More

    ಶಿಗ್ಗಾಂವಿ ತಹಸೀಲ್ದಾರ್ ಕಚೇರಿ ಸೀಲ್​ಡೌನ್

    ಶಿಗ್ಗಾಂವಿ: ಶಿಗ್ಗಾಂವಿ ತಹಸೀಲ್ದಾರರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆರು ಇಲಾಖೆಗಳನ್ನು ಒಳಗೊಂಡಿದ್ದ ತಹಸೀಲ್ದಾರ್ ಕಚೇರಿಯನ್ನು ಶನಿವಾರ ಸೀಲ್​ಡೌನ್ ಮಾಡಲಾಗಿದೆ.

    ಶುಕ್ರವಾರ ಸಂಜೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಚೇರಿ ಸೀಲ್​ಡೌನ್​ಗೆ ಆದೇಶ ಮಾಡಿರುವ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಮುಂದಿನ ಆದೇಶದವರೆಗೂ ಕಚೇರಿ ಸಿಬ್ಬಂದಿಗೆ ಸಾಮೂಹಿಕ ರಜೆ ಘೊಷಿಸಿದ್ದಾರೆ.

    ತಹಸೀಲ್ದಾರ್ ಪ್ರಕಾಶ ಕುದರಿ, ಕರೊನಾ ಸೋಂಕು ತಡೆಗೆ ಅಧಿಕಾರಿಗಳ ತಂಡ ಕಟ್ಟಿಕೊಂಡು ತಾಲೂಕಿನಾದ್ಯಂತ ಜನ ಜಾಗೃತಿ ಮೂಡಿಸುವ ಜತೆಗೆ ಬಂಕಾಪುರ, ಶಿಗ್ಗಾಂವಿ ಪಟ್ಟಣ ಹಾಗೂ ಸೀಲ್​ಡೌನ್​ಗೊಳಗಾದ ಗ್ರಾಮೀಣ ಪ್ರದೇಶಗಳಿಗೆ ನಿರಂತರವಾಗಿ ಭೇಟಿ ನೀಡಿ ಅಲ್ಲಿನ ಜನರ ಕುಂದು- ಕೊರತೆಗಳಿಗೆ ಸ್ಪಂದಿಸಿದ್ದರು.

    ಶುಕ್ರವಾರ ಅವರಿಗೆ ಸೋಂಕು ಪತ್ತೆಯಾಗಿದ್ದರಿಂದ ಒಂದೇ ಕಚೇರಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಬ್​ರಜಿಸ್ಟ್ರಾರ್, ಆಹಾರ ವಿಭಾಗ, ಸರ್ವೆ, ಕಂದಾಯ, ಟ್ರಜರಿ, ನೆಮ್ಮದಿ ಕೇಂದ್ರ ಸೇರಿ ಎಲ್ಲ ಆರು ಇಲಾಖೆ ಕಾರ್ಯ ಅನಿರ್ಧಿಷ್ಟಾವಧಿವರೆಗೆ ಸಂಪೂರ್ಣ ಸ್ತಬ್ಧವಾಗಿದೆ. ಶುಕ್ರವಾರ ಬೆಳಗ್ಗೆ ಪುರಸಭೆ ಸಿಬ್ಬಂದಿ ಕಚೇರಿ ಹೊರಗೆ ಹಾಗೂ ಒಳಗಡೆ ಸ್ಯಾನಿಟೈಸರ್ ಸಿಂಪಡಿಸಿದರು. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಕಚೇರಿ, ಕೋರ್ಟ್ ಆವರಣದ ರಸ್ತೆ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.

    ಮಲ್ಲಿಕಾರ್ಜುನ ಹೆಗ್ಗಣ್ಣವರ ಪ್ರಭಾರ: ತಹಸೀಲ್ದಾರ್ ಪ್ರಕಾಶ ಕುದರಿ ಅವರಿಗೆ ಸೋಂಕು ದೃಢಪಟ್ಟು ಕೋವಿಡ್ ಆಸ್ಪತ್ರೆಗೆ ದಾಖಲಾಗಿರುವುದರಿಂದ ಸವಣೂರಿನ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರನ್ನು ಪ್ರಭಾರ ತಹಸೀಲ್ದಾರರನ್ನಾಗಿ ನೇಮಕ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಆದೇಶ ಹೊರಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts