More

    ಎಚ್​ಪಿಎಲ್​ನಲ್ಲಿ ಶೆಟ್ಟಣ್ಣವರ ಕನ್ಟ್ರಕ್ಷನ್ಸ್ ತಂಡ ಚಾಂಪಿಯನ್

    ಹಳಿಯಾಳ: ಹಳಿಯಾಳ ಪ್ರೀಮಿಯರ್ ಲೀಗ್ (ಎಚ್​ಪಿಎಲ್) ಕ್ರಿಕೆಟ್​ಪಂದ್ಯಾವಳಿಯಲ್ಲಿ ಪಟ್ಟಣದ ಶೆಟ್ಟಣ್ಣವರ ಕನ್ಟ್ರಕ್ಷನ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿ 71 ಸಾವಿರ ರೂ. ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

    ಎಸ್​ಎಲ್​ಜಿ ಗ್ರೂಪ್ ಪ್ರಾಯೋಜಕತ್ವದ ದಿ. ಲಕ್ಷಣ ಘೊಟ್ನೇಕರ ಅವರ ಸ್ಮರಣಾರ್ಥ ಸೋಮವಾರದಿಂದ ಗುರುವಾರದವರೆಗೆ ಪಟ್ಟಣದ ಶ್ರೀ ಛತ್ರಪತಿ ಶಿವಾಜಿ ತಾಲೂಕು ಕ್ರೀಡಾಂಗಣದಲ್ಲಿ ಜರುಗಿತು.

    ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಜೆ.ಜೆ. ವಾರಿಯರ್ಸ್ ತಂಡ 8 ಓವರ್ ಗಳಲ್ಲಿ 72 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ಶೆಟ್ಟಣ್ಣವರ ಕನ್ಟ್ರಕ್ಷನ್ಸ್ ತಂಡ 2 ವಿಕೆಟ್ ಕಳೆದುಕೊಂಡು 73 ರನ್​ಗಳಿಸಿ ಜಯಗಳಿತು. ರನ್ನರ್ ಅಪ್ ಪ್ರಶಸ್ತಿ ಪಡೆದ ಜೆ. ಜೆ. ವಾರಿಯರ್ಸ್ ತಂಡ 35 ಸಾವಿರ ರೂ. ನಗದು, ಟ್ರೋಫಿ ನೀಡಲಾಯಿತು.

    ಜೆ. ಜೆ. ವಾರಿಯರ್ಸ್​ನ ಲಕ್ಷ್ಮಣ ಹೆಳವರ ಬೆಸ್ಟ್ ಬ್ಯಾಟ್ಸಮನ್ ಹಾಗೂ ಸಂತೋಷ ನಾಯ್ಕ ಬೆಸ್ಟ್ ಬಾಲರ್ ಪ್ರಶಸ್ತಿ ಪಡೆದರು. ಶೆಟ್ಟಣ್ಣವರ ಕನ್ಟ್ರಕ್ಷನ್ಸ್ ತಂಡದ ಸೋಮನಾಥ ಮಾಚಕ ಮ್ಯಾನ್ ಆಫ್ ದಿ ಮ್ಯಾಚ್, ನಿಜಾಮ್ ಭಾಗವತಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

    ವಿಜೇತ ತಂಡಗಳಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್ .ಎಲ್. ಘೊಟ್ನೇಕರ ಬಹುಮಾನ ವಿತರಿಸಿ, ಮುಂದಿನ ಬಾರಿ ಪ್ರಶಸ್ತಿಯ ಮೊತ್ತ 1 ಲಕ್ಷ ರೂ.ಗೆ ಹೆಚ್ಚಿಸಲಾಗುವುದು ಎಂದು ಘೊಷಿಸಿದರು.

    ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ, ಎಪಿಎಂಸಿ ಉಪಾಧ್ಯಕ್ಷ ಸಂತೋಷ ಮಿರಾಶಿ, ಮಾಜಿ ಜಿಪಂ ಸದಸ್ಯ ವಾಮನ ಮಿರಾಶಿ, ಪ್ರಮುಖರಾದ ಯಲಪ್ಪಾ ಮಾಲವಣಕರ, ಬಾಳಕೃಷ್ಣ ಶಹಪುರಕರ, ರಹಿಜ ಕೊಟೂರ, ಸುಭಾನಿ ಹುಬ್ಬಳ್ಳಿ, ರೆಹಮಾನ್ ಜಂಬುವಾಲೆ, ಯಶವಂತ ಪಟ್ಟೆಕರ, ಸಂಘಟಕರಾದ ರಮೇಶ ಶೆಟ್ಟಿ , ಮಹಾಂತೇಶ ತೋರಲೇಕರ, ರಾಜು ದೂರ್ವೆ , ಶುಭಮ ಬಿಡಿಕರ್, ನಾಗರಾಜ ಪಾಟೀಲ್, ಮಂಜುನಾಥ ಮಾದಾರ, ಪ್ರ್ಯಾಂಚ್ಯಾಸಿ ಮಾಲೀಕರಾದ ಕಿರಣ ಶೆಟವಣ್ಣವರ, ಜಾಕಿ ಫರ್ನಾಂಡೀಸ್, ಅನಿಲ ಬೆಳಗಾಂವಕರ, ಮಂಜು ದಲಾಲ, ವಿವೇಕ ದಾನಪ್ಪನವರ, ಉಮೇಶ ಘಟಕಾಂಬಳೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts