More

    ಚೆನ್ನಮ್ಮ, ಅಬ್ಬಕ್ಕನ ಸಾಲಿನಲ್ಲಿ ವೀರ ವನಿತೆ ಓಬವ್ವ

    ಶಿವಮೊಗ್ಗ: ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕನಂತೆ ಚಿತ್ರದುರ್ಗದ ಒನಕೆ ಓಬವ್ವ ಬ್ರಿಟಿಷರ ವಿರುದ್ಧ ಹೋರಾಟ ಮಾಡಲಿಲ್ಲ. ಆದರೆ ಅವರಿಬ್ಬರ ಸಾಲಿನಲ್ಲಿ ವೀರ ವನಿತೆ ಓಬವ್ವ ನಿಲ್ಲುತ್ತಾರೆ ಎಂದು ದಾವಣಗೆರೆ ವಿವಿಯ ಡಾ. ಚಿದಾನಂದಮೂರ್ತಿ ಸಂಶೋಧನಾ ಕೇಂದ್ರದ ಕನ್ನಡ ಸಂಶೋಧಕ ಸಿ.ಜಿ.ಹನುಮಂತಪ್ಪ ಬಣ್ಣಿಸಿದರು.
    ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಛಲವಾದಿ ಮಹಾಸಭಾದ ಆಶ್ರಯದಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಇಡೀ ಛಲವಾದಿ ಸಮಾಜ ಒನಕೆ ಓಬವ್ವನನ್ನು ಕುಲದೇವತೆಯಾಗಿ ಪೂಜಿಸಬೇಕಿದೆ ಎಂದರು.
    ಓಬವ್ವ ಕೇವಲ ಛಲಾವಾದಿ ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಆಕೆ ಕೇವಲ ಚಿತ್ರದುರ್ಗದ ಮಗಳಲ್ಲ. ಮೂಲತಃ ಗುಡೇಕೋಟೆಯವಳು. ಕೋಟೆ ಕಾವಲುಗಾರ ಕಹಳೆ ಚಿನ್ನಪ್ಪನ ಪುತ್ರಿ. ಮದ್ದಲೆ ಹನುಮಂತಪ್ಪನ ಪತ್ನಿಯಾಗಿದ್ದು ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಸೇನೆ ವಿರುದ್ಧ ಹೋರಾಡಿದ ದಿಟ್ಟ ಸಾಹಸಿ ಎಂದರು.
    ಓಬವ್ವನಿಗೆ ಯುದ್ಧ ನೀತಿಗಳು ತಿಳಿಯದಿದ್ದರೂ ಆಕ್ರಮಣ ಮಾಡುತ್ತಿದ್ದ ಶತ್ರು ಸೈನ್ಯದ ಸಾವಿರಾರು ಸೈನಿಕರಿಂದ ಕೇವಲ ಒನಕೆ ಹಿಡಿದು ಚಿತ್ರದುರ್ಗದ ಕೋಟೆಯನ್ನು ರಕ್ಷಣೆ ಮಾಡಿದ್ದಳು. ವಿಷ್ಣುವರ್ಧನ್ ನಟನೆಯ ನಾಗರಹಾವು ಸಿನಿಮಾದಲ್ಲಿ ತೋರಿಸಿರುವಂತೆ ಓಬವ್ವಳ ಇತಿಹಾಸ ಅಷ್ಟಕ್ಕೇ ಸೀಮಿತವಲ್ಲ. ಚರಿತ್ರೆಯ ಪುಟಗಳನ್ನು ತೆಗೆಯುತ್ತಾ ಹೋದಂತೆ ಓಬವ್ವ ಯಾರು ?, ಅವರ ಜಯಂತಿಯನ್ನು ಇಂದು ಏಕೆ ಆಚರಿಸಬೇಕು ? ಎನ್ನುವುದು ಅರಿವಾಗುತ್ತದೆ ಎಂದು ಹೇಳಿದರು.
    ಜಯಂತಿ ಉದ್ಘಾಟಿಸಿ ಮಾತನಾಡಿದ ಡಿಸಿ ಡಾ. ಆರ್.ಸೆಲ್ವಮಣಿ, ವೀರ ವನಿತೆ ಓಬವ್ವನ ಸಾಧನೆಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಓಬವ್ವ ಜಯಂತಿ ಆಚರಿಸಲು ಸರ್ಕಾರ ಎರಡು ವರ್ಷದ ಹಿಂದೆ ನಿರ್ಧರಿಸಿತ್ತು. ಆದರೆ ಕರೊನಾ ಕಾರಣದಿಂದ ಸ್ಥಗಿತಗೊಂಡಿತ್ತು. ಈ ವರ್ಷ ಸರ್ಕಾರದ ಆದೇಶದಂತೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು.
    ಜಿಲ್ಲಾ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿದ್ದಪ್ಪ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಡಿಸಿ ನಾಗೇಂದ್ರ ಎಫ್ ಹೊನ್ನಳ್ಳಿ, ಸೂಡಾ ಆಯುಕ್ತ ಕೊಟ್ರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts