More

    ಶಿರ್ವ ಮಹಿಳೆ ಕುವೈತ್ ಪೊಲೀಸ್ ವಶ

    ಮಂಗಳೂರು: ಸ್ವದೇಶಕ್ಕೆ ಮರಳಲು ಕುವೈತ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉಡುಪಿ ಜಿಲ್ಲೆಯ ಶಿರ್ವದ ಮಹಿಳೆ ದಿಢೀರ್ ನಾಪತ್ತೆಯಾಗಿದ್ದು, ಕುವೈತ್ ಪೊಲೀಸರ ವಶದಲ್ಲಿರುವುದು ಖಚಿತಗೊಂಡಿದೆ. ಆದರೆ ಕಾರಣ ತಿಳಿದುಬಂದಿಲ್ಲ.

    ‘ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ಸೆಂಟರ್‌ನಿಂದ ಭಾನುವಾರ ಸಾಯಂಕಾಲ ತಾಯಿ ಕೊನೆಯ ಬಾರಿ ಕರೆ ಮಾಡಿದ್ದರು. ಬಳಿಕ ಅವರ ಮೊಬೈಲ್‌ಗೆ ಎಷ್ಟು ಕರೆ ಮಾಡಿದರೂ ಸ್ವಿಚ್ಡ್‌ಆಫ್ ಎಂದೇ ಬರುತ್ತಿತ್ತು’ ಎಂದು ಮಹಿಳೆಯ ಪುತ್ರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
    ಇದನ್ನೂ ಓದಿ:  ಆರು ಮಂದಿ ಡ್ರಗ್ ಪೆಡ್ಲರ್​ಗಳ ಸೆರೆ: 2 ಕೆ.ಜಿ. ಚೆರೆಸ್, ಗಾಂಜಾ ಜಪ್ತಿ

    ಮೊದಲು ಬಹರೈನ್‌ನ ಶಶಿಧರ ಶೆಟ್ಟಿ ಎಂಬವರು ದೂರವಾಣಿ ಮೂಲಕ ಸಂಪರ್ಕಿಸಿದರು. ಬಳಿಕ ಅನಿವಾಸಿ ಭಾರತೀಯರ ಸಮಿತಿ ಕರ್ನಾಟಕ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಕುವೈತ್‌ನಲ್ಲಿರುವ ಮಂಜೇಶ್ವರ ಮೋಹನ್‌ದಾಸ್ ಕಾಮತ್, ಕೇರಳ- ಕರ್ನಾಟಕ ಮುಸ್ಲಿಂ ಅಸೋಸಿಯೇಷನ್ ಕರ್ನಾಟಕ ವಿಭಾಗದ ಲತೀಫ್, ಅಲ್ಲಿನ ತುಳು ಕೂಟ, ಕನ್ನಡ ಸಂಘದ ಮುಖಂಡರು ದೂರವಾಣಿ ಕರೆ ಮಾಡಿ ನೆರವಿನ ಭರವಸೆ ನೀಡಿದ್ದಾರೆ.

    ಇದನ್ನೂ ಓದಿ: ಕೃಷಿ ಜಮೀನು ಗುತ್ತಿಗೆ ಪಡೆದು ಗಾಂಜಾ ಬೆಳೆದ- ಮಾಹಿತಿ ಇಲ್ಲದ ಜಮೀನು ಮಾಲೀಕರು ಅಂದರ್​!

    ಮಹಿಳೆ ಪೊಲೀಸ್ ವಶದಲ್ಲಿರುವುದನ್ನು ಪತ್ತೆ ಹಚ್ಚುವಲ್ಲಿ ಕೆಕೆಎಂಎ ಕರ್ನಾಟಕ ವಿಭಾಗದ ಲತೀಫ್ ಪ್ರಮುಖ ಪಾತ್ರವಹಿಸಿದ್ದು, ಬಿಡುಗಡೆಗೆ ಸಂಬಂಧಿಸಿ ಡಾ.ಆರತಿ ಕೃಷ್ಣ ಅವರು ಕುವೈತ್‌ನ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಅವರ ಸೂಚನೆಯಂತೆ ನಾವು ಅನಿವಾಸಿ ಭಾರತೀಯರು ಕೆಲ ಮಂದಿ ಬುಧವಾರ ರಾಯಭಾರಿ ಕಚೇರಿಯ ಸೆಕೆಂಡ್ ಸೆಕ್ರೆಟರಿ ಸೆಬಿ ಅವರನ್ನು ಭೇಟಿಯಾಗಲಿದ್ದೇವೆ ಎಂದು ಮೋಹನ್‌ದಾಸ್ ಕಾಮತ್ ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಭಾರತದ ಮಣ್ಣಿನಲ್ಲೇ ಮಿಳಿತವಾಗಿದೆ ಪ್ರಜಾಪ್ರಭುತ್ವದ ಸಾರಸತ್ವ

    ಪೊಲೀಸ್ ವಶದಲ್ಲಿರುವ ಮಹಿಳೆ ಕಳೆದ 28 ವರ್ಷಗಳಿಂದ ಕುವೈತ್ ಪ್ರಜೆಯೋರ್ವರ ಮನೆಯಲ್ಲಿ ಕೆಲಸಕ್ಕಿದ್ದರು. ಈಗ ಅವರಿಗೆ 62 ವರ್ಷ. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರ ಸಲಹೆಯಂತೆ ಅವರು ಊರಿಗೆ ಮರಳಲು ತೀರ್ಮಾನಿಸಿದ್ದರು. ಭಾನುವಾರ ರಾತ್ರಿ ಕುವೈತ್‌ನಿಂದ ಬೆಂಗಳೂರಿಗೆ ತೆರಳುವ ಇಂಡಿಗೋ ವಿಮಾನದಲ್ಲಿ ಟಿಕೆಟ್ ಕಾದಿರಿಸಿದ್ದರು.

    ದೇವಸ್ಥಾನದ ಬಳಿ ಮಹಿಳೆ ನಿಲ್ಲಿಸಿದ್ದ ಸ್ಕೂಟರ್ ಕಳವುಗೈದು ಸಿಕ್ಕಿಬಿದ್ದ ಕಳ್ಳ ಸೈಯದ್ ಸಾದಿಕ್ ಸಲೀಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts