More

    ಟಾರ್ಚ್​ಗಳನ್ನು ಬೆಳಗುವುದರಿಂದ ಕೋವಿಡ್​ 19 ಸೋಂಕು ಗುಣವಾಗಲ್ಲ, ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಉವಾಚ

    ನವದೆಹಲಿ: ಆಕಾಶದೆಡೆಗೆ ಟಾರ್ಚ್​ಗಳನ್ನು ಬೆಳಗುವುದರಿಂದ ಕರೊನಾ ವೈರಸ್​ ಸೋಂಕಿನ ಹರಡುವಿಕೆ ತಡೆಗಟ್ಟಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಹೇಳಿದ್ದಾರೆ.

    ಭಾನುವಾರ ರಾತ್ರಿ 9 ಗಂಟೆಗೆ ಎಣ್ಣೆದೀಪ ಹಚ್ಚುವುದು, ಮೊಬೈಲ್​ಫೋನ್​ಗಳ ಫ್ಲ್ಯಾಶ್​ ಲೈಟ್​ ಬೆಳಗುವ ಮೂಲಕ ಕರೋನಾ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ. ಅವರ ಈ ಕ್ರಮವನ್ನು ರಾಹುಲ್​ ಗಾಂಧಿ ಲೇವಡಿ ಮಾಡಿದ್ದಾರೆ.

    ಕೋವಿಡ್​ 19 ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚೆಚ್ಚು ಪರೀಕ್ಷಾ ಕೇಂದ್ರಗಳನ್ನು ಆರಂಭಿಸುವ ಅವಶ್ಯಕತೆ ಇದೆ. ಸರ್ಕಾರ ಇದನ್ನು ಮಾಡಬೇಕು. ಅದು ಬಿಟ್ಟು ಚಪ್ಪಾಳೆ ತಟ್ಟಿ, ದೀಪ ಬೆಳಗಿ ಎಂದು ಹೇಳುವುದು ಸರಿಯಲ್ಲ. ಇದರಿಂದ ರಾಷ್ಟ್ರದಲ್ಲಿನ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದು ಟ್ವೀಟ್​ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

    ರಾಜ್ಯಗಳಿಗೆ 1 ಲಕ್ಷ ಕೋಟಿ ರೂ. ನೆರವು ನೀಡಿ: ಇದಕ್ಕೂ ಮುನ್ನ ವಿಡಿಯೋ ಕಾನ್ಫರೆನ್ಸ್​ ಮೂಲಕ ಸುದ್ದಿಗೋಷ್ಠಿ ನಡೆಸಿದ್ದ ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನಾಟೆ, ಕರೊನಾ ಸೋಂಕಿನ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಬಲ ತುಂಬಬೇಕು. ಅವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂದು ಸಲಹೆ ನೀಡಿದ್ದರು.

    ಎಲ್ಲ ರಾಜ್ಯಗಳಿಗೆ 1 ಲಕ್ಷ ಕೋಟಿ ರೂ. ನೆರವು ನೀಡಬೇಕು. ಜತೆಗೆ ಬಾಕಿವುಳಿಸಿಕೊಂಡಿರುವ 42 ಸಾವಿರ ಕೋಟಿ ರೂ. ಜಿಎಸ್​ಟಿಯ ಪಾಲನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದರು.

    ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ, ಅನುಮತಿ ಪಡೆದುಕೊಂಡು ಎಲ್ಲ ರಾಜ್ಯಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಬಗ್ಗೆ ಭಾರತೀಯ ರಿಸರ್ವ್​ ಬ್ಯಾಂಕ್​ ಚಿಂತನೆ ನಡೆಸಬೇಕು ಎಂದು ಹೇಳಿದ್ದರು.

    ಜನರು ದೀಪ ಹಚ್ಚಲು ಹಚ್ಚಲು ಹೋಗಿ ತಮ್ಮ ಮನೆಗೇ ಬೆಂಕಿ ಇಟ್ಟು ಸುಟ್ಟುಕೊಳ್ಳದಿದ್ದರೆ ಸಾಕು…’ ಮೋದಿಯವರನ್ನು ವ್ಯಂಗ್ಯವಾಡಿದ ಶಿವಸೇನೆ ನಾಯಕ

    ‘ದೀಪ ಬೆಳಗೋಣ..’ ಎಂದು ಕರೆ ನೀಡಿದ ಪ್ರಧಾನಮಂತ್ರಿ ಮೋದಿ: ಇದಕ್ಕೆ ‘ನೀವೇನಂತೀರಿ’ ಎಂದು ಕೇಳಿದ್ದಕ್ಕೆ ‘ನಿದ್ದೆ ಬಂದರೆ ಮಾಡ್ತೀನಿ’ ಎಂದ್ರು ದೀದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts