More

    ಮದ್ದೂರಲ್ಲಿ ಶೌರ್ಯ ಜಾಗರಣ ರಥಯಾತ್ರೆ

    ಮದ್ದೂರು: ಸನಾತನವಾದ ಹಿಂದು ಧರ್ಮವನ್ನು ಉಳಿಸಲು ಇಂದು ಪಕ್ಷತೀತವಾಗಿ ಹಾಗೂ ಜಾತ್ಯಾತೀತವಾಗಿ ನಾವೆಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕು ಎಂದು ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯ ನಾರಾಯಣಜೀ ಸಲಹೆ ನೀಡಿದರು.

    ಪಟ್ಟಣದ ಸಂಜಯ ಟಾಕೀಸ್ ಬಳಿ ಬುಧವಾರ ಶೌರ್ಯ ಜಾಗರಣ ರಥಯಾತ್ರೆ ಹಾಗೂ ಶೋಭಾ ಯಾತ್ರೆ ಮತ್ತು ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಸನಾತನ ಹಿಂದು ಧರ್ಮವನ್ನು ನಾಶ ಮಾಡಲು ಇತರ ಧರ್ಮಗಳು ಹೊಂಚು ಹಾಕುತ್ತಿವೆ. ಇದಕ್ಕೆ ಅವಕಾಶ ಕೊಡಬಾರದು. ಮೊಘಲರು, ಮುಸ್ಲಿಂ ದೊರೆಗಳು ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದ ಕಾಲ ಅದು. ಆ ಕಾಲದಲ್ಲಿ ದುಷ್ಟಶಕ್ತಿಗಳನ್ನು ಮೆಟ್ಟಿನಿಂತು ಹಿಂದು ಸಮಾಜವನ್ನು ಅನೇಕರು ಉಳಿಸಿದ್ದಾರೆ. ಅದರ ಪರಿಣಾಮ ನಾವು, ನೀವೆಲ್ಲಾ ಹಿಂದುಗಳಾಗಿ ಉಳಿದಿದ್ದೇವೆ ಎಂದರು.

    ಸನಾತನ ಧರ್ಮಕ್ಕೆ ಲಕ್ಷಾಂತರ ವರ್ಷಗಳ ಇತಿಹಾಸವಿದೆ. ಸಾವಿರ ವರ್ಷಗಳ ಹಿಂದೆ ಬಂದ ಎರಡು ಮತಗಳು ಜಗತ್ತಿಗೆ ತಲೆನೋವಾಗಿ ಪರಿಣಮಿಸಿವೆ. ಇಂತಹ ಸವಾಲುಗಳನ್ನು ಎದುರಿಸಲು ಹಿಂದು ಧರ್ಮ ಇನ್ನು ಸಾವಿರಾರು ವರ್ಷ ಮುನ್ನುಗ್ಗಬೇಕು. ಅದಕ್ಕಾಗಿ ಇಂದಿನ ಹಿಂದು ಸಮಾಜ ಜಾತಿ, ಮತ ಬಿಟ್ಟು ಒಂದಾಗಬೇಕು ಎಂದರು.

    ಹಿಂದುತ್ವದ ಉಳಿವಿಗಾಗಿ, ಹಿಂದು ಸಮಾಜದ ರಕ್ಷಣೆಗಾಗಿ, ಹಿಂದು ಸಹೋದರ, ಸಹೋದರಿಯರ ಮನದಲ್ಲಿ ರಾಷ್ಟ್ರೀಯ ದೇಶಭಕ್ತಿ ಭಾವನೆಯನ್ನು ಜಾಗೃತಗೊಳಿಸಲು 1964 ರಲ್ಲಿ ವಿಶ್ವ ಹಿಂದು ಪರಿಷತ್ ಪ್ರಾರಂಭವಾಗಿ ಅವಿರತರಾಗಿ ಶ್ರಮಿಸುತ್ತಿದೆ. ಧರ್ಮ ರಕ್ಷಣೆಯ ಪವಿತ್ರ ಕಾರ್ಯದೊಂದಿಗೆ 59 ವಸಂತಗಳನ್ನು ಪೂರೈಸಿ 60 ನೇ ವರ್ಷಾಚರಣೆಯಲ್ಲಿ ಈ ಶೌರ್ಯ ಜಾಗರಣ ರಥಯಾತ್ರೆ ಹಮ್ಮಿಕೊಂಡಿರುವುದು ನಮ್ಮಗೆಲ್ಲ ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts