More

    ಕ್ಲೈಮ್ಯಾಕ್ಸ್​ ಹಂತಕ್ಕೆ ಶಿರಾ ಉಪಸಮರ, ಅಬ್ಬರಿಸಿದ ಅತಿರಥಮಹಾರಥರ ದಂಡು

    ತುಮಕೂರು: ಶಿರಾ ಉಪಸಮರ ಕ್ಲೈಮ್ಯಾಕ್ಸ್​ ಹಂತ ತಲುಪಿದೆ. ಸಿಎಂ ಬಿ.ಎಸ್​.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ, ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಸೇರಿದಂತೆ ಅತಿರಥಮಹಾರಥರ ದಂಡೇ ಕ್ಷೇತ್ರದಾದ್ಯಂತ ಶುಕ್ರವಾರ ಅಬ್ಬರದ ಪ್ರಚಾರ ನಡೆಸಿತು.

    ದಣಿವರಿಯದ ದಳಪತಿ: ವಾರದಿಂದ ಕ್ಷೇತ್ರದಲ್ಲೇ ಬೀಡುಬಿಟ್ಟಿರುವ ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಶುಕ್ರವಾರವೂ ಬಿರುಸಿನ ಪ್ರಚಾರ ಮುಂದುವರಿಸಿದರು. ಶಿರಾ ನಗರದಲ್ಲಿ ಮುಸ್ಲಿಂ ಸಮುದಾಯದವರಿಗೆ ಈದ್​ ಮಿಲಾದ್​ ಶುಭಕೋರಿ ಅವರೊಂದಿಗೆ ಸಭೆ ನಡೆಸಿದರಲ್ಲದೆ, ಗೌಡನಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು. ಬಿಸಿಲು, ಧೂಳಿಗೆ ಕೊಂಚವೂ ದಣಿಯದ ದೇವೇಗೌಡರ ಉತ್ಸಾಹ ಯುವಕರನ್ನು ನಾಚಿಸುವಂತಿತ್ತು.

    ಕ್ಲೈಮ್ಯಾಕ್ಸ್​ ಹಂತಕ್ಕೆ ಶಿರಾ ಉಪಸಮರ, ಅಬ್ಬರಿಸಿದ ಅತಿರಥಮಹಾರಥರ ದಂಡುಮದಲೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಯಡಿಯೂರಪ್ಪ, ಸಂಜೆ ಶಿರಾ ನಗರದಲ್ಲಿ ರೋಡ್​ ಶೋ ನಡೆಸುವ ಮೂಲಕ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದರು. ಇಡೀ ನಗರ ಕೇಸರಿಮಯವಾಗಿತ್ತು. ಬಿಎಸ್​ವೈಗೆ ಡಿಸಿಎಂ ಗೋವಿಂದ ಕಾರಜೋಳ, ಸಚಿವ ಬಿ.ಶ್ರೀರಾಮಲು, ಸಂಸದರಾದ ಎ.ನಾರಾಯಣಸ್ವಾಮಿ, ಪ್ರತಾಪ್​ ಸಿಂಹ, ಮುನಿಸ್ವಾಮಿ, ಪಿ.ಸಿ.ಮೋಹನ್​, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿಲ್ಲಾಧ್ಯಕ್ಷ ಸುರೇಶ್​ಗೌಡ ಸಾಥ್​ ನೀಡಿದರು.

    ಉಪಚುನಾವಣೆ ಮುಗಿದ ಬಳಿಕ ಶಿರಾ ತಾಲೂಕಿನಲ್ಲಿರುವ 65 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡದಿದ್ದರೆ, ಶಿರಾ ನಗರದಿಂದ ಬೆಂಗಳೂರಿನ ವಿಧಾನಸೌಧವರೆಗೆ ಪಾದಯಾತ್ರೆ ನಡೆಸುವುದಾಗಿ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಕ್ಷೇತ್ರದ ಸೋರೆಕುಂಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್​ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಚುನಾವಣಾ ಪ್ರಚಾರ ನಡೆಸಿದರು.

    ಕಾಂಗ್ರೆಸ್​ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರವಾಗಿ ಮಾಜಿ ಸಚಿವ ರಮಾನಾಥ್​ರೈ, ಅಲ್ಲಂವೀರಭದ್ರಪ್ಪ, ಪ್ರಕಾಶ್​ ರಾಥೋಡ್​, ಕೆ.ಎನ್​.ರಾಜಣ್ಣ ಸೇರಿದಂತೆ ಹಲವು ಮುಖಂಡರು ವಿವಿಧೆಡೆ ಪ್ರಚಾರ ನಡೆಸಿದರು.

    ಮತದಾನಕ್ಕೆ 3 ದಿನ ಇರುವಾಗಲೇ ನಗರಸಭೆ ಸದಸ್ಯನ ಕಿಡ್ನ್ಯಾಪ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts