More

    VIDEO | ಕೊಳಲು ನುಡಿಸಿದ ಕ್ರಿಕೆಟಿಗ ಶಿಖರ್ ಧವನ್, ಅಭಿಮಾನಿಗಳು ಫಿದಾ!

    ನವದೆಹಲಿ: ಟೀಮ್ ಇಂಡಿಯಾದ ಎಡಗೈ ಆರಂಭಿಕ ಶಿಖರ್ ಧವನ್ ಅವರಿಗೆ ಕ್ರಿಕೆಟ್ ಜತೆಗೆ ನೃತ್ಯ ಮತ್ತು ಸಂಗೀತದ ಮೇಲೆಯೂ ಅಪಾರವಾದ ಪ್ರೀತಿ ಇದೆ. ಮೈದಾನದಲ್ಲೂ ಸಮಯ ಸಿಕ್ಕಾಗಲೆಲ್ಲಾ ನರ್ತಿಸುತ್ತ ಸಂಭ್ರಮಿಸುವ ಅವರು ಇದೀಗ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಬಂಧಿಯಾಗಿರುವ ವೇಳೆ ಸಮಯವನ್ನು ಕಳೆಯಲು ಸಂಗೀತವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೆ ಕೊಳಲು ನುಡಿಸುವುದನ್ನು ಕಲಿತಿರುವ ಧವನ್, ತಮ್ಮ ಕೊಳಲು ವಾದನವನ್ನು ಪ್ರದರ್ಶಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

    ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 8 ಪಂದ್ಯಗಳಲ್ಲಿ 380 ರನ್ ಬಾರಿಸಿ ಗಮನಸೆಳೆದಿದ್ದ ಧವನ್, ಜಗ್‌ಜಿತ್ ಸಿಂಗ್ ಅವರ ಜನಪ್ರಿಯ ಹಾಡನ್ನು ಕೊಳಲಿನಲ್ಲಿ ನುಡಿಸುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ‘ಆತ್ಮಕ್ಕಾಗಿ ಸಂಗೀತ. ಶಾಂತವಾಗಿರಿ, ಸಕಾರಾತ್ಮಕವಾಗಿರಿ. ಈ ಹಾಡನ್ನು ಊಹಿಸಬಲ್ಲಿರಾ? ಎಂದು ಧವನ್ ಬರೆದುಕೊಂಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ‘ಕೃಷ್ಣನನ್ನೇ ಕಂಡಂತಾಯಿತು’ ಎಂದು ಕೆಲವರು ಕಾಮೆಂಟ್ ಹಾಕಿ ಧವನ್ ಕೊಳಲು ವಾದನವನ್ನು ಶ್ಲಾಸಿದ್ದಾರೆ.

    ಇದನ್ನೂ ಓದಿ: ರಾಹುಲ್ ಗಾಂಧಿಗೆ ಬಾಕ್ಸಿಂಗ್ ಕಲಿಸಿದ್ದ ಕೋಚ್ ಇನ್ನಿಲ್ಲ

    ಬೆಂಗಳೂರಿನ ವೇಣುಗೋಪಾಲ್ ಎಂಬವರಿಂದ ಧವನ್ ಕೊಳಲು ವಾದನವನ್ನು ಕಲಿತಿದ್ದು, ಈ ಹಿಂದೆಯೂ ಕೊಳಲು ವಾದನದ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ‘ಕಳೆದ 3 ವರ್ಷಗಳಿಂದ ಕೊಳಲು ವಾದನ ಕಲಿಯುತ್ತಿದ್ದೆ. ಇದು ನನ್ನ ನೆಚ್ಚಿನ ವಾದ್ಯ. ಇನ್ನೂ ಸಾಕಷ್ಟು ದೂರ ಸಾಗಬೇಕಾಗಿದೆ. ಈಗಷ್ಟೇ ಆರಂಭಿಸಿರುವೆ’ ಎಂದು ಧವನ್ 2019ರಲ್ಲೊಮ್ಮೆ ಹೇಳಿಕೊಂಡಿದ್ದರು. ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯದ ಧವನ್, ಜುಲೈನಲ್ಲಿ ನಡೆಯಲಿರುವ ಭಾರತದ 2ನೇ ಸ್ತರದ ತಂಡಕ್ಕೆ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

    ಶ್ರೀಲಂಕಾ ಪ್ರವಾಸಕ್ಕೆ ಧವನ್​ ಅವರೇ ನಾಯಕನಾಗಲಿ ಎಂದು ವೇಗಿ ​ದೀಪಕ್ ಚಹರ್​ ಹೇಳಿದ್ಯಾಕೆ.?

    ಭಾರತ-ಕಿವೀಸ್ ನಡುವಿನ ಟೆಸ್ಟ್ ವಿಶ್ವಕಪ್ ಫೈನಲ್ ವೀಕ್ಷಿಸಲು ಪ್ರೇಕ್ಷಕರಿಗೆ ಪ್ರವೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts