More

    ಅನ್ನದಾತರದ್ದು ಬೇಡುವ ಕೈಗಳಲ್ಲ: ಕವಿತಾ ಮಿಶ್ರಾ

    ಶಿವಮೊಗ್ಗ: ಅನ್ನದಾತರದ್ದು ಬೇಡುವ ಕೈಗಳಲ್ಲ. ಅವು ಹಸಿದು ಬಂದವರಿಗೆ ಅನ್ನ ನೀಡುವ ಕೈಗಳಾಗಿವೆ. ರೈತರು ಸಮುದಾಯ ಒಗ್ಗಟ್ಟಾಗಿ ಮುನ್ನೆಡೆದರೆ ಯಾವತ್ತಿಗೂ ಸೋಲಿಲ್ಲ ಎಂದು ಪ್ರಗತಿಪರ ರೈತ ಮಹಿಳೆ, ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಕವಿತಾ ಮಿಶ್ರಾ ಹೇಳಿದರು.
    ಕುವೆಂಪು ರಂಗಮಂದಿರದಲ್ಲಿ ಗುರುವಾರ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರೈತ ದಸರಾ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಎಂದೂ ಬೇಡುವುದಿಲ್ಲ, ಅವರಿಗೆ ಕೊಡುವುದು ಮಾತ್ರ ಗೊತ್ತಿದೆ. ಹಾಗಾಗಿ ರೈತರು ಕೊಡುಗೈದಾನಿಗಳಾಗಿದ್ದಾರೆ ಎಂದರು.
    ರೈತರು ಯಾವುದೇ ಸಂದರ್ಭದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಹವಾಮಾನಾಧಾರಿತವಾಗಿ ಬೆಳೆಗಳು ಎಂದಿಗೂ ರೈತರನ್ನು ಕೈ ಬಿಡುವುದಿಲ್ಲ. ಇರುವ ಜಾಗದಲ್ಲಿಯೇ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಒಂದಕ್ಕೊಂದು ಪೂರಕವಾದ ಬೆಳೆಗಳನ್ನು ಬೆಳೆಯಬೇಕು. ಅದಕ್ಕೆ ತಕ್ಕಂತೆ ಮಾರುಕಟ್ಟೆಯನ್ನು ಕಲ್ಪಿಸಿಕೊಳ್ಳುವ ಜಾಣ್ಮೆಯೂ ಇರಬೇಕಾಗುತ್ತದೆ ಎಂದು ಸಲಹೆ ನೀಡಿದರು.
    ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಮಾತನಾಡಿ, ನಮ್ಮದು ಕೃಷಿ ಪ್ರಧಾನ ದೇಶವಾಗಿದ್ದರೂ ಹಲವು ವೈವಿಧ್ಯತೆಗಳನ್ನು ಒಳಗೊಂಡಿದೆ. ಅದರಲ್ಲಿ ಕೃಷಿಕರು ರಾಷ್ಟ್ರದ ಬೆನ್ನೆಲುಬು ಆಗಿದ್ದಾರೆ. ರೈತರು ನೆಮ್ಮದಿಯಿಂದ ಇದ್ದರೆ ದೇಶವು ಸಮೃದ್ಧವಾಗಿರಲಿದೆ ಎಂದರು.
    ರೈತ ದಸರಾ ಸಮಿತಿ ಅಧ್ಯಕ್ಷ ಡಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಸದಸ್ಯ ಡಾ. ಡಿ.ನಾಗೇಂದ್ರ, ರೈತ ಮುಖಂಡ ಕೆ.ಟಿ.ಗಂಗಾಧರ್, ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೀಶ್, ವಿಶ್ವನಾಥ್, ಸತ್ಯನಾರಾಯಣ ರಾಜು, ಮಂಜುಳಾ ಶಿವಣ್ಣ, ಸುವರ್ಣಾ ಶಂಕರ್, ಸುರೇಖಾ ಮುರಳೀಧರ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts