More

    ಬಸ್ ನಿಲುಗಡೆ ಮಾಡದಿದ್ದರೆ ಕಠಿಣ ಕ್ರಮ: ಆರ್‌ಟಿಒ ಗಂಗಾಧರ್ ಎಚ್ಚರಿಕೆ

    ಶಿವಮೊಗ್ಗ: ಬಸ್ ನಿಲ್ದಾಣಗಳಲ್ಲಿ ಕೋರಿಕೆಯ ನಿಲುಗಡೆ ಹಾಗೂ ವಾಹನ ನಿಲ್ದಾಣ ಸ್ಥಳಗಳಲ್ಲಿ ಕಡ್ಡಾಯವಾಗಿ ನಿಲ್ಲಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಸೂಚಿಸಲಾಗಿದೆ. ಈ ಸಂಬಂಧ ದೂರುಗಳೇನಾದರೂ ಬಂದಲ್ಲಿ ವಾಹನಗಳ ಮಾಲೀಕರು ಮತ್ತು ಪರವಾನಗಿದಾರರ ಮೇಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ಆರ್‌ಟಿಒ ಜೆ.ಪಿ.ಗಂಗಾಧರ್ ಎಚ್ಚರಿಕೆ ನೀಡಿದರು.
    ಜಿಲ್ಲೆಯ ವಾಹನ ಮಾಲೀಕರು, ಚಾಲಕರು, ಬಾಡಿಗೆ ವಾಹನ ಚಾಲಕರು, ಸರಕು ಸಾಗಣೆ ವಾಹನದ ಮಾಲೀಕರು, ವಿಐಪಿ, ಸರ್ಕಾರಿ ಆಂಬುಲೆನ್ಸ್ ಹೀಗೆ ಎಲ್ಲ ರೀತಿಯ ವಾಹನ ಚಾಲಕರು ತಮ್ಮ ವಾಹನಗಳ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಸೂಚಿಸಿದರು.
    ದಾಖಲಾತಿಗಳಾದ ಆರ್‌ಸಿ, ಎಫ್‌ಸಿ, ವಿಮೆ, ಟ್ಯಾಕ್ಸ್ ಕಾರ್ಡ್, ವಾಯುಮಾಲಿನ್ಯ ತಪಾಸಣಾ ಪತ್ರ, ಪರವಾನಗಿ ಹಾಗೂ ತತ್ಸಮಾನ ವಾಹನ ಚಾಲನಾ ಅನುಜ್ಞಾ ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು. ಯಾವ ದಾಖಲೆ ಅಸಿಂಧುವಾಗಿದ್ದರೂ ಅಥವಾ ಚಾಲನೆಯಲ್ಲಿ ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಎಲ್ಲ ರೀತಿಯ ದಾಖಲಾತಿಗಳನ್ನು ಹೊಂದಿದ ವಾಹನಗಳಲ್ಲಿ ಮಾತ್ರ ಪ್ರಯಾಣಿಸಬೇಕು ಎಂದಿದ್ದಾರೆ.
    ಸಾರ್ವಜನಿಕ ವಾಹನವಾಗಿದ್ದಲ್ಲಿ ಪ್ರಯಾಣಿಕರು, ಸರಕು ಸಾಗಣೆ ವಾಹನವಾಗಿದ್ದಲ್ಲಿ ಸರಕನ್ನು ಮಾತ್ರ, ಬಾಡಿಗೆ ವಾಹನವಾಗಿದ್ದಲ್ಲಿ ಪ್ರಯಾಣಿಕರು ಹೀಗೆ ವಾಹನಗಳ ಉದ್ದೇಶಗಳಿಗೆ ತಕ್ಕಂತೆ ಕ್ಷೇಮದ ಪ್ರಯಾಣವನ್ನು ಕೈಗೊಳ್ಳಬೇಕು. ಎಲ್ಲರೂ ವಾಹನ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts