More

    ವೇದಿಕೆ ಸೃಷ್ಟಿಸದ ಹೊರತು ಮಡಿವಾಳರಿಗೆ ಭವಿಷ್ಯವಿಲ್ಲ: ಶ್ರೀ ಬಸವ ಮಾಚಿದೇವ ಸ್ವಾಮೀಜಿ ಆತಂಕ

    ಶಿವಮೊಗ್ಗ: ಬದುಕು ಶಾಶ್ವತವಲ್ಲ, ಪ್ರತಿಭೆಗಳಿಗೆ ವೇದಿಕೆ ಸೃಷ್ಟಿಸದ ಹೊರತು ಮಡಿವಾಳ ಸಮಾಜಕ್ಕೆ ಭವಿಷ್ಯವೂ ಇಲ್ಲ ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವ ಮಹಾಸಂಸ್ಥಾನಮಠದ ಡಾ. ಶ್ರೀ ಬಸವ ಮಾಚಿದೇವ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
    ಕುವೆಂಪು ರಂಗಮಂದಿರದಲ್ಲಿ ಭಾನುವಾರ ಶಿವಮೊಗ್ಗ ಜಿಲ್ಲಾ ಮಡಿವಾಳ ಸಮಾಜ ವೃತ್ತಿ ನಿರತರ ಸಂಘದಿಂದ ಮಡಿವಾಳ ಸಮಾಜ ಬಾಂಧವರ ಜನಜಾಗೃತಿ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪ್ರತಿಭೆಗಳಿಗೆ ವೇದಿಕೆ ಸೃಷ್ಟಿ ಮಾಡಿದಾಗ ಮಾತ್ರ ಆಯಾ ಸಮುದಾಯಗಳು ಶಕ್ತಿಯಾಗಿ ಹೊರಹೊಮ್ಮಲಿವೆ ಎಂದರು.
    ಭವಿಷ್ಯದಲ್ಲಿ ಮಡಿವಾಳ ಸಮಾಜಕ್ಕೆ ಹತ್ತಾರು ಸವಾಲುಗಳು ಎದುರಾಗಲಿದ್ದು ಯುವ ಪೀಳಿಗೆ ಆ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ. ಸಮಾಜ ಕಟ್ಟುವಂತಹ ಮತ್ತು ಸಮಾಜಕ್ಕೆ ಗೌರವ ಕೊಡುವ ಕೆಲಸ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗಲಿದೆ. ಹೆಚ್ಚೆಚ್ಚು ಪುರಸ್ಕಾರಗಳನ್ನು ಪಡೆಯುವ ಸಮಾಜಗಳು ಗಟ್ಟಿಗೊಳ್ಳುತ್ತಾ ಹೋಗುತ್ತವೆ. ಪ್ರತಿಭೆಗಳ ಜತೆ ಸಮಾಜವನ್ನೂ ಗುರುತಿಸುವ ಕೆಲಸ ಆಗಲಿದೆ ಎಂದು ಹೇಳಿದರು.
    ಜನಸಾಮಾನ್ಯರಿಂದ ಹಿಡಿದು ಎಲ್ಲ ವರ್ಗದವರೂ ಜೀವನದಲ್ಲಿ ಸಾರ್ಥಕತೆಯನು ಪಡೆಯಲೇಬೇಕು. ವೃತ್ತಿಪರರು, ಪ್ರತಿಭಾವಂತರು, ಯೋಗಪಟುಗಳಿಗೆ ಗೌರವ ಸಲ್ಲಿಸುವ ಕೆಲಸ ಇಡೀ ರಾಜ್ಯಾದ್ಯಂತ ಆಗಬೇಕಿದೆ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಕೆಲಸ ಸಂಘಸಂಸ್ಥೆಗಳಿಂದ ಆಗಬೇಕಿದೆ. ವೃತ್ತಿ ಜತೆ ಜತೆಗೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
    ಎಂಎಲ್ಸಿ ಆಯನೂರು ಮಂಜುನಾಥ ಮಾತನಾಡಿ, ಮಾಚಿದೇವರ ಹೆಸರಿನಲ್ಲಿ ಸಮಾಜ ಸಂಘಟಿತರಾಗಿ ಜನಜಾಗೃತಿ ಸಮಾವೇಶ ಮತ್ತು ಮಕ್ಕಳಿರುವ ಪ್ರತಿಭೆ ಗುರುತಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಮಡಿವಾಳರು ಸಮಾಜದ ಒಂದು ಅಂಗವಾಗಿ ಕೆಲಸ ಮಾಡುತ್ತಿದ್ದು ಮದುವೆ ಮಡಿವಾಳರು ಇರದಿದ್ದರೆ ಮದುವೆಗಳೇ ಆಗುತ್ತಿರಲಿಲ್ಲ. ಆದರೆ ಇಂದು ಕಾಲಮಾನ ಬದಲಾಗಿದೆ. ಸಮಾಜದಲ್ಲಿ ಪೈಪೋಟಿ ನಡೆಯುತ್ತಿದ್ದು ಮೀಸಲಾತಿಗಾಗಿ ಹೋರಾಟ ಮಾಡಬೇಕಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts