More

    ರೂ 2641ರಿಂದ 9ಕ್ಕೆ ಕುಸಿದಿದ್ದ ರಿಲಯನ್ಸ್​ ಕಂಪನಿ ಷೇರು: 2 ದಿನಗಳಲ್ಲಿ 20% ಏರಿಕೆಯಾಗಿದ್ದೇಕೆ?

    ಮುಂಬೈ: ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ರಿಲಯನ್ಸ್ ಇನ್‌ಫ್ರಾ ಷೇರುಗಳ ಬೆಲೆ ಸೋಮವಾರ ಶೇಕಡಾ 10 ಕ್ಕಿಂತ ಹೆಚ್ಚು ಏರಿಕೆ ಕಂಡು 262.20 ರೂ. ತಲುಪಿತು. ಈ ಮೂಲಕ ಈ ಕಂಪನಿಯ ಷೇರುಗಳು ಸೋಮವಾರ 52 ವಾರಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ. ಶುಕ್ರವಾರ ಕೂಡ ಈ ಷೇರುಗಳ ಬೆಲೆಯಲ್ಲಿ ಉತ್ತಮ ಏರಿಕೆ ಕಂಡುಬಂದಿದೆ. ಕಳೆದ 2 ದಿನಗಳಲ್ಲಿ ಕಂಪನಿಯ ಷೇರುಗಳು 20% ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.

    ರಿಲಯನ್ಸ್ ಪವರ್ ಮತ್ತು ಐಸಿಐಸಿ ಬ್ಯಾಂಕ್‌ನೊಂದಿಗೆ ಸಾಲ ಇತ್ಯರ್ಥ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕಂಪನಿಯು ತಿಳಿಸಿದ ಹಿನ್ನೆಲೆಯಲ್ಲಿ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡುಬಂದದಿದೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 2,641 ರೂ ಇದ್ದರೆ, ಕನಿಷ್ಠ ಬೆಲೆ 8.65 ರೂ ಇದೆ.

    ಈ ಹಿಂದೆ ಈ ಕಂಪನಿಯ ಷೇಗುಗಳ ಬೆಲೆ 99% ಕ್ಕಿಂತ ಹೆಚ್ಚು ಕುಸಿದಿತ್ತು. ಕಳೆದ 4 ವರ್ಷಗಳಲ್ಲಿ, ಅನಿಲ್ ಅಂಬಾನಿ ಒಡೆತನದ ಈ ಕಂಪನಿಯ ಷೇರುಗಳಲ್ಲಿ ತ್ವರಿತ ಏರಿಕೆ ಕಂಡುಬಂದಿದೆ. ರಿಲಯನ್ಸ್ ಇನ್ಫ್ರಾ ಷೇರುಗಳ ಬೆಲೆ 4 ಜನವರಿ 2008 ರಂದು 2510.35 ರೂ. ಇತ್ತು. ಕಂಪನಿಯ ಷೇರುಗಳ ಬೆಲೆ ಮಾರ್ಚ್ 27, 2020 ರಂದು ರೂ 9.20 ಕ್ಕೆ ಕುಸಿದಿತ್ತು. ಈಗ ಈ ಷೇರುಗಳ ಬೆಲೆ ರೂ 262.20 ತಲುಪಿದೆ. ಕಳೆದ 4 ವರ್ಷಗಳಲ್ಲಿ, ರಿಲಯನ್ಸ್ ಇನ್ಫ್ರಾ ಷೇರುಗಳ ಬೆಲೆ 2750% ಕ್ಕಿಂತ ಹೆಚ್ಚು ಏರಿಕೆಯಾಗಿದೆ.

    ಕಳೆದ ಒಂದು ವರ್ಷದಲ್ಲಿ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಷೇರುಗಳ ಬೆಲೆ 75% ಕ್ಕಿಂತ ಹೆಚ್ಚು ಜಿಗಿದಿವೆ. ಕಂಪನಿಯ ಷೇರುಗಳ ಬೆಲೆ ಮಾರ್ಚ್ 20, 2023 ರಂದು 148.10 ರೂ. ಇತ್ತು. ಕಳೆದ 6 ತಿಂಗಳಲ್ಲಿ, ಈ ಷೇರುಗಳ ಬೆಲೆ ಶೇಕಡಾ 47 ರಷ್ಟು ಏರಿಕೆ ಕಂಡಿದೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳು ರೂ. 177ರಿಂದ ರೂ. 262ಕ್ಕೆ ಏರಿಕೆಯಾಗಿದೆ. ಈ ವರ್ಷ ಇಲ್ಲಿಯವರೆಗೆ ಈ ಷೇರುಗಳ ಬೆಲೆ ಅಂದಾಜು 25% ರಷ್ಟು ಹೆಚ್ಚಾಗಿದೆ. ಕಂಪನಿಯ ಷೇರುಗಳ 52 ವಾರಗಳ ಕನಿಷ್ಠ ಬೆಲೆ 131.40 ರೂ. ಇದೆ.

    ಲೋಹದ ಷೇರುಗಳಿಗೆ ಬೇಡಿಕೆ: ಸೂಚ್ಯಂಕ ಒಂದಿಷ್ಟು ಏರಿಕೆ

    ಒಂದೇ ದಿನದಲ್ಲಿ 10 ಕೋಟಿ ಷೇರುಗಳ ವಹಿವಾಟು: ಟಾಟಾ ಕಂಪನಿ ಷೇರು ಬೆಲೆ ಏರುತ್ತಿರುವುದೇಕೆ?

    2024ರ ಚುನಾವಣೆ ವರ್ಷದಲ್ಲಿ ಚಿನ್ನ ಎಷ್ಟು ಚೆನ್ನ?: ಹಳದಿ ಲೋಹದಲ್ಲಿ ಏಕೆ ಹೂಡಿಕೆ ಮಾಡಬೇಕು? ಬ್ರೋಕರೇಜ್​ ಸಂಸ್ಥೆಯ ವಿಶ್ಲೇಷಣೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts