More

    ಗ್ರಂಥಾಲಯ ಸಂಸ್ಕೃತಿ ಮಾಯ:ನಾ.ಡಿಸೋಜ

    ಶಿವಮೊಗ್ಗ: ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ಭಾರತದ ಪ್ರತಿ ಮನೆಯಲ್ಲಿಯೂ ಗ್ರಂಥಾಲಯಗಳಿದ್ದವು. ಆದರೆ ಈಗ ಗ್ರಂಥಾಲಯ ಸಂಸ್ಕೃತಿ ಕಡಿಮೆಯಾಗುತ್ತಿದೆ. ಕೆಲವು ಮನೆಗಳಲ್ಲಿ ಪುಸ್ತಕ ಓದುವ ಹವ್ಯಾಸವನ್ನೇ ರೂಢಿಸಿಕೊಂಡಿರುವುದಿಲ್ಲ ಎಂದು ಸಾಹಿತಿ ನಾ.ಡಿಸೋಜ ಬೇಸರ ವ್ಯಕ್ತಪಡಿಸಿದರು.
    ನಗರ ಕರ್ನಾಟಕ ಸಂಘದಲ್ಲಿ ಗುರುವಾರ ನೂರು ಶಾಲೆಗಳಿಗೆ ನೂರು ನೂರು ಪುಸ್ತಕ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಮನೆಗೆ ಬಂದ ಅತಿಥಿಗಳಿಗೆ ನಮ್ಮ ಸಂಗ್ರಹದಲ್ಲಿರುವ ಪುಸ್ತಕಗಳನ್ನು ತೋರಿಸಿ ಸಂಭ್ರಮಿಸುವ ಪರಿಪಾಠವಿತ್ತು. ಇಂದು ಪುಸ್ತಕದ ಬದಲು ಆಭರಣಗಳ ಪ್ರದರ್ಶನ ನಡೆಯುತ್ತಿದೆ. ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದ್ದು, ಪುಸ್ತಕ ಭಂಡಾರಗಳು ಮಾಯವಾಗುತ್ತಿವೆ ಎಂದು ಹೇಳಿದರು.
    ಪುಸ್ತಕದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ಪ್ರಕಾಶಕ, ಮುದ್ರಕ ಮತ್ತು ಬರಹಗಾರರ ಬಗ್ಗೆ ಮಾತನಾಡುವುದಿಲ್ಲ. ಪುಸ್ತಕ ಎಂಬುದೇ ಒಂದು ಆಕರ್ಷಕ. ತಾಳೆ ಗರಿ ಗ್ರಂಥದಿಂದ ಪುಸ್ತಕದ ರೂಪದಲ್ಲಿ ಹೊರಗೆ ಬಂದಾಗ ಜನಸಾಮಾನ್ಯರಿಗೂ ಸಾಹಿತ್ಯದ ಅರಿವಾಯಿತು ಎಂದರು.
    ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಪ್ರಧಾನ ಕಾರ್ಯದರ್ಶಿ ದೊಡ್ಡೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರರಾಜ್, ಗೌರವ ಕಾರ್ಯದರ್ಶಿ ಪ್ರೊ.ಎಂ.ಆಶಾಲತಾ, ಡಿಡಿಪಿಐ ಪರಮೇಶ್ವರಪ್ಪ, ಪುಸ್ತಕ ಮನೆಯ ಕವಿತಾ ಸಾಗರ್, ಅ.ಸುಂದರ ಮುಂತಾದವರಿದ್ದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts