More

    ಕೆಸರು ಗದ್ದೆಯಲ್ಲಿ ಬಿದ್ದೆದ್ದರು!

    ಶಿವಮೊಗ್ಗ: ರೈತ ದಸರಾದ ಅಂಗವಾಗಿ ಮಲವಗೊಪ್ಪದಲ್ಲಿ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿತ್ತು. ನಿತ್ಯದ ಕಾಯಕದಿಂದ ಬಿಡುವು ಮಾಡಿಕೊಂಡ ರೈತರು, ರೈತ ಮಹಿಳೆಯರು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡರು. ರೈತರ ಮಕ್ಕಳು ಶಾಲೆಗೆ ಬಿಡುವು ಮಾಡಿಕೊಂಡು ಕೆಸರು ಗದ್ದೆಯಲ್ಲಿ ಬಿದ್ದಿದ್ದರು.
    ಮಹಿಳೆಯರು, ಯುವತಿಯರು ಕೆಸರು ಗದ್ದೆಯಲ್ಲಿ ಓಡುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ವಿವಿಧ ವಿಭಾಗಗಳಲ್ಲಿ ಮಧ್ಯಾಹ್ನದವರೆಗೂ ಸ್ಪರ್ಧೆಗಳು ನಡೆದವು. ಉತ್ಸಾಹದ ಚಿಲುಮೆಯಂತಿದ್ದ ಸ್ಪರ್ಧಾಳುಗಳು ಬಿಸಿಲಿನ ತಾಪಕ್ಕೆ ಅಂಜದೇ ಕೆಸರು ಗದ್ದೆಯಲ್ಲಿ ಸೈ ಎನಿಸಿಕೊಂಡರು.
    ಕಳೆಗಟ್ಟಿದ ಮಲೆನಾಡು ದಸರಾ
    ದಸರಾ ಕಳೆಗಟ್ಟಿದೆ. ಒಂದರ ಹಿಂದೊಂದು ಸ್ಪರ್ಧೆಗಳು, ಪ್ರತಿಯೊಂದರಲ್ಲೂ ಭಾಗವಹಿಸುವ ನಾಗರಿಕರ ಸ್ಪರ್ಧಾ ಮನೋಭಾವ, ಮಕ್ಕಳು, ಮಹಿಳೆಯರೂ ಸಕ್ರಿಯವಾಗಿ ಪಾಲ್ಗೊಳುತ್ತಿರುವುದು ದಸರಾ ರಂಗೇರುವಂತೆ ಮಾಡಿದೆ.
    ಗ್ರಾಮೀಣ ಕ್ರೀಡೆಯಲ್ಲಿ ಪಾಲ್ಗೊಂಡವರ ಸಂತಸದ ಕ್ಷಣ ಒಂದೆಡೆಯಾದರೆ, ರಾಗಿ ಮುದ್ದೆ ಸವಿದು ಪ್ರಶಸ್ತಿ ಗೆದ್ದವರ ಸಂಭ್ರಮ ಮತ್ತೊಂದೆಡೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿದರು ಚರ್ಮವಾದ್ಯಗಳನ್ನು ನುಡಿಸಿ ಗಮನಸೆಳೆದರೆ, ಜಾಥಾದ ಮೂಲಕ ರಂಗ ದಸರಾದ ನಾಟಕೋತ್ಸವಕ್ಕೆ ಚಾಲನೆ ನೀಡಿದ್ದು ವಿಶೇಷ ಎನಿಸಿತು.
    ಚಿಣ್ಣರ ಕರಾಟೆ, ಸ್ಕೇಟಿಂಗ್ ಪಾಲಕರಲ್ಲಿ ಮಾತ್ರವಲ್ಲದೇ ನೆರೆದಿದ್ದವರನ್ನೂ ಆಶ್ಚರ್ಯ ಮೂಡಿಸಿತು. ಮಕ್ಕಳ ಪ್ರತಿಭೆಗೆ ದೊಡ್ಡವರು ತಲೆದೂಗುವಂತಾಯಿತು. ಎಲ್ಲ ಸಂಭ್ರಮಗಳ ನಡುವೆ ಸಿನಿಮಾ ಪ್ರಿಯರಿಗಾಗಿ ದಸರಾ ಸಿನಿಮಾ ಪ್ರದರ್ಶನಕ್ಕೂ ವೇದಿಕೆ ಸಿದ್ಧವಾಯಿತು. ಎರಡನೇ ದಿನದಿಂದಲೇ ದಸರಾ ಚಟುವಟಿಕೆಗಳು ಬಿರುಸುಗೊಂಡಿದ್ದು, ಯುವ ದಸರಾ, ಮಕ್ಕಳ ದಸರಾಕ್ಕೂ ಕ್ಷಣಗಣನೆ ಆರಂಭವಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts