More

    ಶಿವಮೊಗ್ಗ, ಭದ್ರಾವತಿ ನಗರ ವ್ಯಾಪ್ತಿ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

    ಶಿವಮೊಗ್ಗ: ಸಾವರ್ಕರ್ ಅವರ ಫೋಟೋ ದಿಂದ ಶುರುವಾದ ವಿವಾದದಿಂದ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ ಶಿವಮೊಗ್ಗ ಮತ್ತು ಭದ್ರಾವತಿ ನಗರ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ನಗರದಲ್ಲಿ ಆಗಸ್ಟ್ 18ರ ಸಂಜೆವರೆಗೂ ನಿಷೇಧಾಜ್ಞೆ ಜಾರಿಯಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಗಲಾಟೆ ಏನು?

    ಸ್ವಾತಂತ್ರ್ಯದ ಸಂಭ್ರಮ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದ ವೀರ್​ ಸಾವರ್ಕರ್​ ಅವರ ಫ್ಲೆಕ್ಸ್​ ಅನ್ನು ಹಿಂದೂ ಯುವಕರು ಹಾಕಿದ್ದರು. ಅದನ್ನು ತೆಗೆದು ಟಿಪ್ಪು ಫೋಟೋ ಇಡಲು ಹೊರಟಿತ್ತು ಇನ್ನೊಂದು ಗುಂಪು. ನಂತರ ಪೊಲೀಸರು ಮಧ್ಯೆ ಪ್ರವೇಶಿಸಿ ಸಾವರ್ಕರ್ ಫೋಟೋ ತೆರವು ಮಾಡಿದರು. ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೊ ಇಡಲು ಪೊಲೀಸರು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಎರಡು ಕೋಮಿನ ನಡುವೆ ಜಟಾಪಟಿ ಶುರುವಾಯಿತು.

    ಎರಡು ಕೋಮಿನವರಿಗೆ ಶಾಂತವಾಗಿರಲು ಪೊಲೀಸರು ಸೂಚನೆ ನೀಡಿದರು. ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ ಶುರುವಾಯಿತು. ಪ್ರತಿಭಟನೆ ನಡೆಯುವ ಸ್ಥಳಕ್ಕೆ ನುಗ್ಗಲು ಯತ್ನಿಸಿದ ಮತ್ತೊಂದು ಕೋಮಿನ ಗುಂಪು ಟಿಪ್ಪು ಸುಲ್ತಾನ್ ಫ್ಲೆಕ್ಸ್ ಇಡಲು ಹೊರಟಿತು. ಗುಂಪು ಚದರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಿದರು.

    ಇದರ ನಡುವೆಯೇ ಕಿಡಿಗೇಡಿಗಳು ಮತ್ತಷ್ಟು ಗಲಾಟೆ ಸೃಷ್ಟಿಸುವ ಸಲುವಾಗಿ ಹಿಂದೂ ಯುವಕರನ್ನು ಟಾರ್ಗೆಟ್​ ಮಾಡಿಕೊಂಡು ಚಾಕು ಇರಿಯಲಾಗಿದೆ.

    ನಿಷೇಧಾಜ್ಞೆ ನಡುವೆಯೂ ಶಿವಮೊಗ್ಗದಲ್ಲಿ ನಿಲ್ಲದ ಹಿಂಸಾಚಾರ: ಮತ್ತೋರ್ವ ಹಿಂದೂ ಯುವಕನಿಗೆ ಚಾಕು ಇರಿತ

    ಸಾವರ್ಕರ್ ಫೋಟೋ ವಿವಾದ; ಅಂಗಡಿ-ಮುಂಗಟ್ಟು ಬಂದ್, ಸ್ತಬ್ಧವಾದ ಶಿವಮೊಗ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts