More

    ಶಿವಮೊಗ್ಗ ಸಿಜಿಎಚ್‌ಎಸ್ ವೆಲ್‌ನೆಸ್ ಸೆಂಟರ್‌ಗೆ ಕೇಂದ್ರ ಅಸ್ತು

    ಶಿವಮೊಗ್ಗ: ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ ನಿವೃತ್ತ ಕೇಂದ್ರ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗಾಗಿ ಶಿವಮೊಗ್ಗದಲ್ಲಿ ಸಿಜಿಎಚ್‌ಎಸ್ ವೆಲ್‌ನೆಸ್ ಸೆಂಟರ್ ಆರಂಭಿಸಲು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವೀಯ ಹಸಿರು ನಿಶಾನೆ ತೋರಿದ್ದಾರೆ. ಇದರೊಂದಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಪ್ರಯತ್ನ ಫಲ ನೀಡಿದಂತಾಗಿದೆ.

    ಕಳೆದ ತಿಂಗಳು ಕೇಂದ್ರದಿಂದ ಆಗಮಿಸಿದ್ದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು. ಅದರ ಅನ್ವಯ ಕಟ್ಟಡ ಹಾಗೂ ಮೂಲ ಸೌಕರ್ಯ ಒದಗಿಸಿ ಕೂಡಲೇ ವೆಲ್‌ನೆಸ್ ಕೇಂದ್ರ ಆರಂಭಿಸಲು ಕ್ರಮಕೈಗೊಳ್ಳಬೇಕೆಂದು ಕೇಂದ್ರ ಸಚಿವರು ಆದೇಶಿಸಿದ್ದಾರೆ. ಪ್ರಸ್ತುತ ಬೆಂಗಳೂರು, ಮೈಸೂರು ಹಾಗೂ ಹುಬ್ಬಳಿಯಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ನಾಲ್ಕನೇ ಕೇಂದ್ರ ಶಿವಮೊಗ್ಗದಲ್ಲಿ ಆರಂಭವಾಗಲಿದೆ.
    ಈ ವೆಲ್‌ನೆಸ್ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ನಿವೃತ್ತ ನೌಕರರು ಹಾಗೂ ಅವರ ಕುಟುಂಬದವರು ಆರೋಗ್ಯ ಸೇವೆ ಪಡೆಯಬಹುದು. ಹೆಚ್ಚಿನ ಆರೋಗ್ಯ ಸೇವೆ ಅಗತ್ಯವಿದ್ದರೆ ಯೋಜನೆಯಡಿ ನೋಂದಣಿಯಾದ ಖಾಸಗಿ ಆಸ್ಪತ್ರೆಗಳಿಗೆ ಇಲ್ಲಿ ಶಿಫಾರಸ್ಸು ಮಾಡಲಾಗುತ್ತದೆ. ಉಚಿತ ಹಾಗೂ ತ್ವರಿತ ಆರೋಗ್ಯ ಸೇವೆಗೆ ಇದರಿಂದ ಅನುಕೂಲವಾಗಲಿದೆ.
    ಇಎಸ್‌ಐ ಆಸ್ಪತ್ರೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವ ನಡುವೆಯೇ ಆರೋಗ್ಯ ಸೇವೆ ವಲಯದಲ್ಲಿ ಜಿಲ್ಲೆಗೆ ಮತ್ತೊಂದು ಕೊಡುಗೆಯನ್ನು ಕೇಂದ್ರ ಸರ್ಕಾರ ನೀಡಿದೆ. ಕೇವಲ ನಮ್ಮ ಜಿಲ್ಲೆ ಮಾತ್ರವಲ್ಲದೇ ನೆರೆಯ ಜಿಲ್ಲೆಯ ನಿವೃತ್ತ ಕೇಂದ್ರ ಸರ್ಕಾರಿ ನೌಕರರಿಗೂ ಇದರ ಪ್ರಯೋಜನೆ ದೊರೆಯಲಿದೆ.
    ಕೇಂದ್ರ ಎಲ್ಲಿ ಆರಂಭ?:ಕಳೆದ ತಿಂಗಳು ಬೆಂಗಳೂರಿನ ಸಿಜಿಎಚ್‌ಎಸ್ ಹೆಚ್ಚುವರಿ ನಿರ್ದೇಶಕರ ನೇತೃತ್ವದ ತಂಡ ಶಿವಮೊಗ್ಗಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಬಿ.ವೈ.ರಾಘವೇಂದ್ರ ಅವರೊಂದಿಗೆ ಮೂರ‌್ನಾಲ್ಕು ಕಡೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಿತ್ತು. ಅಂತಿಮವಾಗಿ ಶರಾವತಿ ನಗರದಲ್ಲಿ ಬಿಎಸ್‌ಎನ್‌ಎಲ್‌ಗೆ ಸೇರಿದ ಕಟ್ಟಡವನ್ನು ಆಯ್ಕೆ ಮಾಡಲಾಯಿತು. ಈಗ ಅಲ್ಲಿಯೇ ವೆಲ್‌ನೆಸ್ ಕೇಂದ್ರ ಆರಂಭವಾಗಲಿದೆ.
    ಎಷ್ಟು ಮಂದಿಗೆ ಪ್ರಯೋಜನ?:ಹೊಸದಾಗಿ ಆರಂಭವಾಗಲಿರುವ ವೆಲ್‌ನೆಸ್ ಕೇಂದ್ರದಿಂದ ಶಿವಮೊಗ್ಗ ಜಿಲ್ಲೆಯ 7,518, ದಾವಣಗೆರೆಯ 4,888, ಚಿತ್ರದುರ್ಗ ಜಿಲ್ಲೆಯ 2,079 ಸೇರಿದಂತೆ ಸುಮಾರು 14 ಸಾವಿರ ಮಂದಿಗೆ ಪ್ರಯೋಜನ ದೊರೆಯಲಿದೆ.
    ಯಾವ ಇಲಾಖೆ ನಿವೃತ್ತರಿಗೆ ಸೇವೆ ಲಭ್ಯ?:ಬಿಎಸ್‌ಎನ್‌ಎಲ್, ಅಂಚೆ ಕಚೇರಿ, ಭವಿಷ್ಯ ನಿಧಿ, ಕೇಂದ್ರ ತೆರಿಗೆ ಇಲಾಖೆ, ಅರೆಸೇನಾ ಪಡೆ, ಕೇಂದ್ರೀಯ ವಿದ್ಯಾಲಯ, ರಾಷ್ಟ್ರೀಯ ರಕ್ಷಾ ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts