More

    ದಿನಕ್ಕೊಂದು ಭಗವದ್ಗೀತೆ ಶ್ಲೋಕಾ ಕಂಠಪಾಠ ಮಹಾಯಜ್ಞ: ಆ.ನಾ.ವಿಜಯೇಂದ್ರ

    ಶಿವಮೊಗ್ಗ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಸಂಸ್ಕೃತ ಭಾರತಿ, ವಾಸವಿ ವಿದ್ಯಾಲಯ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಆಶ್ರಯದಲ್ಲಿ ಭಗವದ್ಗೀತಾ ಪಾರಾಯಣ, ಕಂಠಪಾಠ ಮಹಾಯಜ್ಞ ಜ.1ರಿಂದ 2022ರ ಡಿ.11ರವರೆಗೆ ಹಮ್ಮಿಕೊಳ್ಳಲಾಗಿದೆ.
    ಮನೆ ಮನಗಳಲ್ಲಿ ಭಗವದ್ಗೀತೆಯನ್ನು ಮೊಳಗಿಸುವ ಮಹತ್ಕಾರ್ಯ ಸತತ 700 ದಿನ ನಡೆಯಲಿದ್ದು ದಿನಕ್ಕೊಂದರಂತೆ ಭಗವದ್ಗೀತಾ ಶ್ಲೋಕಾಗಳನ್ನು ಕಂಠಪಾಠ ಮಾಡಿಸುವ ಪ್ರಯತ್ನ ಇದಾಗಿದೆ ಎಂದು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ.ನಾ.ವಿಜಯೇಂದ್ರ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯಕ್ರಮ ನಡೆಯುತ್ತಿದ್ದು ಈಗಾಗಲೇ ವಿದೇಶಿಗರು ಸೇರಿ 400 ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
    ಭಗವದ್ಗೀತೆಯಲ್ಲಿ 700 ಶ್ಲೋಕಗಳಿದ್ದು ಕಂಠಪಾಠಕ್ಕೆ ಅನುಕೂಲವಾಗುವಂತೆ ಎಲ್ಲ ಶ್ಲೋಕ(ಕನ್ನಡ, ಇಂಗ್ಲೀಷ್, ಸಂಸ್ಕೃತ ಲಿಪಿ)ಗಳನ್ನು ಈ ಯೋಜನೆಯಲ್ಲಿ ನೊಂದಾಯಿಸಿದವರಿಗೆ ಒಟ್ಟಿಗೆ ಕಳಿಸಿ ಕೊಡಲಾಗುತ್ತದೆ. ಕಂಠಪಾಠ ಮಾಡುವ ಕ್ರಮವನ್ನೂ ತಿಳಿಸಲಾಗುವುದು. ದಿನಕ್ಕೆ ಕನಿಷ್ಟ 10 ನಿಮಿಷ ಕಲಿಯಲು ಆಸಕ್ತಿ ಹೊಂದಿರಬೇಕು ಎಂದು ಹೇಳಿದರು.
    ಆಸಕ್ತರು ಡಿ.31ರೊಳಗೆ ಟಿ.ವಿ ನರಸಿಂಹಮೂರ್ತಿ( 9902942060) ಅಥವಾ ಅ.ನಾ.ವಿಜಯೇಂದ್ರ ರಾವ್ (9448790127) ಅವರನ್ನು ಸಂಪರ್ಕಿಸಬಹುದು. ಜಿಲ್ಲಾ ಸಂಯೋಜಕ ಟಿ.ವಿ.ನರಸಿಂಹಮೂರ್ತಿ, ಸಂಸ್ಕೃತ ಭಾರತಿ ಶಿವಮೊಗ್ಗ ನಗರ ಅಧ್ಯಕ್ಷ ಎನ್.ವಿ. ಶಂಕರನಾರಾಯಣ, ಕೋಶಾಧ್ಯಕ್ಷ ಎನ್.ಆರ್.ಪ್ರಕಾಶ್, ನಿರ್ದೇಶಕಿ ಮಾಲಾ ರಾಮಚಂದ್ರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts