More

    ಡಿಕೆಶಿ ಅವರದ್ದು ಉತ್ತರ ಕುಮಾರನ ಪೌರುಷ

    ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರದ್ದು ಉತ್ತರನ ಪೌರುಷವಿದ್ದಂತೆ. ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುವ ಧೈರ್ಯವೂ ತೋರಲಿಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ವ್ಯಂಗ್ಯವಾಡಿದರು.

    ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶಿವಕುಮಾರ್ ಎರಡೂವರೆ ವರ್ಷ ಮುಖ್ಯಮಂತ್ರಿಯಾಗುತ್ತೇನೆಂದು ಹೇಳುವ ಎದೆಗಾರಿಕೆ ತೋರುತ್ತಿಲ್ಲ ಎಂದು ಕಾಲೆಳೆದರು.

    ವಿಧಾನಸಭೆ ಚುನಾವಣೆಗೂ ಮುನ್ನ ಮಾಜಿ ಪ್ರಧಾನಿ ದೇವೇಗೌಡರು, ಎಸ್.ಎಂ. ಕೃಷ್ಣ, ಡಿ.ವಿ. ಸದಾನಂದ ಗೌಡ, ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಒಮ್ಮೆ ಅವಕಾಶ ಕೊಡಿ ನಾನು ಸಿಎಂ ಆಗುತ್ತೇನೆ ಎಂದು ಕೋರಿದ್ದರು. ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಉಪಮುಖ್ಯಮಂತ್ರಿ ಆಗಿದ್ದಾರೆ. ಆದರೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಾವೇ ಮುಖ್ಯಮಂತ್ರಿ ಎನ್ನುತ್ತಾರೆ. ಕೆ.ಎನ್. ರಾಜಣ್ಣ ಮೂವರು

    ಉಪಮುಖ್ಯಮಂತ್ರಿಗಳಾಬೇಕು ಎಂದರೆ, ಮಾಜಿ ಸಚಿವ ಬಸವರಾಜರಾಯರೆಡ್ಡಿ 6 ಮಂದಿ ಉಪಮುಖ್ಯಮಂತ್ರಿಗಳಾಗಲಿ ಎಂದು ಹೇಳಿಕೆ ನೀಡಿದ್ದಾರೆ. ಶಿವಕುಮಾರ್ ಮಾತೇ ಆಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ಅಧಿಕಾರದಲ್ಲಿ ಮುಂದುವರಿಯುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಎಲ್ಲಿ ಸಿಗುತ್ತದೆ ಎಂದು ಪ್ರಶ್ನಿಸಿದರು.

    ಸೋನಿಯಾ ನಮ್ಮ ತಾಯಿ, ಪ್ರಿಯಾಂಕ ನನ್ನ ಸಹೋದರಿ ಎಂದಿರಿ. ಒಂದೇ ಒಂದು ಬಾರಿ ಅಧಿಕಾರ ಕೊಡಿ ಎಂದು ಗೋಗರೆದಿರಿ. ಆದರೆ ನೀವು ಸಿಎಂ ಆದ್ರಾ? ನಾನೂ ಎರಡೂವರೆ ವರ್ಷ ಮುಖ್ಯಮಂತ್ರಿ ಎಂದು ಹೇಳುವ ತಾಕತ್ತು ಇಲ್ವಾ? ಸಿದ್ದರಾಮಯ್ಯಗೆ ಇರುವ ಎದೆಗಾರಿಕೆ ನಿಮಗೆ ಇಲ್ವಲ್ಲ. ಎಂದು ಶಿವಕುಮಾರ್ ಅವರನ್ನು ಕೆಣಕಿದರು.

    ಮೈತ್ರಿ ಸರ್ಕಾರ ಯಾರು ತೆಗೆದರು ಎಂಬುದು ಕುಮಾರಸ್ವಾಮಿ ಅವರಿಗೆ ಮಾತ್ರ ಗೊತ್ತು, ಆದರೆ ನಮ್ಮ ಯಾವ ಶಾಸಕರ ಜತೆ ಅದನ್ನು ಹಂಚಿಕೊಂಡಿಲ್ಲ. ಈಗ ಒಂದೊಂದೆ ಹೇಳುತ್ತಿದ್ದಾರೆ, ಜನರಿಗೆ ಸತ್ಯವನ್ನ ಹೇಳಬೇಕು ಎಂದು ದೇವೇಗೌಡ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts