More

    ಷಟ್ಕರ್ಮದಿಂದ ಕೊಬ್ಬು- ಶ್ಲೇಷ್ಮ-ತ್ರಿದೋಷ ಸಮತೋಲನ ಸಾಧ್ಯ

    ಯೋಗ ಕ್ಷೇಮ ಹಠಯೋಗವು ಆಸನ, ಪ್ರಾಣಾಯಾಮ, ಮುದ್ರೆ ಹಾಗೂ ನಾದಾನುಸಂಧಾನ ಎಂಬ ನಾಲ್ಕು ಸಾಧನಾ ಅಧ್ಯಾಯದಿಂದ ಕೂಡಿದೆ. ಇವುಗಳಲ್ಲಿ ‘ಷಟ್ಕರ್ಮ’ ಎಂಬುದು ಶರೀರದ ಮಲಗಳನ್ನು ಶುದ್ಧೀಕರಿಸಲು, ತ್ರಿದೋಷ ನಿಯಂತ್ರಿಸುವ ಪ್ರಾಯೋಗಿಕ ಶಾಸ್ತ್ರವಾಗಿದೆ. ಇದು ಬಹಳ ನಿಖರ ಹಾಗೂ ಕ್ರಮಬದ್ಧ ವಿಜ್ಞಾನವಾಗಿದೆ. ‘ಷಟ್’ ಎಂದರೆ ‘ಆರು’. ಕರ್ಮ ಎಂದರೆ ‘ಕ್ರಿಯೆ’. ಷಟ್ಕರ್ಮವು ಶುದ್ಧೀಕರಣ ಅಭ್ಯಾಸದ ಆರು ಗುಂಪುಗಳಾಗಿವೆ. ಇದರ ಮುಖ್ಯ ಉದ್ದೇಶ ಎರಡು ಮುಖ್ಯ ಪ್ರಾಣವಾಹಿನಿಗಳಾದ ಇಡಾ ಮತ್ತು ಪಿಂಗಳ ನಾಡಿಗಳ ನಡುವೆ ಸಾಮರಸ್ಯವನ್ನು ತರುವುದು. ಆ ಮೂಲಕ ದೈಹಿಕ ಮತ್ತು ಮಾನಸಿಕ ಪರಿಶುದ್ಧತೆ ಹಾಗೂ ಸಮತೋಲನವನ್ನು ಪಡೆಯುವುದು.

    ಹಠಯೋಗ ಪ್ರದೀಪಿಕಾ (2.21)ದಲ್ಲಿ ಸ್ವಾತ್ಮಾರಾಮಸೂರಿ ಎಂಬ ಹಠಯೋಗಿ ಷಟ್ಕರ್ಮದ ಅವಶ್ಯಕತೆಯನ್ನು ಈ ರೀತಿ ತಿಳಿಸಿದ್ದಾರೆ.

    ಮೇದಶ್ಲೇಷ್ಮಾಧಿಕಃ ಪೂರ್ವಂ ಷಟ್ಕರ್ವಣಿ ಸಮಾಚರೇತ್| ಅನ್ಯಸ್ತು ನಾಚರೇತ್ತಾನಿ ದೋಷಾಣಾಂ ಸಮಭಾವತಃ ||

    ಕೊಬ್ಬು ಅಥವಾ ಶ್ಲೇಷ್ಮವು ಅಧಿಕವಾಗಿದ್ದಾಗ (ಪ್ರಾಣಾ ಯಾಮದ) ಮೊದಲು ಷಟ್ಕರ್ಮ ಗಳನ್ನು ಅಥವಾ ಶುದ್ಧೀಕರಣದ ಆರು ವಿಧಾನಗಳನ್ನು ಅಭ್ಯಾಸ ಮಾಡಬೇಕು. ಈ ದೋಷಗಳು (ವಾತ, ಪಿತ್ತ, ಕಫ) ನಿಯಂತ್ರಣದಲ್ಲಿ ರುವವರು ಇದನ್ನು ಮಾಡಬೇಕಾಗಿಲ್ಲ. ಆಯುರ್ವೆದ ಮತ್ತು ಹಠಯೋಗಗಳೆರಡರ ಪ್ರಕಾರ ಈ ಮೂರು ದೋಷಗಳ ಅಸಮತೋಲನ ವ್ಯಾಧಿಗಳಿಗೆ ಕಾರಣವಾಗುತ್ತದೆ.

    ವಿಷಯುಕ್ತ ವಸ್ತುಗಳನ್ನು ನಿವಾರಿಸಿ ಶರೀರವನ್ನು ಶುದ್ಧೀಕರಿಸಲು ಮತ್ತು ಆಧ್ಯಾತ್ಮಿಕ ಪಥದಲ್ಲಿ ಕ್ಷೇಮಕರವಾದ ಯಶಸ್ವೀ ಮುನ್ನಡೆಯನ್ನು ಸಾಧಿಸಲು ಈ ಷಟ್ಕರ್ಮವನ್ನು ಪ್ರಾಣಾಯಾಮ ಮತ್ತಿತರ ಯೋಗಾಭ್ಯಾಸದ ಮುನ್ನ ಮಾಡುತ್ತಾರೆ.

    ಎಚ್ಚರಿಕೆ: ಪರಿಣಾಮಕಾರಿ ಹಾಗೂ ಪ್ರಬಲವಾದ ಈ ಅಭ್ಯಾಸವನ್ನು ಪುಸ್ತಕ ಓದಿಯಾಗಲೀ ಅಥವಾ ಅನುಭವ ಇಲ್ಲದಿರುವವರಿಂದಾಗಲಿ ಕಲಿತುಕೊಳ್ಳುವುದು ಎಂದಿಗೂ ಸಲ್ಲದು. ಶಾಸ್ತ್ರದ ಪ್ರಕಾರ ಗುರುಮುಖೇನ ಕಲಿತವರು ಮಾತ್ರ ಇತರರಿಗೆ ಕಲಿಸಬಹುದು. ಅವರವರ ಅಗತ್ಯಗಳಿಗೆ ಅನುಗುಣವಾಗಿ ಇದನ್ನು ಹೇಗೆ ಮತ್ತು ಯಾವಾಗ ಮಾಡಬೇಕು ಎಂಬುದನ್ನು ವೈಯಕ್ತಿಕವಾಗಿ ತಿಳುವಳಿಕೆ ನೀಡುವುದು ಅಗತ್ಯ.

    ಷಟ್ಕರ್ಮಗಳು

    • 1. ಧೌತಿ: ಎಂದರೆ ಶುದ್ಧೀಕರಣ. ಈ ಸರಣಿಯನ್ನು ಮೂರು ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದೆ. ಅಂತರ್ ಧೌತಿ ಅಥವಾ ಅಂತರಿಕ ಶುದ್ಧೀಕರಣ, ಶೀರ್ಷಧೌತಿ ಅಥವಾ ತಲೆಯ ಶುದ್ಧೀಕರಣ (ಸಾಂಪ್ರದಾಯಿಕವಾಗಿ ಇದನ್ನು ದಂತ ಧೌತಿ ಎಂದು ಕರೆಯುತ್ತಾರೆ. ಮತ್ತು ಹೃದ್​ಧೌತಿ ಎಂದರೆ ಎದೆಯ ಭಾಗದ ಶುದ್ಧೀಕರಣ. ಆಂತರಿಕ ಶುದ್ಧೀಕರಣ ವಿಧಾನಗಳು ಬಾಯಿಯಿಂದ ಆರಂಭಗೊಂಡು ಗುದದ್ವಾರದವರೆಗೆ ಇಡೀ ಜೀರ್ಣಾಂಗ ಮಾರ್ಗವನ್ನು ಸ್ವಚ್ಚಗೊಳಿಸುತ್ತವೆ. ಇವುಗಳನ್ನು ನಾಲ್ಕು ರೀತಿಯ ಅಭ್ಯಾಸಗಳಾಗಿ ವಿಂಗಡಿಸಲಾಗಿದೆ.
    • ಶಂಖಪ್ರಕ್ಷಾಳನ (ವಾರಿಸಾರ ಧೌತಿ) ಮತ್ತು ಲಘು ಶಂಖಪ್ರಕ್ಷಾಳನ, ಕರುಳುಗಳ ಶುದ್ಧೀಕರಣ. ್ಞಗ್ನಿಸಾರ ಕ್ರಿಯೆ- ವಹ್ನೀಸಾರ ಧೌತಿ. ಜೀರ್ಣಾಗ್ನಿಯನ್ನು ಚುರುಕುಗೊಳಿಸುವುದು. ್ಞುಂಜಲ ಕ್ರಿಯೆ (ವಮನ ಧೌತಿ), ಹೊಟ್ಟೆಯನ್ನು ನೀರಿನಿಂದ ಸ್ವಚ್ಚಗೊಳಿಸುವ ಕ್ರಿಯೆ. ್ಞತ್ಸರ ಧೌತಿ, ಆಳಿಯಿಂದ ಕರುಳುಗಳನ್ನು ಶುದ್ಧೀಕರಿಸುವ ತಂತ್ರ.
    • 2. ನೇತಿ: ಇದು ನಾಸಿಕದ್ವಾರಗಳನ್ನು ಸ್ವಚ್ಛಗೊಳಿಸುವ ಸರಳ ಪ್ರಕ್ರಿಯೆ. ಇದರಲ್ಲಿ ಜಲನೇತಿ ಮತ್ತು ಸೂತ್ರನೇತಿ ಎಂದು ಎರಡು ವಿಧ.
    • 3. ನೌಲಿ: ಉದರದ ಅವಯವಗಳನ್ನು ಮರ್ದಿಸುವ ಮತ್ತು ಬಲಿಷ್ಠಗೊಳಿಸುವ ವಿಧಾನ.
    • 4. ಬಸ್ತಿ: ದೊಡ್ಡ ಕರುಳನ್ನು ತೊಳೆಯುವ ಮತ್ತು ಪಟುಗೊಳಿಸುವ ವಿಧಾನ
    • 5. ಕಪಾಲಭಾತಿ: ಮಿದುಳಿನ ಮುಂಭಾಗವನ್ನು ಶುದ್ಧೀಕರಿಸುವ ಉಸಿರಾಟದ ವಿಧಾನ.
    • 6. ತ್ರಾಟಕ: ಕಣ್ಣನ್ನು ಶುದ್ಧೀಕರಿಸುವ ಏಕಾಗ್ರತೆಯ ಶಕ್ತಿಯನ್ನು ಬೆಳೆಸುವ ಸಲುವಾಗಿ ಯಾವುದಾದರೊಂದು ಬಿಂದುವನ್ನು ಪ್ರತೀಶವನ್ನು ಎವೆಯಿಕ್ಕದೆ ನೋಡುವ ಒಂದು ಅಭ್ಯಾಸ. ಷಟ್ಕರ್ಮಗಳು ಆರೇ ಇದ್ದರೂ, ಪ್ರತಿಯೊಂದು ಕ್ರಿಯೆಯೂ ಹಲವಾರು ಬಗೆಯ ಅಭ್ಯಾಸವನ್ನು ಒಳಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts