ಸ್ವಜನ ಪಕ್ಷಪಾತ, ಭ್ರಷ್ಟಾಚಾರಗಳಿಂದ ದೂರವಿರಿ

blank

ಶಿಕಾರಿಪುರ: ಯಾವುದೇ ಕಪ್ಪು ಚುಕ್ಕೆಗಳಿಲ್ಲದಂತೆ ಜನಸೇವೆ ಮಾಡಿ. ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರಗಳಿಂದ ದೂರವಿರಿ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

blank

ಪಟ್ಟಣದಲ್ಲಿ ಸೋಮವಾರ ನೂತನ ಗ್ರಾಪಂ ಸದಸ್ಯರಿಗೆ ಬಿಜೆಪಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ತಾಲೂಕಿನ 35 ಪಂಚಾಯಿತಿಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಸ್ಪರ್ಧಿಸಿದ್ದ 428 ಅಭ್ಯರ್ಥಿಗಳಲ್ಲಿ 325 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದರು.

ತಾಲೂಕಿನಲ್ಲಿ ನಡೆಯುತ್ತಿರುವ ಶಾಶ್ವತ ನೀರಾವರಿ ಯೋಜನೆಗೆ ಪ್ರತಿಪಕ್ಷಗಳು ಅಡ್ಡಗಾಲು ಹಾಕುತ್ತಿವೆ. ರೈತರಿಗೆ ವರದಾನವಾಗಿರುವ ಈ ಯೋಜನೆಯನ್ನು ವಿರೋಧಿಸುವವರನ್ನು ಪ್ರತಿಪಕ್ಷ ನಾಯರು ಬೆಂಬಲಿಸುತ್ತಾರೆಂದರೆ ಅವರ ರೈತಪರ ಕಾಳಜಿ ಜನತೆಗೆ ಅರಿವಾಗಿದೆ. ನೀರಿನ ವಿಚಾರದಲ್ಲಿ ರಾಜಕೀಯ ಸಲ್ಲದು. ಒಂದು ಕಾಲದಲ್ಲಿ ಅತ್ಯಂತ ಹಿಂದುಳಿದ ತಾಲೂಕು ಎಂದು ನಮೂದಾಗಿದ್ದ ಶಿಕಾರಿಪುರ ತಾಲೂಕು ಅಭಿವೃದ್ಧಿಯಿಂದ ಪ್ರಕಾಶಿಸುತ್ತಿದೆ ಎಂದು ಹೇಳಿದರು.

ಎಂಎಸ್​ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ನಾವೆಲ್ಲರೂ ಯಡಿಯೂರಪ್ಪ ಅವರ ಜನಪರವಾದ ಹೋರಾಟದ ಫಲಾನುಭವಿಗಳು. ಅವರ ಜನಪರವಾದ, ರೈತಪರವಾದ ಕಾಳಜಿ ಅದ್ಭುತ. ಇಂದು ಏಕಾಏಕಿ ಅವರಿಗೆ ಅಧಿಕಾರ ಬಂದಿಲ್ಲ. ಅದರ ಹಿಂದೆ ಐದು ದಶಕಗಳ ಜನಪರವಾದ ಹೋರಾಟವಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಹತ್ತು ಹಲವು ಏಳು ಬೀಳುಗಳ ನಡುವೆ ಪಕ್ಷ ಸಂಘಟಿಸಿದ ಯಡಿಯೂರಪ್ಪನವರೇ ನೂತನವಾಗಿ ಗ್ರಾಪಂಗೆ ಆಯ್ಕೆಯದ ನಿಮಗೆ ಮಾದರಿ. ನಿಮ್ಮ ಗೆಲುವು ನಿಮ್ಮ ಗ್ರಾಮದ ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸದಿರಲಿ ಎಂದು ಸಲಹೆ ನೀಡಿದರು.

ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿ, ನಿಮ್ಮ ಗೆಲುವಿನಿಂದ ಬಿಜೆಪಿಗೆ ಭೀಮಬಲ ಬಂದಿದೆ. ನೀವು ನಿಮ್ಮ ಜತೆ ಸೋತವರನ್ನೂ ಕರೆದುಕೊಂಡು ಗ್ರಾಮದ ಅಭಿವೃದ್ಧಿ ಮಾಡಿ. ಮುಖ್ಯಮಂತ್ರಿಗಳ ಕಚೇರಿ ನಿಮಗಾಗಿ ಸದಾ ತೆರೆದಿರುತ್ತದೆ ಎಂದು ಹೇಳಿದರು.

ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಪ್ರಮುಖರಾದ ಅಗಡಿ ಅಶೋಕ್, ರಾಮಾನಾಯ್್ಕ ಸಣ್ಣ ಹನುಮಂತಪ್ಪ, ಕೆ.ಹಾಲಪ್ಪ, ರುದ್ರಪ್ಪಯ್ಯ, ಗಾಯತ್ರಿ ಮಲ್ಲಪ್ಪ, ಜಿಪಂ ಸದಸ್ಯೆ ಅರುಂಧತಿ, ತಾಪಂ ಅಧ್ಯಕ್ಷ ಸುರೇಶ್ ನಾಯ್್ಕ ಪುರಸಭೆ ಅಧ್ಯಕ್ಷೆ ಲ್ಷ್ಮಮಹಾಲಿಂಗಪ್ಪ ಇತರರಿದ್ದರು.

Share This Article
blank

ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದಾಗುವ ಪ್ರಯೋಜನಗಳು…egg

egg: ಮನುಷ್ಯನ ಆರೋಗ್ಯಕ್ಕೆ ಮೊಟ್ಟೆ ಬಹಳ ಒಳ್ಳೆಯದು. ಹೀಗಾಗಿ ದಿನಾ ಬೆಳಗ್ಗೆ ಬೇಯಿಸಿದ ಮೊಟ್ಟೆ ತಿನ್ನುವ…

ಬೆಳಿಗ್ಗೆ ಎದ್ದು ಮೊಬೈಲ್ ನೋಡುವ ಬದಲು ಈ ಕೆಲಸಗಳನ್ನು ಮಾಡಿ, ದಿನವಿಡೀ ಉತ್ಸಾಹದಿಂದಿರಬಹುದು! Morning

Morning: ಬೆಳಿಗ್ಗೆ ಚೆನ್ನಾಗಿ ಪ್ರಾರಂಭವಾದರೆ, ಇಡೀ ದಿನ ಚೆನ್ನಾಗಿ ನಡೆಯುತ್ತದೆ. ದೇಹವನ್ನು ಆರೋಗ್ಯಕರವಾಗಿ, ಫಿಟ್ ಆಗಿ…

blank