More

    ಗುಜರಾತ್​ ಕರಾವಳಿಯಲ್ಲಿ 20 ಭಾರತೀಯರಿದ್ದ ಹಡಗಿನ ಮೇಲೆ ಡ್ರೋನ್​ ದಾಳಿ: ನೌಕಾಪಡೆ ಹೈ ಅಲರ್ಟ್​

    ನವದೆಹಲಿ: ಇಸ್ರೇಲ್​ಗೆ ಸಂಬಂಧಿಸಿದ ವ್ಯಾಪಾರಿ ಹಡುಗಿನ ಮೇಲೆ ಗುಜರಾತ್​ ಕರಾವಳಿ ಪ್ರದೇಶ ವೆರಾವಲ್​ನ ನೈರುತ್ಯಕ್ಕೆ ಸುಮಾರು 200 ಕಿ.ಮೀ. ದೂರದಲ್ಲಿ ಡ್ರೋನ್​ ದಾಳಿ ನಡೆದಿರುವುದಾಗಿ ಶನಿವಾರ ವರದಿಯಾಗಿದೆ.

    ಎಂವಿ ಚೆಮ್​ ಪ್ಲುಟೋ ಹೆಸರಿನ ಹಡಗಿನ ಮೇಲೆ ದಾಳಿ ನಡೆದಿದ್ದು, ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಗುಜರಾತಿನ ಫೋರ್​ಬಂದರಿನಿಂದ ಸುಮಾರು 217 ನಾಟಿಕಲ್​ ಮೈಲಿ ದೂರದಲ್ಲಿ ಈ ಘಟನೆ ನಡೆದಿದೆ.

    ಡ್ರೋನ್​ ದಾಳಿಯಿಂದ ಹೊತ್ತಿಕೊಂಡ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಲಾಗಿದ್ದು, ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ನೌಕಾಪಡೆಯ ಯುದ್ಧನೌಕೆಗಳನ್ನು ತೊಂದರೆಗೊಳಗಾದ ಹಡಗಿನ ಕಡೆಗೆ ರವಾನಿಸಲಾಗಿದೆ. ಹಾನಿಗೊಳಗಾದ ಹಡಗಿನಲ್ಲಿ 20 ಭಾರತೀಯ ಸಿಬ್ಬಂದಿ ಇದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂಬುದು ಖಚಿತವಾಗಿದೆ.

    ಹಡಗಿನ ರಚನೆಯಲ್ಲಿ ಕೆಲವು ಹಾನಿಯಾಗಿದ್ದು, ಸಮುದ್ರದ ನೀರು ಕೂಡ ಒಳಗೆ ನುಗ್ಗಿರುವ ಮಾಹಿತಿ ಇದೆ. ಹಡಗು ಇಸ್ರೇಲ್​ಗೆ ಸಂಬಂಧಿಸಿದ್ದಾಗಿದ್ದು, ಸೌದಿ ಅರೇಬಿಯಾದಿಂದ ಭಾರತಕ್ಕೆ ಬರುತ್ತಿತ್ತು ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅಲರ್ಟ್​ ಆಗಿರುವ ಭಾರತೀಯ ನೌಕಾ ಪಡೆ ಕಾರ್ಯಾಚರಣೆಗೆ ಇಳಿದಿದೆ. 20 ಭಾರತೀಯರು ಸೇರಿ ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.

    ಭಾರತೀಯ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ ವಿಕ್ರಮ್, ಪೋರಬಂದರ್ ಕರಾವಳಿಯಿಂದ 217 ನಾಟಿಕಲ್ ಮೈಲು ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಡ್ರೋನ್​ ದಾಳಿ ಒಳಗಾದ ಎಂವಿ ಕೆಮ್ ಪ್ಲುಟೊ ಹೆಸರಿನ ವ್ಯಾಪಾರಿ ನೌಕೆಯ ಕಡೆಗೆ ಚಲಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಲ್ಲಿರುವ ಇತರ ಹಡಗುಗಳಿಗೂ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಪ್ಲುಟೋ ಹಡುಗು ಸೌದಿ ಅರೇಬಿಯಾದಿಂದ ಕಚ್ಛಾ ತೈಲವನ್ನು ತುಂಬಿಕೊಂಡು ಕರ್ನಾಟಕದ ಮಂಗಳೂರಿನ ಕಡೆಗೆ ಹೊರಟಿತ್ತು. ದಾಳಿಯಲ್ಲಿ ಹಡಗಿನ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ICGS ವಿಕ್ರಮ್ ಅನ್ನು ಭಾರತೀಯ ವಿಶೇಷ ಆರ್ಥಿಕ ವಲಯದ ಗಸ್ತುಗೆ ನಿಯೋಜಿಸಿದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಇಸ್ರೇಲಿ ಹಡಗಿನ ಕಡೆಗೆ ಧಾವಿಸಿದ್ದು, ಸಿಬ್ಬಂದಿಯ ಸುರಕ್ಷತೆ ಬಗ್ಗೆ ಖಚಿತಪಡಿಸಿದೆ.

    ಡ್ರೋನ್​ ಎಲ್ಲಿಂದ ಬಂತು ಎಂಬುದರ ಬಗ್ಗೆ ಈವರೆಗೂ ಯಾವುದೇ ಮಾಹಿತಿ ದೊರೆತಿಲ್ಲ. ಸದ್ಯ ನೌಕಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಜಮಾಲ್​ ಕುಡು ಹಾಡೇನೋ ಚೆನ್ನಾಗಿದೆ ಆದ್ರೆ ಅರ್ಥವೇನು? ಮೊದಲು ಹಾಡಿದ್ದೆಲ್ಲಿ? ಇಲ್ಲಿದೆ ಇಂಟ್ರೆಸ್ಟಿಂಗ್​ ಉತ್ತರ…

    ಜಗನ್ನಾಥ ದೇಗುಲ ಪ್ರವೇಶ ಗದ್ದಲ ಸೃಷ್ಟಿಸಿದ ‘ಕರ್ಲಿ ಟೇಲ್ಸ್’ ಜಾನಿ ಯಾರು? ಗೋಮಾಂಸಕ್ಕೂ ಆಕೆಗೂ ಏನು ಸಂಬಂಧ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts