More

    ಭಾಜಪದ ಮತ್ತೊಂದು ವಿಕೆಟ್ ಪತನ, ಶೆಟ್ಟರ್​ ಬಿಜೆಪಿಗೆ ಗುಡ್​ಬೈ; ನಾಳೆಯೇ ರಾಜೀನಾಮೆ

    ಹುಬ್ಬಳ್ಳಿ: ತಮಗೆ ಟಿಕೆಟ್ ಘೋಷಣೆ ಆಗದ ಹಿನ್ನೆಲೆಯಲ್ಲಿ ನಿನ್ನೆ ತೀರಾ ಅಸಮಾಧಾನಗೊಂಡು ಗಡುವು ನೀಡಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಧರ್ಮೇಂದ್ರ ಪ್ರಧಾನ್ ತೆರಳಿದ್ದು, ಅವರೊಂದಿಗೆ ಗಂಭೀರವಾದ ಮಾತುಕತೆ ನಡೆಸಿದ್ದಾರೆ. ಅದಾಗ್ಯೂ ಮಾತುಕತೆ ಫಲಪ್ರದವಾಗದ್ದರಿಂದ ಶೆಟ್ಟರ್​ ಬಿಜೆಪಿಗೆ ಗುಡ್​ಬೈ ಹೇಳಲಿದ್ದು, ನಾಳೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

    ಹುಬ್ಬಳ್ಳಿಯಲ್ಲಿನ ಜಗದೀಶ ಶೆಟ್ಟರ್ ನಿವಾಸದಲ್ಲಿ ಈ ಗೌಪ್ಯ ಸಭೆ ನಡೆದಿದೆ. ಸುಮಾರು ಅರ್ಧ ಗಂಟೆ ಕಾಲ ನಡೆದ ಈ ಗಂಭೀರ ಮಾತುಕತೆ ಫಲಪ್ರದವಾದವಾಗಿಲ್ಲ. ಶೆಟ್ಟರ್ ಜತೆ ಚರ್ಚಿಸಿ ಹೊರ ನಡೆದ ಮೂವರೂ ನಾಯಕರು ಮಾಧ್ಯಮದವರಿಗೆ ಯಾವುದೇ ಹೇಳಿಕೆ ನೀಡದೆ ತೆರಳಿದ್ದಾರೆ.

    ಮೂವರೂ ನಾಯಕರು ಪೊಲೀಸ್ ಸರ್ಪಗಾವಲಿನಲ್ಲಿ ಮರಳಿದ್ದು, ಅವರ ಕಾರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ‌ರು. ಅದಾಗ್ಯೂ ಕಾರ್ಯಕರ್ತರ ಮಧ್ಯೆಯೇ ಕಾರು ಹಾದು ಹೋಗಿದ್ದು, ಶೆಟ್ಟರ್ ಬಿಜೆಪಿಯಲ್ಲಿ ಮುಂದುವರಿಯಲಿದ್ದಾರೆ ಎಂದಷ್ಟೇ ಪ್ರಧಾನ್ ಈ ವೇಳೆ ಹೇಳಿದರು. ಆದರೆ ಅದರ ಬೆನ್ನಿಗೇ ಪ್ರತಿಕ್ರಿಯೆ ನೀಡಿರುವ ಶೆಟ್ಟರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ಇದನ್ನೂ ಓದಿ: ಮಾಡಾಳ್ ವಿರೂಪಾಕ್ಷಪ್ಪ ಜೈಲಿನಿಂದ ಬಿಡುಗಡೆ; ಭ್ರಷ್ಟಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ಆರೋಪಿ

    ಪಕ್ಷ ಈ ವರೆಗೂ ನನಗೆ ಸಾಕಷ್ಟು ಸ್ಥಾನಮಾನ ಕೊಟ್ಟಿದೆ, ನಾನೂ ಪಕ್ಷನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಯಾವುದೇ ಹಗರಣಗಳಿಲ್ಲ, ಯಾವುದೇ ಕಳಂಕವೂ ಇಲ್ಲ. ಜನಸಂಘದಿಂದ ಬಂದಂತ ಕುಟುಂಬ ನಮ್ಮದು. ನನ್ನ ಮೇಲೆ ಯಾವುದೇ ಕಳಂಕ ಇಲ್ಲದಿದ್ದರೂ ಯಾಕೆ ಕಾರಣ ನೀಡುತ್ತಿಲ್ಲ? ಎಂದಿರುವ ಶೆಟ್ಟರ್, ನನಗೆ ಟಿಕೆಟ್ ಯಾಕೆ ಕೊಟ್ಟಿಲ್ಲ ಎನ್ನುವುದನ್ನು ಅವರು ಈವರೆಗೂ ಹೇಳುತ್ತಿಲ್ಲ, ಅದೇ ನನಗೆ ಬೇಸರ ತಂದಿದೆ ಎಂದಿದ್ದಾರೆ.

    ಇದನ್ನೂ ಓದಿ: ಸಿದ್ದರಾಮಯ್ಯಗೆ ವಾಯುಯಾನ ಕಂಟಕ?; ನಿನ್ನೆ ವಿಮಾನ, ಇಂದು ಹೆಲಿಕಾಪ್ಟರ್​ ಪ್ರಯಾಣದಲ್ಲಿ ಸಮಸ್ಯೆ!  

    ನನಗೆ ಟಿಕೆಟ್ ನೀಡಲು ಮೊದಲೇ ನಿರಾಕರಿಸಿದ್ದರೆ ಅದನ್ನು ಮೊದಲೇ ಹೇಳಬೇಕಿತ್ತು. ಈ ರೀತಿ ಸಂಕಟ ಮಾಡಿಸಿ, ಉಪಯೋಗ ಮಾಡಿ ಚೆಲ್ಲುವ ರೀತಿ ಮಾಡಿರುವುದು ನೋವುಂಟು ಮಾಡಿದೆ. ನನ್ನನ್ನು ಯೂಸ್ ಆ್ಯಂಡ್ ಥ್ರೋನಂತೆ ಮಾಡಿದ್ದಾರೆ. ಜನರು ಸಾಕಷ್ಟು ಪ್ರೀತಿ ವಿಶ್ವಾಸ ಇಟ್ಟಿದ್ದಾರೆ, ಆ ಪ್ರೀತಿಗಾದರೂ ಬೆಲೆ ಕೊಡುವಂಥ ಕೆಲಸವನ್ನು ಪಕ್ಷ ಮಾಡಲಿಲ್ಲ. ಧರ್ಮೇಂದ್ರ ಪ್ರಧಾನ್ ಅವರು ಬೇರೆ ಅವಕಾಶಗಳ ಬಗ್ಗೆ ಹೇಳಿದ್ದು, ಕುಟುಂಬದ ಸದಸ್ಯರನ್ನು ಆಯ್ಕೆ ಮಾಡಿ ಎಂದರು. ಕುಟುಂಬದವರಿಗೆ ಕೊಡೋದು ಸರಿ, ಆದ್ರೆ ನನಗೆ ಯಾಕೆ ಟಿಕೆಟ್ ಕೊಡ್ತಿಲ್ಲ ಅಂತ ಪ್ರಶ್ನೆ ಕೇಳಿದ್ದೇನೆ. ಆದರೆ ಅದ್ಯಾವುದಕ್ಕೂ ನನಗೆ ಉತ್ತರ ಸಿಗುತ್ತಿಲ್ಲ. ಇದೊಮ್ಮೆ ಅವಕಾಶ ಕೊಡಿ ಅಂತಲೂ ಕೇಳಿದ್ದೇನೆ. ನಾನು ಯಾವತ್ತೂ ಹಠಕ್ಕೆ ಬಿದ್ದ ವ್ಯಕ್ತಿಯಲ್ಲ, ಈಗ ನನಗೆ ಹಠ ಬರುತ್ತಿದೆ. ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಪಕ್ಷ ನನ್ನನ್ನ ಈ ರೀತಿ ನಡೆಸಿಕೊಂಡಿದ್ದರಿಂದ ಬೇಜಾರಾಗಿ ರಾಜೀನಾಮೆ ಕೊಡುತಿದ್ದೇನೆ. ನಾಳೆ ಬೆಳಗ್ಗೆ ಶಿರಸಿಗೆ ಹೋಗಿ ರಾಜೀನಾಮೆ ಕೊಡುತ್ತೇನೆ ಎಂದು ಅವರು ಹೇಳಿದ್ದಾರೆ. ಆ ಬಳಿಕ ಅವರು ತಮ್ಮ ಮುಂದಿನ ನಡೆ ಬಗ್ಗೆ ಸ್ಪಷ್ಟವಾಗಿ ತಿಳಿಸುವ ಸಾಧ್ಯತೆಗಳಿವೆ.

    ಪಕ್ಷಕ್ಕಾಗಿ ದುಡಿದಿದ್ದಾನಂತೆ ಸೈಲೆಂಟ್ ಸುನೀಲ್; ಆತ ಪಕ್ಷದ ಸದಸ್ಯನೇ ಅಲ್ಲ ಎಂದ ಕಟೀಲ್

    ಕೋವಿಡ್​ನಿಂದ ಸತ್ತಿದ್ದ ಎನ್ನಲಾದ ವ್ಯಕ್ತಿ 2 ವರ್ಷದ ಬಳಿಕ ಮನೆಗೇ ಬಂದ!; ಅಂತ್ಯಸಂಸ್ಕಾರ ಮಾಡಿದ್ವಿ ಎಂದಿದ್ದ ಅಧಿಕಾರಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts