More

    ಶೀನಾ ಬೋರಾ ಕೊಲೆ ಪ್ರಕರಣ: ಪ್ರಮುಖ ಆರೋಪಿ ಪೀಟರ್​ ಮುಖರ್ಜಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್​

    ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪೀಟರ್​ ಮುಖರ್ಜಿಗೆ ಬಾಂಬೆ ಹೈಕೋರ್ಟ್​ ಗುರುವಾರ ಜಾಮೀನು ನೀಡಿದೆ. ಹೀಗಿದ್ದರೂ ಪೀಟರ್​ ಮುಖರ್ಜಿ ಜೈಲಿನಿಂದ ಸದ್ಯಕ್ಕೆ ಹೊರಬರಲು ಸಾಧ್ಯವಿಲ್ಲ.

    ತಾನು ನೀಡಿರುವ ಜಾಮೀನು ತೀರ್ಪಿಗೆ ಬಾಂಬೆ ಹೈಕೋರ್ಟ್​ ಆರು ವಾರಗಳ ಕಾಲ ತಡೆ ನೀಡಿದ್ದು, ಅಲ್ಲಿಯವರೆಗೆ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋಗಬಹುದಾಗಿದೆ. ಶೀನಾ ಬೋರಾ ಪ್ರಕರಣದಲ್ಲಿ ಆರೋಪಿ ಪೀಟರ್​ ಮುಖರ್ಜಿ ವಿರುದ್ಧ ಬಲವಾದ ಸಾಕ್ಷಿ ಇಲ್ಲದ ಕಾರಣದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಜೈಲು ವಾಸಿಯಾಗಿದ್ದ ಮುಖರ್ಜಿಗೆ ಹೈಕೋರ್ಟ್​ ಜಾಮೀನು ನೀಡಿದೆ.

    ಆರೋಪಿಯ ಆರೋಗ್ಯ ಸ್ಥಿತಿಯೂ ಕೂಡ ಜಾಮೀನು ನೀಡಲು ಕಾರಣವಾಗಿದೆ. ಅಲ್ಲದೆ, 2 ಲಕ್ಷ ರೂ. ಪಾವತಿಸುವಂತೆ ಕೋರ್ಟ್​ ಆರೋಪಿಗೆ ಸೂಚಿಸಿದೆ. ಸದ್ಯ ಮಕ್ಕಳಾದ ರಾಹುಲ್ ಮತ್ತು ವಿಧಿ ಅವರನ್ನು ಸಂಪರ್ಕಿಸಲು ಪೀಟರ್​ ಮುಖರ್ಜಿಗೆ ಕೋರ್ಟ್​ ಅನುಮತಿಯನ್ನು ನೀಡಿಲ್ಲ.

    ಶೀನಾ ಬೋರಾ ಕೊಲೆ ಪ್ರಕರಣವೇನು?
    ಪೀಟರ್​ ಮುಖರ್ಜಿ ಅವರು ಮಾಜಿ ಮಾಧ್ಯಮ ಕಾರ್ಯನಿರ್ವಾಹಕರು. ತಮ್ಮ ಮಾಜಿ ಪತ್ನಿ ಇಂದ್ರಾಣಿ ಮುಖರ್ಜಿ ಮಗಳು ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿಯಾಗಿದ್ದಾರೆ. 2012ರಲ್ಲಿ ಶೀನಾ ಬೋರಾ ಕೊಲೆಯಾಗಿತ್ತು. ಬಳಿಕ 2015ರಲ್ಲಿ ಪೀಟರ್​ ಮುಖರ್ಜಿಯನ್ನು ಬಂಧಿಸಲಾಗಿತ್ತು.

    ಕಳೆದ ವರ್ಷ ನವೆಂಬರ್​ನಲ್ಲಿ ಜಾಮೀನು ಕೋರಿ ಪೀಟರ್​ ಮುಖರ್ಜಿ ಸಿಬಿಐ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸಿಬಿಐ ವಕೀಲರು ಪ್ರಕರಣ ಸಂಬಂಧ ಸಿಬಿಐ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಪೀಟರ್​ಗೆ ಎಲ್ಲವೂ ಗೊತ್ತಿದೆ. ಪೀಟರ್​ ಸೈಲೆಂಟ್​ ಕಿಲ್ಲರ್​ ಎಂದು ಹೇಳಿ, ಜಾಮೀನು ನೀಡಲು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕೊಲೆ ನಡೆದಾಗ ನಾನು ಭಾರತದಲ್ಲಿ ಇರಲೇ ಇಲ್ಲ ಎಂದು ಪೀಟರ್​ ವಾದಿಸಿದ್ದರು.

    ಇದೇ ಪ್ರಕರಣದಲ್ಲಿ ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿಯವರನ್ನು 2015ರಲ್ಲಿ ಬಂಧಿಸಲಾಗಿದ್ದು, ಈ ಕ್ಷಣದವರೆಗೂ ಜೈಲು ವಾಸಿಯಾಗಿದ್ದಾರೆ. ಇವರೊಂದಿಗೆ ಮಾಜಿ ಪತಿ ಸಂಜೀವ್​ ಖನ್ನಾ ಮತ್ತು ಪೀಟರ್​ ಮುಖರ್ಜಿ ಕೂಡ ಬಂಧಿಸಲಾಗಿತ್ತು. ಆಸ್ತಿ ವಿವಾದವೇ ಕೊಲೆಗೆ ಕಾರಣ ಎಂದು ಸಿಬಿಐ ವಾದಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts