More

    ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಒತ್ತಾಯ; ಕೈಪಡೆಯ ಲೆಟರ್ ವಾರ್

    ಹಾವೇರಿ: ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರದ ಭ್ಯರ್ಥಿಯಾಗಲು ಅಲ್ಪಸಂಖ್ಯಾತ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲಾ ಅವರಿಗೆ ಪತ್ರ ಬರೆದಿದ್ದಾರೆ.
    ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ, ಹಿರೇಕೆರೂರ ಅಭ್ಯರ್ಥಿ ಯು.ಬಿ.ಬಣಕಾರ, ರಾಣೆಬೆನ್ನೂರಿನ ಪ್ರಕಾಶ ಕೋಳಿವಾಡ, ಬ್ಯಾಡಗಿಯ ಬಸವರಾಜ ಶಿವಣ್ಣವರ, ಹಾವೇರಿಯ ರುದ್ರಪ್ಪ ಲಮಾಣಿ ಪತ್ರಕ್ಕೆ ಸಹಿ ಮಾಡಿ, ಸುರ್ಜೆವಾಲಾರಿಗೆ ರವಾನಿಸಿದ್ದಾರೆ. ಖಾದ್ರಿ ಕುರಿತು ಮಯೂರ ಜೈಕುಮಾರ ಪತ್ರ ಬರೆದ ಬೆನ್ನಲ್ಲೇ ಇದೀಗ ಜಿಲ್ಲೆಯ ಶಾಸಕ, ಮಾಜಿ ಶಾಸಕರು ಪತ್ರ ಬರೆದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
    ಪತ್ರದ ವಿವರಣೆ
    ‘ಈಗಾಗಲೇ ಶಿಗ್ಗಾಂವಿ ಕ್ಷೇತ್ರದಲ್ಲಿ ನಾಲ್ಕೈದು ಬಾರಿ ಅವಕಾಶ ನೀಡಲಾಗಿದ್ದು, ಈ ಬಾರಿಯೂ ಮತ್ತೊಂದು ಅವಕಾಶ ನೀಡುವಂತೆ ಮತದಾರರು, ಮುಖಂಡರು ಒತ್ತಾಯಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ಕ್ಷೇತ್ರದಲ್ಲೂ ಮುಸ್ಲಿಂ ಮತದಾರರಿದ್ದಾರೆ. ಇವರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಜಿಲ್ಲೆಯ ಒಂದು ಕ್ಷೇತ್ರವನ್ನಾದರೂ ಅಲ್ಪಸಂಖ್ಯಾತರಿಗೆ ಬಿಟ್ಟುಕೊಡುವಂತೆ ಸಮುದಾಯದ ಮುಖಂಡರು, ಸಾಮಾಜಿಕ ಕಾರ್ಯಕರ್ತರು ನಮ್ಮಲ್ಲಿ ಒತ್ತಡ ಹೇರುತ್ತಿದ್ದಾರೆ. ಈ ಭಾಗದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ ಯಾಸೀರ್ ಖಾನ್ ಪಠಾಣರಿಗೆ ಒಂದು ಅವಕಾಶ ಕೊಡಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದೆ. ಹಾಗಾಗಿ ಪಠಾಣರನ್ನು ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ತಮ್ಮಲ್ಲಿ ಕೋರುತ್ತೇವೆ’ ಎಂದು ಅಭ್ಯರ್ಥಿಗಳು ಬರೆದಿದ್ದಾರೆ.
    ಕೋಟ್:
    ನನಗೆ ಟಿಕೆಟ್ ತಪ್ಪಿದ್ದರ ಹಿಂದೆ ಯಾರ ಕೈವಾಡ ಇದೆ ಎಂಬುದು ಈ ಪತ್ರದಿಂದ ಸಾಬೀತಾಗಿದೆ. ನಾನು ಯಾವುದೇ ಸಾಂವಿಧಾನಿಕ ಹುದ್ದೆ ಇಲ್ಲದೇ 75 ಸಾವಿರ ಮತ ಪಡೆದಿದ್ದೇನೆ. ಇವರು ಮಾಜಿ ಶಾಸಕ, ಸಚಿವರಾಗಿ 25, 30 ಸಾವಿರ ಮತಗಳಿಂದ ಸೋತಿದ್ದಾರೆ. ರಂಜಾನ್ ತಿಂಗಳಿದೆ. ಇವರಿಗೆ ದೇಔರು ಒಳ್ಳೆಯದು ಮಾಡಲೆಂದು ಪ್ರಾರ್ಥಿಸುವೆ.
    ಅಜೀಮ್‌ಪೀರ್ ಖಾದ್ರಿ, ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts