More

    ಶಿವಸೇನೆಯಿಂದ ಮತ್ತೆ ಕ್ಯಾತೆ

    ಬೆಳಗಾವಿ: ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನೆ ಮತ್ತೆ ಕ್ಯಾತೆ ತೆಗೆದು ಮಂಗಳವಾರ ಪ್ರತಿಭಟನೆ ಮಾಡಿದೆ. ಅಲ್ಲದೆ, ಕರ್ನಾಟಕ ಗಡಿ ಪ್ರವೇಶಕ್ಕೆ ಶಿವಸೇನೆಯ ಕಾರ್ಯಕರ್ತರು ಯತ್ನಿಸಿದ್ದಾರೆ.

    ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸುವ ವಿಚಾರವಾಗಿ ಶಿವಸೇನೆ ಮುಖಂಡ ವಿಜಯ ಶಾಮರಾವ್ ದೇವನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮಹಾರಾಷ್ಟ್ರದ ಗಡಿ ಭಾಗ ಕವಳಿಕಟ್ಟಿ ಗ್ರಾಮದಲ್ಲಿ 80ಕ್ಕೂ ಹೆಚ್ಚು ಶಿವಸೇನೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಮತ್ತೆ ಉದ್ಧಟತನ ಮುಂದುವರಿಸಿದ ಶಿವಸೇನೆ ಮಾತು ಕೇಳಿ ಕೆಲ ಮರಾಠಿಗರಿಂದ ಪ್ರತಿಭಟನೆ ನಡೆದಿದೆ. ಇದರಿಂದ ಕರ್ನಾಟಕ- ಮಹಾರಾಷ್ಟ್ರದ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಎಷ್ಟೇ ಹೇಳಿದರೂ ಸಹ ಬುದ್ಧಿ ಕಲಿಯದ ಶಿವಸೇನೆ, ಸದ್ಯ ಮಣಗುತ್ತಿ ಗ್ರಾಮಸ್ಥರು ಸುಮ್ಮನಿದ್ದರೂ ಸಹ ಕಾಲ್ಕೆರೆದು ಜಗಳಕ್ಕೆ ಬರುತ್ತಿದೆ. ಸದ್ಯ ಕರ್ನಾಟಕ ಪ್ರವೇಶಿಸದಂತೆ ಶಿವಸೇನೆ ಕಾರ್ಯಕರ್ತರನ್ನು ರಾಜ್ಯ ಪೊಲೀಸರು ತಡೆ ಹಿಡಿದರು.

    ಕೆಲ ಹೊತ್ತಿನ ಬಳಿಕ ಶಿವಸೇನೆ ಕಾರ್ಯಕರ್ತರು ಹುಕ್ಕೇರಿ ತಹಸೀಲ್ದಾರ್ ಅವರಿಗೆ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸುವಂತೆ ಮನವಿ ಸಲ್ಲಿಸಿದರು. ಘಟನೆ ಹಿನ್ನೆಲೆ: 15 ದಿನಗಳ ಹಿಂದೆ ಮಣಗುತ್ತಿ ಗ್ರಾಮಸ್ಥರು ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆದರೆ, ಆ ಜಾಗ ಮೂರು ಗ್ರಾಮಗಳಿಗೆ ಸೇರಿದ್ದಾಗಿತ್ತು.

    ಇದರಿಂದಾಗಿ ವಿವಿಧ ಸಂಘಟನೆ ಮತ್ತು ಧರ್ಮದವರು ವಿರೋಧ ವ್ಯಕ್ತಪಡಿದ್ದರು. ನಂತರ ಸಭೆ ನಡೆಸಿ ಶಿವಾಜಿ ಮೂರ್ತಿ ಸೇರಿ ಐದು ಮೂರ್ತಿಗಳನ್ನು ಪ್ರತಿಷ್ಠಾಪಿಸಲು ತೀರ್ಮಾನ ಮಾಡಿದ್ದರು. 15 ದಿನಗಳಾದರೂ ಮೂರ್ತಿ ಪ್ರತಿಷ್ಠಾಪನೆಯಾಗಿಲ್ಲ ಎಂದು ಈಗ ಶಿವಸೇನೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts