More

    ಸರ್ಕಾರಿ ಸಂಸ್ಥೆಯ ಬಿಎಚ್​ಇಎಲ್​ ಷೇರು ರೂ 203ರಿಂದ ರೂ. 300ರವರೆಗೆ ಹೆಚ್ಚಾಗಬಹುದು: ಪರಿಣತರು ಏನು ಹೇಳುತ್ತಾರೆ?

    ಮುಂಬೈ: ಸರ್ಕಾರಿ ಸ್ವಾಮ್ಯದ ಬಿಎಚ್​ಇಎಲ್​ ಸಂಸ್ಥೆಯ ಷೇರು ಬೆಲೆಯು ಮುಂದಿನ ದಿನಗಳಲ್ಲಿ ಸಾಕಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಪರಿಣತರು ಅಂದಾಜಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಬಿಎಚ್​ಇಎಲ್​ ಕಂಪನಿಯ ಷೇರು ಬೆಲೆಯು 300 ರೂಪಾಯಿವರೆಗೆ ಏರಬಹುದು ಎಂದು ದಲ್ಲಾಳಿ ಸಂಸ್ಥೆಗಳು (ಬ್ರೋಕರೇಜ್​ ಫರ್ಮ್​) ಅಂದಾಜಿಸಿವೆ. ಅಂದರೆ ಈ ಷೇರು 50% ರಷ್ಟು ಏರಿಕೆ ಕಾಣಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ.

    ಬಿಎಚ್​ಇಎಲ್​ ಷೇರು ಬೆಲೆ ಬುಧವಾರದಂದು (ಜ. 17) ಶೇಕಡಾ 2.02 ಏರಿಕೆ ಕಂಡು, 207.10 ರೂಪಾಯಿಗೆ ತಲುಪಿದೆ.

    ಕಲ್ಲಿದ್ದಲು ಚಾಲಿತ ವಿದ್ಯುತ್ ಸ್ಥಾವರಗಳ ಕುರಿತು ತನ್ನ ಸಂಶೋಧನೆಯು ಪ್ರಗತಿಯಲ್ಲಿದೆ ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ. 2024 ರ ಹಣಕಾಸು ವರ್ಷದಲ್ಲಿ ಬಿಎಚ್​ಇಎಲ್​ ಒಟ್ಟು 65,000 ಕೋಟಿ ರೂಪಾಯಿ ಮೀರಿದ ವಹಿವಾಟು ನಡೆಸಲಿದ್ದು, ಇದರ ಉತ್ಪಾದನೆ ಪ್ರಮಾಣವು 30-40 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ಸಂಸ್ಥೆ ನಿರೀಕ್ಷಿಸುತ್ತದೆ. ಬಿಎಚ್​ಇಲ್​ ಷೇರು ಬೆಲೆಗಳು 278 ರೂಪಾಯಿ ತಲುಪಬಹುದೆಂದು ಈ ಸಂಸ್ಥೆ ಹೇಳಿದೆ.

    ಈ ತಿಂಗಳ ಆರಂಭದಲ್ಲಿ, ಮತ್ತೊಂದು ಬ್ರೋಕರೇಜ್ ಸಂಸ್ಥೆಯು ಬಿಎಚ್​ಇಎಲ್​ ಕುರಿತು ಟಿಪ್ಪಣಿಯನ್ನು ಬಿಡುಗಡೆ ಮಾಡಿದ್ದು, ಈ ಷೇರಿನ ಮೇಲೆ 230 ರೂಪಾಯಿ ತಲುಪಬಹುದು ಎಂದು ಹೇಳಿದೆ.

    ಇನ್ನು ಕೆಲ ವಿಶ್ಲೇಷಕರು 278 ರೂಪಾಯಿ, 265 ರೂಪಾಯಿಗೆ ಈ ಷೇರು ಮಾರಾಟದ ಗುರಿಯನ್ನು ನಿಗದಿಪಡಿಸಿದ್ದಾರೆ.

    ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಇಂಜಿನಿಯರಿಂಗ್, ಇಂಧನ ಉತ್ಪಾದನೆ, ಇಂಧನ ಘಟಕ ಉಪಕರಣಗಳ ತಯಾರಿಕೆ ವಲಯದ ಅತಿದೊಡ್ಡ ಕಂಪನಿಯಾಗಿದೆ. ಇದನ್ನು 1964 ರಲ್ಲಿ ಸ್ಥಾಪಿಸಲಾಗಿದೆ. ಈ ಜಾಗತಿಕವಾಗಿ ವಿದ್ಯುತ್ ಉಪಕರಣಗಳ ಪ್ರಮುಖ ತಯಾರಕ ಕಂಪನಿ ಇದಾಗಿದೆ. ಆತ್ಮನಿರ್ಭರ ಭಾರತವನ್ನು ರೂಪಿಸುವಲ್ಲಿ ಮೊದಲ ಮತ್ತು ಪ್ರಮುಖ ಕೊಡುಗೆ ನೀಡಿದ ಕಂಪನಿಯಾಗಿದೆ.

    ಇಂಧನ, ಸಾರಿಗೆ, ವಿದ್ಯುತ್ , ತೈಲ ಮತ್ತು ಅನಿಲ ಮತ್ತು ಇತರ ಅನೇಕ ಕೈಗಾರಿಕಾ ಮಾರುಕಟ್ಟೆಗಳಿಗೆ ಉತ್ಪನ್ನ ಮತ್ತು ಸೇವೆಗಳನ್ನು ಇದು ಒದಗಿಸುತ್ತದೆ.

    ಕಂಪನಿಯು ವ್ಯವಹಾರದ ಮೂರು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ: ಇಂಧನ, ಉದ್ಯಮ ಮತ್ತು ಅಂತರರಾಷ್ಟ್ರೀಯ ಕಾರ್ಯಾಚರಣೆಗಳು.

    ಬಿಎಚ್​ಇಎಲ್​ನಿಂದ ತಯಾರಿಸಲಾದ ಜಾಗತಿಕವಾಗಿ ಸ್ಥಾಪಿಸಲಾದ ವಿದ್ಯುತ್-ಉತ್ಪಾದಿಸುವ ಉಪಕರಣಗಳು 194 GW ಗಿಂತ ಹೆಚ್ಚಿನದಾಗಿದೆ, ಇದು ಇಂಧನ ಘಟಕಗಳ ಉಪಕರಣಗಳ ಭಾರತೀಯ ಉತ್ಪಾದಕರಲ್ಲಿ ನಿರ್ವಿವಾದವಾಗಿ ಅಗ್ರಗಣ್ಯ ಕಂಪನಿಯಾಗಿದೆ. 1000 ಕ್ಕೂ ಹೆಚ್ಚು ಜಲ, ಉಷ್ಣ ಪರಮಾಣು, ಪರಮಾಣು, ಅನಿಲ ಮತ್ತು ಸೌರ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳನ್ನು ನಿರ್ಮಿಸಿದೆ.

    ಈ ಸಂಸ್ಥೆಯ ಷೇರುಗಳಲ್ಲಿ ಜಾಣತನದಿಂದ ಹೂಡಿಕೆ ಮಾಡಿದರೆ ಸಾಕಷ್ಟು ಲಾಭ ಗಳಿಸಬಹುದು. ಹೂಡಿಕೆ ಪರಿಣತರ ಸಮಾಲೋಚನೆಯೊಂದಿಗೆ ಈ ನಿಟ್ಟಿನಲ್ಲಿ ಮುಂದುವರಿಯುವುದು ಸೂಕ್ತ.

    ಈ ಮಲ್ಟಿಬ್ಯಾಗರ್​ ಸ್ಟಾಕ್ ಬೆಲೆ ಒಂದೇ ವರ್ಷದಲ್ಲಿ​ 375% ಹೆಚ್ಚಳ: ರೂ 1,300 ಕೋಟಿ ಆರ್ಡರ್ ಬುಕ್, 52 ವಾರಗಳ ಗರಿಷ್ಠ ಏರಿಕೆ

    ಮ್ಯೂಚುವಲ್​ ಫಂಡ್​ ಸಿಪ್​ ಮಹಿಮೆ: ನೀವು 10 ವರ್ಷ ಪ್ರತಿ ತಿಂಗಳು 20 ಸಾವಿರ ರೂ. ತೊಡಗಿಸಿದ್ದರೆ ಈಗ ಕೋಟ್ಯಧೀಶರಾಗುತ್ತಿದ್ದೀರಿ!!!

    ನೀವು ಶ್ರೀಮಂತರಾಗಬೇಕೆ, ಕುಬೇರರಾಗಬೇಕೆ?: ಈ ಹವ್ಯಾಸಗಳನ್ನು ರೂಢಿಸಿಕೊಳ್ಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts