More

    18 ಪುಟಗಳ ಸುದೀರ್ಘ ಪತ್ರಿಕಾ ಪ್ರಕಟಣೆ ಹೊರಡಿಸಿ ರೋಹಿಣಿ ಸಿಂಧೂರಿ ಆರೋಪಕ್ಕೆ ಶಿಲ್ಪಾನಾಗ್​ ತಿರುಗೇಟು

    ಮೈಸೂರು: ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆ ಹಿನ್ನೆಲೆಯಲ್ಲಿ ಕರ್ತವ್ಯದಿಂದ ವಿಮುಖರಾಗುವ ಮುನ್ನ ಕಾರ್ಯಕ್ಷಮತೆಯ ವಿವರಣೆ ನೀಡುವ ಮೂಲಕ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

    ಕರೊನಾ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳಿಗೆ ಸಂಬಂಧಿಸಿದ 18 ಪುಟಗಳ ಸುದೀರ್ಘ ಪತ್ರಿಕಾ ಪ್ರಕಟಣೆಯನ್ನು ಶಿಲ್ಪಾನಾಗ್​ ಹೊರಡಿಸಿದ್ದಾರೆ.

    ಕರೊನಾ ನಿಯಂತ್ರಣಕ್ಕಾಗಿ ಕೋವಿಡ್ ಮಿತ್ರ ಸ್ಥಾಪನೆ, ಸಿಸಿಸಿ ಸ್ಥಾಪನೆ, ಹೋಮ್ ಐಸೋಲೇಷನ್, ಕ್ವಾರಂಟೈನ್, ಸ್ಯಾನಿಟೈಸ್, ಟಾಸ್ಕ್ ಫೋರ್ಸ್ ಸಮಿತಿ ರಚನೆ, ಕೋವಿಡ್ ಟೆಲಿ ಕೇರ್ ಸೆಂಟರ್ ಸ್ಥಾಪನೆ ಸೇರಿದಂತೆ ಹೀಗೆ ಎಲ್ಲದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

    ಮಹಾನಗರ ಪಾಲಿಕೆಗೆ ದಾನಿಗಳು ನೀಡಿದ ಪಲ್ಸಿ ಆಕ್ಸಿಮೀಟರ್, ಪಿಪಿಇ ಕಿಟ್, ಆಕ್ಸಿಜನ್ ಕಾನ್ಸಂಟ್ರೇಟರ್ ಹೀಗೆ ವೈದ್ಯಕೀಯ ಉಪಕರಣಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಅವುಗಳನ್ನು ಯಾವ ಆಸ್ಪತ್ರೆಗಳಿಗೆ ನೀಡಲಾಗಿದೆ ಎಂಬುದರ ಬಗ್ಗೆಯೂ ಉಲ್ಲೇಖಿಸಲಾಗಿದೆ.

    ಕೊನೆಯ ಸಾಲಿನಲ್ಲಿ ಲೆಕ್ಕ ಪತ್ರವನ್ನೂ ಮಂಡಿಸಿರುವ ಶಿಲ್ಪಾನಾಗ್, ಇದುವರೆಗೆ 1.87 ಕೋಟಿ ರೂ. ಹಣ ಬಳಸಲಾಗಿದೆ ಎಂದು ತಿಳಿಸಿದ್ದಾರೆ. ರಾಜೀನಾಮೆಗೂ ಮುನ್ನ ಹೊರಡಿಸಿದ ಪ್ರಕಟಣೆಯಲ್ಲಿ ಶಿಲ್ಪಾನಾಗ್ ವಿವರಣೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

    65 ಕಾರ್ಪೋರೇಟರ್​ಗಳ ಸುದ್ದಿಗೋಷ್ಠಿ: ಶಿಲ್ಪಾ ನಾಗ್ ರಾಜೀನಾಮೆ ಅಂಗೀಕರಿಸದಿರಲು ಆಗ್ರಹ

    ಶಿಲ್ಪಾ ನಾಗ್​ ರಾಜೀನಾಮೆ ಸ್ವೀಕರಿಸೋಲ್ಲ : ಉಸ್ತುವಾರಿ ಸಚಿವ ಸೋಮಶೇಖರ್

    ರೋಹಿಣಿ ಸಿಂಧೂರಿ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ… ಎಳೆಎಳೆಯಾಗಿ ಬಿಚ್ಚಿಟ್ಟ ಶಿಲ್ಪಾನಾಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts