More

    ಮುಂದುವರಿದ IAS ಅಧಿಕಾರಿಗಳ ಸಮರ: ರೋಹಿಣಿ ಸಿಂಧೂರಿ ಎತ್ತಿದ ಪ್ರಶ್ನೆಗಳಿಗೆ ಶಿಲ್ಪಾ ನಾಗ್​ ಸಮಜಾಯಿಷಿ

    ಮೈಸೂರು: ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ಕಿತ್ತಾಟ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ಭೇಟಿಯ ನಂತರವೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ನಡುವಿನ ಶೀತಲಸಮರ ಮುಂದುವರಿದಿದೆ.

    ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎತ್ತಿದ ಕೆಲವು ಪ್ರಶ್ನೆಗಳಿಗೆ ಸುದೀರ್ಘ ಪತ್ರ ಬರೆದು ಅಂಕಿ-ಅಂಶಗಳ ಮೂಲಕ ಶಿಲ್ಪಾ ನಾಗ್​ ಸಮಜಾಯಿಷಿ ನೀಡಿದ್ದಾರೆ. ಶಿಲ್ಪಾ ನಾಗ್​ ಬರೆದ ಪತ್ರದ ಸಾರಾಂಶ ಈ ಕೆಳಕಂಡಂತಿದೆ.

    ದಿನಾಂಕ 03-06-2021ರ ಜಿಲ್ಲಾಧಿಕಾರಿಗಳ ಪತ್ರಿಕಾ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಠೀಕರಣ….
    1. ನಾನು ಜಿಲ್ಲಾಧಿಕಾರಿಗಳಿಂದ ಅನುಭವಿಸುತ್ತಿದ್ದ ಅವಮಾನ, ವೈಯಕ್ತಿಕ ನಿಂದನೆಗಳು, ನನ್ನ ಅಧಿಕಾರಿಗಳಿಗೆ ಉದ್ದೇಶಪೂರ್ವಕವಾಗಿ ಆಗುತ್ತಿರುವ ಕಿರುಕುಳಗಳು, ಐ.ಎ.ಎಸ್., ಅಧಿಕಾರಿಯಾದ ನನಗೆ ಪ್ರತಿನಿತ್ಯ ನೀಡುತ್ತಿರುವ ಅನಾವಶ್ಯಕ ನೋಟೀಸ್‍ಗಳು ನನ್ನ ಬಗ್ಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ತಪ್ಪು ಮಾಹಿತಿ ನೀಡಿ ನಿಂದನಾತ್ಮಕ ವರದಿ ಮಾಡುತ್ತಿರುವ ಬಗ್ಗೆ ನಾನು ಮಾನಸಿಕವಾಗಿ ಅನುಭವಿಸುತ್ತಿದ್ದ ಚಿತ್ರಹಿಂಸೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನೆ. ಇದು ನನ್ನ ನಿಜವಾದ ಹೇಳಿಕೆಯಾಗಿರುತ್ತದೆ.

    2. ಮಾನ್ಯ ಜಿಲ್ಲಾಧಿಕಾರಿಗಳು ನಡೆಸುತ್ತಿದ್ದ ಕೊವಿಡ್-19 ರ ಸಭೆಗಳಿಗೆ ಆಗಿಂದ್ದಾಗೆ ನಾನು ಹಾಜರಾಗಿರುತ್ತೇನೆ.

    3. ನಗರ ಪಾಲಿಕೆ ಆಯುಕ್ತರಾಗಿ ಕೋವಿಡ್ ಮಿತ್ರ ಸ್ಥಾಪಿಸುವುದು, ಕೋವಿಡ್ ಪಾಸಿಟಿವ್ ಇರುವವರ ಮನೆ ಮನೆ ಸಮೀಕ್ಷೆ ಕಾರ್ಯ ನಡೆಸುವುದು, ಟೆಲಿ ಮೆಡಿಸಿನ್ ಹಾಗೂ ಇತರೆ ಕೆಲಸಗಳ ಜೊತೆಗೆ ಸುಮಾರು 10-12 ಲಕ್ಷ ಜನಸಂಖ್ಯೆ ಇರುವ ಮೈಸೂರು ನಗರದ ಮಹಾನಗರ ಪಾಲಿಕೆ ಆಯುಕ್ತರಾಗಿ ಜವಾಬ್ದಾರಿಯುತ ಕೆಲಸ ಮಾಡುತ್ತಿರುವೆ. ಈ ಕಾರ್ಯಗಳನ್ನು ನಿರ್ವಹಿಸುವ ಸಂಧರ್ಭದಲ್ಲಿ ಪ್ರತಿ ಸಭೆಗೆ ಆಯುಕ್ತರೇ ಹಾಜರಾಗುವುದಕ್ಕೆ ಸಾದ್ಯವಾಗುವುದಿಲ್ಲ. ಈ ಕಾರಣದಿಂದಾಗಿ ಪಾಲಿಕೆಯ ವಿವಿಧ ಅಧಿಕಾರಿಗಳು / ನೋಡಲ್ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳ ಸಭೆಗೆ ಪ್ರತಿದಿನ ಹಾಜರಾಗಿ ಮಾಹಿತಿ ನೀಡಿರುತ್ತಾರೆ.

    4. ಮೈಸೂರು ಮಹಾನಗರ ಪಾಲಿಕೆಯು ಸಲ್ಲಿಸುವ ಅಂಕಿ-ಅಂಶಗಳು ಹಾಗೂ ಎಲ್ಲಾ ಮಾಹಿತಿ / ದಾಖಲಾತಿಗಳಿಗೆ ಸಹಿ ಮಾಡಿಯೇ ಸಲ್ಲಿಸಲಾಗುತ್ತಿದೆ.

    5. ಆದರೆ ಕೊವಿಡ್-19 ಕ್ಕೆ ಸಂಬಂಧಿಸಿದಂತೆ, ಪ್ರತಿನಿತ್ಯ ಸಂಭವಿಸುವ ಹೊಸ ಪ್ರಕರಣಗಳು / ಸಾವುಗಳು, ಸಕ್ರಿಯ ಪ್ರಕರಣಗಳು, ಇತ್ಯಾದಿಗಳಿಗೆ ಸಂಬಂಧಿಸಿದಂತೆ ವಾರ್ ರೂಂ ನಿಂದಲೇ ಅಧಿಕೃತ ಮಾಹಿತಿ ಜಿಲ್ಲಾಧಿಕಾರಿಗಳಿಗೆ ಲಭ್ಯವಾಗುತ್ತಿತ್ತು. ಗಣಕೀಕೃತ ಪ್ರತಿಗಳನ್ನು ಆಯುಕ್ತರು ಸಹಿ ಮಾಡಲು ಲಭ್ಯವಿಲ್ಲದಿರುವಾಗ ಆಯುಕ್ತರ ಪರವಾಗಿ ಹೆಚ್ಚುವರಿ ಆಯುಕ್ತರು ಸಹಿ ಮಾಡಿ ಸಲ್ಲಿಸಿರುತ್ತಾರೆ. ಆದುದರಿಂದ ಈ ವಿಚಾರದಲ್ಲಿ ನನ್ನಿಂದ ಲೋಪ ಉಂಟಾಗಿರುವುದಿಲ್ಲ ಎಂದು ತಿಳಿಯ ಬಯಸುತ್ತೇನೆ.

    6. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ಇತರೇ ವಿದ್ಯಾರ್ಥಿನಿಲಯಗಳಲ್ಲಿ ಈ ಕೆಳಕಂಡ 9 ಕಡೆ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ಒಟ್ಟು 1122 ಹಾಸಿಗೆಗಳ ಸೌಲಭ್ಯಗಳನ್ನು ಕಲ್ಪಿಸಲಾಗಿರುತ್ತದೆ.

    7. ಕೋವಿಡ್ ಮಿತ್ರ ಮತ್ತು ಕೋವಿಡ್ ಆರೈಕೆ ಕೇಂದ್ರಗಳ ನಿರ್ವಹಣೆಗಾಗಿ ಅವಶ್ಯಕವಿರುವ ವೈದ್ಯರು, ಸ್ಟಾಫ್ ನರ್ಸ್, ಡಿ-ಗ್ರೂಪ್ ನೌಕರರನ್ನು ಸರಿಯಾಗಿ ಅಗತ್ಯವಿರುವ ಹಾಸಿಗೆ ಮತ್ತಿತರ ಪರಿಕರಗಳು, ವಿವಿಧ ಔಷಧಿಗಳು ವೈದ್ಯಕೀಯ ಉಪಕರಣಗಳು ಪೂರ್ಣ ಪ್ರಮಾಣದಲ್ಲಿ ವ್ಯವಸ್ಥಿಸಲಾಗಿರುವುದನ್ನು ತಾವು ಮನವರಿಕೆ ಮಾಡಿಕೊಳ್ಳಬಹುದಾಗಿದೆ.

    8. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾರಂಭಿಸಲಾಗಿರುವ ಕೋವಿಡ್ ಮಿತ್ರ ಮತ್ತು ಕೋವಿಡ್ ಕೇರ್ ಆರೈಕೆ ಕೇಂದ್ರಗಳಿಗೆ ಜಿಲ್ಲಾಡಳಿತದಿಂದ ಯಾವುದೇ ರೀತಿಯ ಸಾಮಗ್ರಿಗಳು ಸರಬರಾಜು ಮಾಡಿಲ್ಲವಾದ ಕಾರಣ, ಕಾರ್ಖಾನೆಗಳು, ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಂದ ಸಿಎಸ್‌ಆರ್ ಅಡಿಯಲ್ಲಿ ಸ್ವೀಕೃತಿಯಾಗಿರುವ ಸಾಮಗ್ರಿಗಳ ಪೈಕಿ ಅಗತ್ಯವಿರುವಷ್ಟು ಸಾಮಗ್ರಿಗಳನ್ನು ಕೋವಿಡ್ ಮಿತ್ರ ಮತ್ತು ಕೋವಿಡ್ ಕೇರ್ ಆರೈಕೆ ಕೇಂದ್ರಗಳಿಗೆ ಬಳಕೆ ಮಾಡಲಾಗಿರುತ್ತದೆ.

    9. ಸದರಿ ಕೇಂದ್ರ/ಆಸ್ಪತ್ರೆಗಳಿಗೆ ವೈದ್ಯರು ಮತ್ತು ಶೂಶ್ರುಷಕರುಗಳ ಸೇವೆಯನ್ನು ಜಿಲ್ಲಾಡಳಿತದಿಂದ ಒದಗಿಸದ ಕಾರಣ ಮೈಸೂರು ಮಹಾನಗರ ಪಾಲಿಕೆ ಮತ್ತು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಹಭಾಗಿತ್ವದಲ್ಲಿ ವೈದ್ಯರು ಮತ್ತು ಶೂಶ್ರುಷಕರುಗಳ ಸೇವೆಯನ್ನು ಸಹ ಒದಗಿಸಲಾಗಿದ್ದು ಇದಕ್ಕೆ ತಗಲ ಬಹುದಾದ ವೆಚ್ಚವನ್ನು ಸಹ ಮೈಸೂರು ಮಹಾನಗರ ಪಾಲಿಕೆ ಮತ್ತು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಜಂಟಿಯಾಗಿ ಭರಿಸಲು ಕ್ರಮವಹಿಸಲಾಗುತ್ತಿದೆ.

    10. ನಾನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಕಾರ್ಯ ನಿರ್ವಹಿಸುವಾಗ ಕೋವಿಡ್-19 ರ ಸರ್ಕಾರದ ಮಾರ್ಗಸೂಚಿಗಳಂತೆ ಜಿಲ್ಲಾಧಿಕಾರಿಗಳ ಸಭಾ ಸೂಚನೆಗಳಂತೆ, ನಗರದಲ್ಲಿನ ಕೋವಿಡ್-19 ಸೋಂಕನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಾರ್ವಜನಿಕರ ಸಹಕಾರವನ್ನು ಪಡೆಯುವ ಮೂಲಕ ಸಾರ್ವಜನಿಕರಿಗೆ ಪ್ರತಿನಿತ್ಯ ವಿವಿಧ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಿ, ಕೋವಿಡ್‍ಕೇರ್ ಆಸ್ಪತ್ರೆಗಳನ್ನು ಸ್ಥಾಪಿಸಿ, ಮಹಾನಗರ ಪಾಲಿಕೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ 31 ವೈದ್ಯರು, 33 ನರ್ಸ್‍ಗಳನ್ನು ನೇಮಕ ಮಾಡಿಕೊಂಡು, ವೇತನವನ್ನು ಸಹ ಪಾಲಿಕೆಯಿಂದ ಪಾವತಿಸಲು ಸಿ.ಎಸ್.ಆರ್ ಮೂಲಕ ಪಡೆದು ವೈದಕೀಯ ಉಪಕರಣಗಳು ಮತ್ತು ಔಷಧಿಗಳನ್ನು ವಿತರಿಸುವ ಮೂಲಕ ಕೋವಿಡ್ ಸೋಂಕು ನಿವಾರಣ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ ವಿನಃ ನಾನು ಜಿಲ್ಲಾಡಳಿತದ ವಿರುದ್ಧ ಯಾವುದೇರೀತಿ ಹೇಳಿಕೆ ನೀಡಿರುವುದಿಲ್ಲ.

    11. ದಿನಾಂಕ: 03-06-2021 ರ ಸಂಜೆ 4.00 ಘಂಟೆಗೆ ನಾನು ನಡೆಸಿದ ಪತ್ರಿಕಾ ಘೋಷ್ಠಿಯಲ್ಲಿ ನಾನು ಕೋವಿಡ್ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಏನೆಲ್ಲಾ ಕ್ರಮವಿಡಲಾಗಿದೆ ಎಂಬ ಬಗ್ಗೆ ಹಾಗೂ ಜಿಲ್ಲಾಡಳಿತದಿಂದ ನನಗಾಗುತ್ತಿರುವ ಆಡಳಿತಾತ್ಮಕ ತೊಂದರೆಗಳ ಬಗ್ಗೆ ಸವಿವರವಾಗಿ ಅಂಕಿ ಅಂಶಗಳ ಸಮೇತ ಮಾಹಿತಿ ನೀಡಿರುತ್ತೇನೆ. ಆದುದರಿಂದ ನಾನು ನೀಡಿರುವ ಎಲ್ಲಾ ಅಂಶಗಳು ಪೂರ್ಣ ಪ್ರಮಾಣದಲ್ಲಿ ಸತ್ಯವನ್ನು ಸಾದರಪಡಿಸುತ್ತದೆ.

    ರಾಜೀನಾಮೆ ವಿದ್ಯಮಾನವೇ ಹೈಡ್ರಾಮ, ಬೆದರಿಕೆ ತಂತ್ರ ಅನುಸರಿಸಿದ್ರಾ ಶಿಲ್ಪಾನಾಗ್? ಸಿಎಸ್​ ಸ್ಫೋಟಕ ಹೇಳಿಕೆ

    ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಓರ್ವ ಅಧಿಕ ಪ್ರಸಂಗಿ: ಶಾಸಕ ಎನ್​. ಮಹೇಶ್​ ವಾಗ್ದಾಳಿ

    ರೋಹಿಣಿ ಸಿಂಧೂರಿ ವರ್ಗಾವಣೆಗೆ ಹೆಚ್ಚಿದ ಒತ್ತಡ! ಸರ್ಕಾರದ ಮುಂದಿನ ನಡೆಯ ಬಗ್ಗೆ ಭಾರೀ ಕುತೂಹಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts