More

    ಮನೆಯವರ ವಿರೋಧದ ನಡುವೆಯೂ ಅದನ್ನೇ ಆರಿಸಿಕೊಂಡ್ಲು ಈ ಮೂರು ಮಕ್ಕಳ ತಾಯಿ..!

    ನವದೆಹಲಿ: ಹೆಚ್ಚಿನ ವಿದ್ಯಾಭ್ಯಾಸ ಇಲ್ಲದ್ದರಿಂದ ಈಕೆ ಬೇರೆಯದೇ ಕನಸು ಕಂಡಿದ್ದಳು. ಆದರೆ ಅದಕ್ಕೆ ಮನೆಯವರ ವಿರೋಧವಿತ್ತು. ಅದನ್ನು ಮಾಡುವುದು ಬೇಡವೇ ಬೇಡ ಎಂದರೂ ತನ್ನ ಹಠ ಬಿಡದ ಈ ಮಹಿಳೆ ಮೂರು ಮಕ್ಕಳಾದ ಮೇಲೆ ತನ್ನ ಕನಸು ನನಸಾಗಿಸಿಕೊಂಡಿದ್ದಾಳೆ.

    ಈಕೆಯ ಹೆಸರು ಪೂಜಾದೇವಿ. ಜಮ್ಮು ಮತ್ತು ಕಾಶ್ಮೀರದ ಕತುವಾ ಜಿಲ್ಲೆಯ ನಿವಾಸಿಯಾಗಿರುವ ಈ ಮಹಿಳೆ ಡಿಸೆಂಬರ್ 24ರಂದು ತನ್ನ ಬಹುವರ್ಷಗಳ ಕನಸನ್ನು ನನಸಾಗಿಸಿಕೊಂಡಿದ್ದಾಳೆ. ಮಾತ್ರವಲ್ಲ, ಇಂಥದ್ದೊಂದು ಕನಸನ್ನು ನನಸಾಗಿಸಿಕೊಂಡ ರಾಜ್ಯದ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೂ ಈಕೆ ಪಾತ್ರರಾಗಿದ್ದಾರೆ. ಇವರ ಸಾಧನೆಯನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕೂಡ ಟ್ವೀಟ್​ ಮಾಡಿ ಶ್ಲಾಘಿಸಿದ್ದಾರೆ.

    ನಾನು ನನ್ನ ಮನೆಯವರ ವಿರೋಧದ ನಡುವೆಯೂ ನನ್ನ ಕನಸನ್ನು ಈಡೇರಿಸಿಕೊಂಡಿದ್ದೇನೆ. ಆರಂಭದಲ್ಲಿ ನನ್ನ ಕುಟುಂಬ ಇದಕ್ಕೆ ಸಮ್ಮತಿ ನೀಡಿರಲಿಲ್ಲ. ಆದರೆ ನಾನು ನನ್ನ ಹಠ ಬಿಡಲಿಲ್ಲ. ನಾನು ಹೆಚ್ಚಿನ ವಿದ್ಯಾವಂತೆ ಅಲ್ಲದ್ದರಿಂದ ಬೇರೆ ಕೆಲಸಗಳು ಸಿಗುತ್ತಿರಲಿಲ್ಲ. ಇದು ನನಗೆ ಸರಿಯಾದ ಉದ್ಯೋಗ ಅನಿಸಿತು. ವಾಣಿಜ್ಯ ವಾಹನಗಳನ್ನು ಓಡಿಸುವುದು ಹೇಗೆ ಎಂಬುದನ್ನು ತಿಳಿಯಲೆಂದೇ ಆರಂಭದಲ್ಲಿ ನಾನು ಟ್ಯಾಕ್ಸಿ ಓಡಿಸಿದೆ. ಮಾತ್ರವಲ್ಲ ನಾನು ಟ್ರಕ್​ ಕೂಡ ಓಡಿಸಿದ್ದೆ ಎನ್ನುತ್ತಾರೆ ಪೂಜಾ ದೇವಿ.

    ಮನೆಯವರ ವಿರೋಧದ ನಡುವೆಯೂ ಅದನ್ನೇ ಆರಿಸಿಕೊಂಡ್ಲು ಈ ಮೂರು ಮಕ್ಕಳ ತಾಯಿ..!
    ಪೂಜಾ ದೇವಿ

    ಇದನ್ನೂ ಓದಿ: ಮಗನ ಮದುವೆಗೆ ನೆರವಾದದ್ದೇ ತಪ್ಪಾಯ್ತು: ಗಂಡ ಹತ್ತಿರ ಸೇರಿಸುತ್ತಿಲ್ಲ- ಅವರ ಆಸ್ತಿ ಸಿಗುವುದಿಲ್ಲವೆ?

    ಹೀಗೆ ಜಮ್ಮು-ಕಾಶ್ಮೀರದಲ್ಲಿ ಬಸ್​ ಚಲಾಯಿಸುತ್ತಿರುವ ರಾಜ್ಯದ ಪ್ರಪ್ರಥಮ ಮಹಿಳೆ ಎಂದೆನಿಸಿಕೊಂಡಿರು ಪೂಜಾ ದೇವಿ, ಬರೀ ಪುರುಷರಷ್ಟೇ ಪ್ರಯಾಣಿಕ ವಾಹನ ಚಲಾಯಿಸಬಹುದು ಎಂಬ ಮಿಥ್ಯೆಯನ್ನು ಹೋಗಲಾಡಿಸುವುದು ನನ್ನ ಆಸೆಯಾಗಿತ್ತು. ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಮನೆಯವರ ವಿರೋಧ ಎದುರಿಸುತ್ತಿರುವ, ಸವಾಲಿನ ಕೆಲಸಗಳನ್ನು ಆರಿಸಿಕೊಳ್ಳಲು ಕನಸು ಕಾಣುತ್ತಿರುವ ಎಲ್ಲ ಮಹಿಳೆಯರಿಗೆ ನಾನು ಈ ಮೂಲಕ ಒಂದು ಸಂದೇಶ ನೀಡುತ್ತಿದ್ದೇನೆ ಎಂದಿರುವ ಪೂಜಾ, ನೀವೆಲ್ಲ ನಿಮ್ಮ ಕನಸಿನಂತೆಯೇ ಉದ್ಯೋಗ ಆರಿಸಿಕೊಳ್ಳಿ ಎಂಬುದಾಗಿ ಹೇಳಿದ್ದಾರೆ. (ಏಜೆನ್ಸೀಸ್)

    ವೈಕುಂಠ ಏಕಾದಶಿಯಂದು ತಿರುಮಲನಿಗೆ ಬಂಪರ್‌: ಒಂದೇ ದಿನ ಹರಿದುಬಂತು ದಾಖಲೆಯ ಹಣ

    ವಿಷ್ಣುವರ್ಧನ್​ ಪುತ್ಥಳಿ ಧ್ವಂಸ; ಅಭಿಮಾನಿಗಳಿಂದ ಪ್ರತಿಭಟನೆ, ಆಕ್ರೋಶ

    ಮಕ್ಕಳಿಗಾಗಿ ಮದುವೆಯಾದರು: ಎರಡನೇ ಪತ್ನಿಯಾದ ಮಾತ್ರಕ್ಕೆ ನನಗೆ ಬಯಕೆಗಳು ಇರುವುದು ತಪ್ಪೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts