More

    ಪೊದೆಗಳ ಮಧ್ಯೆ ಪ್ರಾಚೀನ ಶಿವಲಿಂಗ ಪತ್ತೆ

    ಮುಳ್ಳೇರಿಯ: ಕಾಡು -ಪೊದೆಗಳನ್ನು ಸವರುವ ವೇಳೆ ಪುರಾತನ ಶಿವಲಿಂಗ ಪತ್ತೆಯಾಗಿದೆ. ಕಯ್ಯೂರು ಸಮೀಪದ ಕ್ಲೈಕೋಡ್ ವೀರಭದ್ರ ದೇವಸ್ಥಾನ ಬಳಿಯ ಗುಡ್ಡ ಪ್ರದೇಶವನ್ನು ಸವರುತ್ತಿದ್ದಾಗ ಶತಮಾನಗಳಷ್ಟ್ಟು ಹಳೆಯದಾದ ಶಿವಲಿಂಗ ಪತ್ತೆಯಾಗಿದೆ.
    ಶಿವಲಿಂಗ ಪತ್ತೆಯಾದ ದಿಬ್ಬದಲ್ಲಿ ಜ್ಯಾಮಿತಿ ಆಕಾರದಲ್ಲಿ ಕೆತ್ತಲಾದ ಹೆಂಚು ಮತ್ತು ಗ್ರಾನೈಟ್ ಅವಶೇಷಗಳು ಇದ್ದವು. ಸಮೀಪದ ದೇವಸ್ಥಾನಕ್ಕೆ ಸಂಬಂಧಿಸಿದ ಸ್ವರ್ಣ ಪ್ರಶ್ನಾ ಚಿಂತನೆಯಲ್ಲಿ ಈ ಹಿಂದೆ ಶಿವನ ದೇವಸ್ಥಾನ ಇರುವ ಬಗ್ಗೆ ಪ್ರಸ್ತಾಪವಾಗಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ. ಹೀಗಾಗಿಯೇ ಸಮೀಪದ ಖಾಸಗಿ ನಿವೇಶನದಲ್ಲಿ ಕಾಡು -ಪೊದೆ ಕಡಿಯಲು ಮುಂದಾದಾಗ ಮಣ್ಣಿನಡಿ ಹುದುಗಿದ್ದ ಸ್ಥಿತಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಸ್ಥಳೀಯ ನಿವಾಸಿ ಗೋಪಾಲಕೃಷ್ಣನ್ ತಿಳಿಸಿದ್ದಾರೆ.
    ಪತ್ತೆಯಾದ ಶಿವಲಿಂಗ 1200 ವರ್ಷಗಳಷ್ಟು ಹಳೆಯದು ಎಂದು ಕಾಞಂಗಾಡ್ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ಇತಿಹಾಸ ಶಿಕ್ಷಕ, ಸಂಶೋಧಕ ಡಾ.ನಂದಕುಮಾರ್ ಕೋರೋತ್ ಮತ್ತು ಸಿ.ಪಿ.ರಾಜೀವನ್ ವಿಜಯವಾಣಿಗೆ ತಿಳಿಸಿದ್ದಾರೆ. ಜೇಡಿಮಣ್ಣಿನ ಶಿವಲಿಂಗವು ಎಂಟನೇ ಶತಮಾನದ ಮೊದಲು ನಿರ್ಮಿಸಲಾದ ಪೂಜಾ ವಿಧಾನಗಳನ್ನು ಹೋಲುತ್ತದೆ. ಆ ಕಾಲದ ಶಿವಲಿಂಗಗಳು ಇಂದಿನ ಕಾಲಕ್ಕೆ ಹೋಲಿಸಿದರೆ ಚಿಕ್ಕದಾಗಿದ್ದವು. ಪುರಾತತ್ವ ಇಲಾಖೆ ಮಧ್ಯಪ್ರವೇಶದಿಂದ ಒಂದು ಪ್ರದೇಶದ ಆರಾಧನಾ ಪದ್ಧತಿಯ ಕಾಲಗಣನೆಯನ್ನು ನಿರ್ಧರಿಸಬಹುದು ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts