More

    ಈ ಮಹಿಳೆಯರು ಎರಡು ತಿಂಗಳಲ್ಲಿ ತಯಾರಿಸಿದ್ದು 10 ಕೋಟಿ ಮಾಸ್ಕ್​

    ನವದೆಹಲಿ: ಕರೊನಾ ವಿರುದ್ಧ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವ ಸೇನಾನಿಗಳಾದ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರ ಸೇವೆಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

    ಲಾಕ್​ಡೌನ್​ ಸಮಯದಲ್ಲೂ ಇವರ ಸೇವೆಗೆ ಪೂರಕ ಹಾಗೂ ಪರೋಕ್ಷವಾಗಿ ಹಲವರು ಶ್ರಮಿಸುತ್ತಿದ್ದಾರೆ. ಅದರಲ್ಲೂ ಈ ಯೋಧರಿಗೆ ಗುರಾಣಿ ನೀಡುವ ಕೆಲಸದಲ್ಲಿ ತೊಡಗಿದೆ ಸ್ತ್ರೀಶಕ್ತಿ.

    ದೇಶಾದ್ಯಂತ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಟೇಲರಿಂಗ್​ ಕೌಶಲವನ್ನು ಬಳಸಿಕೊಂಡು ಮಾಸ್ಕ್​, ಪಿಪಿಇ ಕಿಟ್​, ಸ್ಯಾನಿಟೈಜರ್​ ತಯಾರಿಕೆ ಮೊದಲಾದವುಗಳಲ್ಲಿ ತೊಡಗಿವೆ.

    ಇದನ್ನೂ ಓದಿ; ಭಾರತದ ವೈದ್ಯಕೀಯ ರಾಯಭಾರ, 90ಕ್ಕೂ ಅಧಿಕ ರಾಷ್ಟ್ರಗಳಿಗೆ ನೆರವು

    ಮಾರ್ಚ್​ನಿಂದ ಈವರೆಗೆ 10 ಕೋಟಿಗೂ ಹೆಚ್ಚು ಮಾಸ್ಕ್​ಗಳನ್ನು ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿದ್ದಾರೆ. 12 ರಾಜ್ಯಗಳ 4,000ಕ್ಕೂ ಅಧಿಕ ಮಹಿಳೆಯರು 2 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್​ಗಳನ್ನು ಉತ್ಪಾದಿಸಿದ್ದಾರೆ ಎಂದು ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆ ಮಾಹಿತಿ ನೀಡಿದೆ.

    ದೀನ್​ದಯಾಳ್​ ಅಂತ್ಯೋದಯ ಯೋಜನೆಯ- ರಾಷ್ಟ್ರೀಯ ಜೀವನಾಧಾರ ಯೋಜನೆಯಡಿಯಲ್ಲಿ ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ಮಹಿಳೆಯರು ಪಿಪಿಇ ಕಿಟ್​ಗಳಲ್ಲಿ ಬಳಸಲಾಗುವ ಮಾಸ್ಕ್​, ಫೇಸ್​ಶೀಲ್ಡ್​, ಕೈಗವಸು, ಶೂ ಕವರ್​, ಗೌನ್​ ಮೊದಲಾದವುಗಳನ್ನು ತಯಾರಿಸಿ ನೀಡುತ್ತಿದ್ದಾರೆ ಎಂದು ಇಲಾಖೆ ತಿಳಿಸಿದೆ.

    ಇದನ್ನೂ ಓದಿ; ಕರೊನಾ ಲಸಿಕೆ ಸಂಶೋಧನೆ ಮಾಹಿತಿಗೆ ಚೀನಾ ಹ್ಯಾಕರ್​ಗಳಿಂದ ಕನ್ನ…! 

    ಸ್ವಸಹಾಯ ಸಂಘಗಳ ಮೂಲಕ ಮೂರು ಲಕ್ಷ ಲೀಟರ್​ ಸ್ಯಾನಿಟೈಜರ್​ ಉತ್ಪಾದಿಸಲಾಗಿದೆ. ಹಲವು ಕಡೆಗಳಲ್ಲಿ ಸಾಮುದಾಯಿಕ ಅಡುಗೆ ಮನೆಗಳನ್ನು ನಿರ್ವಹಿಸುತ್ತಿದ್ದಾರೆ. ಈ ಸಂಘಗಳಿಗೆ ನೆರವಾಗಲು ಕೇಂದ್ರ ಸರ್ಕಾರವು ಮೊದಲ ಕಂತಿನ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಇಲಾಖೆ ತಿಳಿಸಿದೆ.

    ಸ್ವಾವಲಂಬನೆ ಸಾಧಿಸಿದ ಭಾರತ: ಆರಂಭದಲ್ಲಿ ಪಿಪಿಇ ಕಿಟ್​ಗಳನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕಿತ್ತು. ಆದರೆ, ಈಗ ಇದರಲ್ಲಿ ನಾವು ಸ್ವಾವಲಂಬನೆಯನ್ನು ಸಾಧಿಸಿದ್ದೇವೆ. ಪ್ರತಿದಿನ ಎರಡು ಲಕ್ಷಕ್ಕೂ ಅಧಿಕ ಪಿಪಿಇ ಕಿಟ್​ಗಳನ್ನು ಉತ್ಪಾದಿಸಲಾಗುತ್ತಿದೆ. ಅದರಲ್ಲೂ ಮೇ 2ರಂದು ಒಂದೇ ದಿನ 2.06 ಲಕ್ಷ ಪಿಪಿಇ ಕಿಟ್​ಗಳನ್ನು ತಯಾರಿಸಲಾಗಿದೆ. ಇದು ಅಸಾಧ್ಯವೆನಿಸಿದ ಗುರಿಯಾಗಿತ್ತು. ಈ ನಿಟ್ಟಿನಲ್ಲಿ ಭಾರತವೀಗ ತನಗೆ ಅಗತ್ಯವಾದ ಕಿಟ್​ಗಳನ್ನು ತಾನೇ ತಯಾರಿಸಿಕೊಳ್ಳುತ್ತಿದೆ ಎಂದು ಆರೋಗ್ಯ ಇಲಾಕೆ ಅಧಿಕಾರಿಗಳು ತಿಳಿಸಿದ್ದಾರೆ.

    ಕರೊನಾದೊಂದಿಗೆ ಬದುಕಲು ಕಲಿಯಿರಿ, ಇನ್ನೆರಡು ವರ್ಷ ಲಸಿಕೆ ಅನುಮಾನ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts