More

    ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬಾಗಿಲು ಮುಚ್ಚುವ ಸ್ಥಿತಿ ನಿರ್ಮಾಣ

    ಶಿವಮೊಗ್ಗ: ಸಂಸ್ಕೃತ ಪಾಠಶಾಲೆಗಳು ಗಟ್ಟಿಗೊಳ್ಳದಿದ್ದರೆ ಭವಿಷ್ಯದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಬಾಗಿಲು ಮುಚ್ಚುವ ಸಾಧ್ಯತೆ ಇದೆ ಎಂದು ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
    ನಗರದ ಬೆಕ್ಕಿನಕಲ್ಮಠದಲ್ಲಿ ಸೋಮವಾರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಶಿವಮೊಗ್ಗ ಜಿಲ್ಲಾ ಸಂಸ್ಕೃತ ಪಾಠಶಾಲಾ ಶಿಕ್ಷಕ ಸಂಘ, ಶ್ರೀ ಜಗದ್ಗುರು ಗುರುಬಸವೇಶ್ವರ ಸಂಸ್ಕೃತ ಕಾಲೇಜಿನ ಆಶ್ರಯದಲ್ಲಿ ಸಂಸ್ಕೃತೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
    ಪ್ರಾಚೀನ ಭಾಷೆ ಉಳಿಸಲು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾಕಷ್ಟು ವಿರೋಧದ ನಡುವೆಯೂ ಕರ್ನಾಟಕ ಸಂಸ್ಕೃತ ವಿವಿಯನ್ನು ಘೋಷಿಸಿದರು. ಈಗ ಬೇರೆ ವಿವಿಗಳಂತೆ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡಿದ್ದು ಬೇರೆ ಶಾಲೆಗಳಂತೆ ಸಂಸ್ಕೃತ ಪಾಠಶಾಲೆಗಳು ಗಟ್ಟಿಗೊಳ್ಳಬೇಕು. ಇಲ್ಲದಿದ್ದರೆ ವಿವಿಗೇ ಭವಿಷ್ಯವಿಲ್ಲ ಎಂದು ಹೇಳಿದರು.
    ಸಂಸ್ಕೃತ ಭಾಷೆ ಅಭಿವೃದ್ಧಿ ಮತ್ತು ವಿವಿ ಉಳಿಯಲು ಪಾಠ ಶಾಲೆಗಳ ಪಾತ್ರ ಮಹತ್ತರವಾಗಿದೆ. ಶಿಕ್ಷಕರ ಕೊರತೆ ಇದ್ದರೂ ಸರ್ಕಾರಗಳು ಗಮನ ಹರಿಸುತ್ತಿಲ್ಲ. ಸದ್ಯ ಸಂಸ್ಕೃತ ಅಲ್ಪಸಂಖ್ಯಾತ ಭಾಷೆಯಾಗಿದೆ. ಪಾಠಶಾಲೆಗಳ ಬಗ್ಗೆ ಹೆಚ್ಚಿನ ಲಕ್ಷೃಕೊಡಬೇಕು. ಆ ಮೂಲಕ ವಿವಿಯನ್ನು ಗಟ್ಟಿಗೊಳಿಸುವ ಕೆಲಸ ಆಗಬೇಕಿದೆ. ಮಕ್ಕಳಲ್ಲಿ ಸಂಸ್ಕೃತೋತ್ಸವದ ಮೂಲಕ ಜಾಗೃತಗೊಳಿಸಬೇಕಿದೆ ಎಂದರು.
    ಸಂಸ್ಕೃತೋತ್ಸವ ಉದ್ಘಾಟಿಸಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಸಂಸ್ಕೃತ ಭಾಷೆಯನ್ನು ಬೆಳೆಸಬೇಕೆಂದು ಕೇವಲ ಅಂದುಕೊಂಡರೆ ಸಾಲದು. ದೇಶದ ಹಿರಿಮೆ ಆಗಿರುವ ಸಂಸ್ಕೃತವನ್ನು ಶ್ರದ್ಧೆಯಿಂದ ಬೆಳೆಸಬೇಕು ಎಂದರು. ಸಂಸ್ಕೃತ ಪಾಠಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಡಾ. ಸಿ.ರೇಣುಕಾರಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಕೃತ ವಿವಿ ಪ್ರಶಿಕ್ಷಣ ಸಮಿತಿ ಸದಸ್ಯ ಮತ್ತೂರು ಶ್ರೀನಿಧಿ, ಚಿತ್ರದುರ್ಗ ವಲಯದ ಸಂಚಾಲಕ ಗಿರೀಶ್, ದಾವಣಗೆರೆ ಜಿಲ್ಲಾಧ್ಯಕ್ಷ ನರಸಿಂಹ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts