಮಾತ್ರವಲ್ಲ, ಸುತ್ತಮುತ್ತಲ ನಾಲ್ಕು ತಾಲೂಕಿನ ಜನತೆಯೇ ಬೆಚ್ಚಿಬಿದ್ದಿದ್ದಾರೆ. ಹುಣಸೋಡು, ಬಸವಗಂಗೂರು, ಕಲ್ಲಗಂಗೂರು, ದೇವಕತಿಕೊಪ್ಪ, ಮೊಜಪ್ಪನ ಹೊಸೂರು, ಗೆಜ್ಜೆನಹಳ್ಳಿ ಭಾಗದಲ್ಲಿ‌ 150ಕ್ಕೂ ಹೆಚ್ಚು ಕ್ರಷರ್ ಮತ್ತು ಕ್ವಾರಿಗಳಿವೆ. ಈ ಕ್ವಾರಿಗಳಿಂದಾಗಿ ಸ್ಥಳೀಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ, ಈ ನಡುವೆ ಜಿಲೆಟಿನ್ ಕಡ್ಡಿಗಳ ಸಂಗ್ರಹಕ್ಕಾಗಿ ಶಿವಮೊಗ್ಗದ ಕಲ್ಲು ಕ್ವಾರಿಗಳಿಗೆ ಉಗ್ರರು ಭೇಟಿ ನೀಡಿದ್ದರು ಎಂಬ ಸುದ್ದಿ ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಇದನ್ನೂ ಓದಿರಿ ಶವಗಳ ಮೇಲೆಯೇ ಓಡಾಡಿದ ಜನ… ಬೆಚ್ಚಿಬೀಳಿಸುತ್ತೆ ಶಿವಮೊಗ್ಗದಲ್ಲಿನ ಸ್ಫೋಟದ ಭೀಕರತೆ

    ಶಿವಮೊಗ್ಗದಲ್ಲಿ ಕ್ರಷರ್​ ಸ್ಫೋಟ: ಇಲ್ಲಿನ ಕಲ್ಲುಕ್ವಾರಿಗೆ ಬಂದಿದ್ದ ಉಗ್ರ ಯಾಸಿನ್ ಭಟ್ಕಳ್!ಹೌದು, 2008ರಲ್ಲಿ ಗುಜರಾತ್​ನ ಅಹಮದಾಬಾದ್​ನಲ್ಲಿ ಸಂಭವಿಸಿದ ಸ್ಫೋಟಕ್ಕೆ ಶಿವಮೊಗ್ಗ ಕ್ವಾರಿಗಳಿಂದಲೇ ಜಿಲೆಟಿನ್ ಕಡ್ಡಿ ಸಂಗ್ರಹಿಸಲಾಗಿತ್ತು ಎಂದು ಅಹಮದಾಬಾದ್ ಬಾಂಬ್ ಬ್ಲಾಸ್ಟ್ ಪ್ರಕರಣದ ಮಾಸ್ಟರ್ ಮೈಂಡ್ ಯಾಸಿನ್ ಭಟ್ಕಳ್ ತನಿಖೆ ವೇಳೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದ. ಶಿವಮೊಗ್ಗ ಹೊರವಲಯದ ಕ್ವಾರಿಗಳಿಗೆ ಈ ಹಿಂದೆ ಭೇಟಿ ನೀಡಿದ್ದ ಯಾಸಿನ್ ಭಟ್ಕಳ್, ಇಲ್ಲಿಂದಲೇ ಜಿಲೆಟಿನ್ ಕಡ್ಡಿ ಸಂಗ್ರಹಿಸಿದ್ದ. ಇದೀಗ ಹುಣಸೋಡು ಕ್ವಾರಿಯಲ್ಲಿ ಸ್ಫೋಟ ಸಂಭವಿಸುತ್ತಿದ್ದಂತೆ ಜಿಲ್ಲೆಯ ಜನತೆ ಮತ್ತಷ್ಟು ಆತಂಕಗೊಂಡಿದ್ದಾರೆ.

    ಇನ್ನು ಹುಣಸೋಡು ಸ್ಫೋಟ ಪ್ರಕರಣದ ತನಿಖೆಗಾಗಿ 6 ತಂಡಗಳನ್ನು ರಚಿಸಲಾಗಿದ್ದು, ಶಿವಮೊಗ್ಗ ಹೊರವಲಯದ ಕ್ವಾರಿಗಳಲ್ಲಿ ಸ್ಫೋಟಕ ಸಂಗ್ರಹಿಸಿರುವ ಸಂಶಯದ ಮೇಲೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಹಲವೆಡೆ ಅಮೋನಿಯಂ ನೈಟ್ರೇಟ್, ಡಿಟೋನೇಟರ್ಸ್, ಜಿಲೆಟಿನ್ ಜೆಲ್ ಕಡ್ಡಿಗಳು ಪತ್ತೆಯಾಗಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.

    ಈ ಪ್ರಕರಣ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೂರ್ವ ವಲಯ ಐಜಿಪಿ ಎಸ್.ರವಿ, ಸ್ಫೋಟಗೊಂಡ ಸ್ಥಳದ 10ಕ್ಕೂ ಹೆಚ್ಚು ಕಡೆ ಜೀವಂತ ಜಿಲೆಟಿನ್ ಕಡ್ಡಿ ಪತ್ತೆಯಾಗಿದೆ. ಸ್ಫೋಟಗೊಂಡ ಸ್ಥಳದ ಸುತ್ತಮುತ್ತ ಏನು ಬೇಕಾದರೂ ಸಿಗಬಹುದು, ನಾವು ಹುಡುಕಿ ತೆಗೆಯುತ್ತೇವೆ ಎಂದರು.

    ಶವಗಳ ಮೇಲೆಯೇ ಓಡಾಡಿದ ಜನ… ಬೆಚ್ಚಿಬೀಳಿಸುತ್ತೆ ಶಿವಮೊಗ್ಗದಲ್ಲಿನ ಸ್ಫೋಟದ ಭೀಕರತೆ

    ಧಾರವಾಡದಲ್ಲಿ ಅಪಘಾತ: ಸಾವಲ್ಲೂ ಒಂದಾದ ಬಾಲ್ಯ ಸ್ನೇಹಿತೆಯರು, ಅವರ ಮಕ್ಕಳೇ ಹೊರತಂದ ಈ ವಿಡಿಯೋ ಮನಕಲಕುತ್ತೆ!

    ಸಾರಿಗೆ ಬಸ್​-ಕಾರಿನ ನಡುವೆ ಭೀಕರ ಅಫಾಘಾತ, ಸ್ಥಳದಲ್ಲೇ ನಾಲ್ವರ ದುರ್ಮರಣ

    ಮಾತು ತಪ್ಪಿದ್ರೆ ಮನೆ ಹಾಳಾಗುತ್ತೆ… ಧರ್ಮಸ್ಥಳ ಶ್ರೀಕ್ಷೇತ್ರದಲ್ಲಿ ಕರ್ಪೂರ ಹಚ್ಚಿ ಜೆಡಿಎಸ್​-ಬಿಜೆಪಿ ಬೆಂಬಲಿತರ ಆಣೆ-ಪ್ರಮಾಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts